ಮಾಂಸದಂಗಡಿಗೆ ಸಹಾಯಧನ, ಕುತೂಹಲ ಹುಟ್ಟಿಸಿದ ಸಿದ್ದರಾಮಯ್ಯ ನಡೆ

Subscribe to Oneindia Kannada

ಬೆಂಗಳೂರು, ಮಾರ್ಚ್ 15: 2017-18ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ರೈತರಿಗೆ ಬಂಪರ್ ಕೊಡುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ವಿಶೇಷ ಎಂದರೆ 7.25 ಕೋಟಿ ರೂ.ಗಳ ಘಟಕ ವೆಚ್ಚದಲ್ಲಿ 2 ಆಧುನಿಕ ಕಸಾಯಿಖಾನೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ ತಲಾ 5 ಲಕ್ಷ ರೂ.ಗಳ ವೆಚ್ಚದಲ್ಲಿ ಅಸ್ತಿತ್ವದಲ್ಲಿರುವ ಮಾಂಸದ ಅಂಗಡಿಗಳ ಆಧುನೀಕರಣ ಹಾಗೂ ಪ್ರತಿ ಅಂಗಡಿಗೆ 1.25 ಲಕ್ಷ ರೂ.ಗಳ ಸಹಾಯಧನ ನೀಡುವುದಾಗಿ ಘೋಷಿಸಿ ಹಲವರನ್ನು ಅಚ್ಚರಿಗೆ ಕೆಡವಿದ್ದಾರೆ.[ಬಜೆಟ್: ಸಾಲ ಮನ್ನಾ ಇಲ್ಲ, ನೀರಾಕ್ಕೆ ಲೈಸನ್ಸ್, ಕೃಷಿಗೆ ಸಿದ್ದು ನೀಡಿದ್ದೇನು?]

ಮುಖ್ಯವಾಗಿ ವಿಮೆ ಇಲ್ಲದ ರಾಸುಗಳು ಸತ್ತರೆ ರೈತರಿಗೆ ಪರಿಹಾರ ನೀಡುವುದಾಗಿ ಬಜೆಟಿನಲ್ಲಿ ಘೋಷಿಸಿದ್ದಾರೆ. ಇನ್ನು ರೇಷ್ಮೆ ಅಭಿವೃದ್ಧಿಗೆ ಅನುದಾನಗಳನ್ನು ನೀಡಿದ್ದಾರೆ. ಹಲವು ಸಂಸ್ಕರಣ ಘಟಕ, ಲಸಿಕೆ ತಯಾರಿಕಾ ಕೇಂದ್ರಗಳ ಸ್ಥಾಪನೆಗೂ ಮುಂದಾಗಿದ್ದಾರೆ.

ಬಜೆಟ್ ನಲ್ಲಿ ಪಶು ಸಂಗೋಪನೆ ಸಂಬಂಧಿಸಿದಂತೆ ಘೋಷಿಸಿದ ಎಲ್ಲಾ ಯೋಜನೆಗಳ ವಿವಿರ ಇಲ್ಲಿದೆ.[ಬೈಂದೂರು ತಾಲೂಕು ಘೋಷಣೆ, ಸಿಹಿ ಹಂಚಿ ಸಂಭ್ರಮಾಚರಣೆ]

ಪಶು ವೈದ್ಯಕೀಯ ಕೇಂದ್ರಗಳ ಉನ್ನತೀಕರಣ

ಪಶು ವೈದ್ಯಕೀಯ ಕೇಂದ್ರಗಳ ಉನ್ನತೀಕರಣ

302 ಪ್ರಾಥಮಿಕ ಪಶು ವೈದ್ಯಕೀಯ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಉನ್ನತೀಕರಣ. ಪ್ರಮಾಣೀಕೃತ ಉತ್ಕೃಷ್ಟ ಟಗರುಗಳ ಉತ್ಪಾದಕ ಘಟಕಗಳ ಸ್ಥಾಪನೆ.

ನೋಂದಾಯಿತ ಕುರಿ ಸಹಕಾರ ಸಂಘಗಳ ಉಪಯೋಗಕ್ಕಾಗಿ 2 ವರ್ಷಗಳಲ್ಲಿ 40 ಉಣ್ಣೆ ಮತ್ತು ಚರ್ಮ ಸಂಗ್ರಹಣಾ
ಗೋದಾಮು ನಿರ್ಮಾಣ; ಇದರಲ್ಲಿ 10 ಲಕ್ಷ ರೂ. ಘಟಕ ವೆಚ್ಚವಾಗಿದ್ದು, 7.5 ಲಕ್ಷ ಸಹಾಯಧನ ನೀಡಿದರೆ ಉಳಿದ 2.5 ಲಕ್ಷ ರೂ. ಸಹಕಾರ ಸಂಘಗಳು ನೀಡಬೇಕಾಗಿದೆ.

ಆಧುನಿಕ ಕಸಾಯಿಖಾನೆಗಳ ನಿರ್ಮಾಣ

ಆಧುನಿಕ ಕಸಾಯಿಖಾನೆಗಳ ನಿರ್ಮಾಣ

ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಮಹಾಮಂಡಳದ ಮೂಲಕ ಪ್ರಸಕ್ತ ಸಾಲಿನಲ್ಲಿ 7.25 ಕೋಟಿ ರೂ.ಗಳ ಘಟಕ ವೆಚ್ಚದಲ್ಲಿ 2 ಆಧುನಿಕ ಕಸಾಯಿಖಾನೆ ನಿರ್ಮಾಣ. ತಲಾ 5 ಲಕ್ಷ ರೂ.ಗಳ ವೆಚ್ಚದಲ್ಲಿ ಅಸ್ತಿತ್ವದಲ್ಲಿರುವ ಮಾಂಸದ ಅಂಗಡಿಗಳ ಆಧುನೀಕರಣ; ಪ್ರತಿ ಅಂಗಡಿಗೆ 1.25 ಲಕ್ಷ ರೂ.ಗಳ ಸಹಾಯಧನ.

 ಉಣ್ಣೆ ಸಂಸ್ಕರಣಾ ಕೇಂದ್ರ

ಉಣ್ಣೆ ಸಂಸ್ಕರಣಾ ಕೇಂದ್ರ

ಉಣ್ಣೆಯ ಸಮರ್ಥ ಬಳಕೆಗಾಗಿ ವೈಜ್ಞಾನಿಕ ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಗೆ ತಲಾ 2.45 ಕೋಟಿ ರೂ. ವೆಚ್ಚದಲ್ಲಿ 4 ಉಣ್ಣೆ ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡುವುದಾಗಿ ಬಜೆಟಿನಲ್ಲಿ ಘೋಷಣೆ ಮಾಡಲಾಗಿದೆ.

1 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿ ಜಿಲ್ಲೆಯ ಕುರಿಕುಪ್ಪೆ ಗ್ರಾಮದಲ್ಲಿ ಬಳ್ಳಾರಿ ಕುರಿ ಸಂವರ್ಧನೆ ಕೇಂದ್ರ ಪ್ರಾರಂಭ.

ರೇಷ್ಮೆ ಬೀಜ ಉತ್ಪಾದನೆ ಮತ್ತು ಚಾಕಿ ಸಾಕಣೆಯಲ್ಲಿ ಗುಣಮಟ್ಟ ನಿಯಂತ್ರಣ ಖಾತರಿಗೆ ಪ್ರಾಧಿಕಾರ ಸ್ಥಾಪನೆ.

ಲಸಿಕೆ ಉತ್ಪಾದನೆ

ಲಸಿಕೆ ಉತ್ಪಾದನೆ

ಕಾಲುಬಾಯಿ ಜ್ವರದ ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು 3 ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಲಸಿಕೆ ತಯಾರಿಕಾ ಘಟಕ ಸ್ಥಾಪನೆ.

ಎತ್ತುಗಳ ಸಾವಿಗೆ ಪರಿಹಾರ

ಎತ್ತುಗಳ ಸಾವಿಗೆ ಪರಿಹಾರ

ಅಪಘಾತದಲ್ಲಿ ವಿಮೆ ಮಾಡದ ಎತ್ತು / ಹಸುಗಳ ಸಾವಿನಿಂದ ನಷ್ಟ ಅನುಭವಿಸುವ ರೈತರಿಗೆ ಸಂಕಟ ನಿವಾರಣೆಗೆ ಪ್ರತಿ ರಾಸಿಗೆ 10,000 ರೂ. ಪರಿಹಾರಧನ ವಿತರಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

6 ತಿಂಗಳೊಳಗೆ ಸಾವು ಸಂಭವಿಸುವ ಕುರಿ, ಮೇಕೆ ಮರಿಗಳಿಗೆ 2,500 ರೂ. ಹಾಗೂ 6 ತಿಂಗಳ ನಂತರ ಸಾವಿಗೀಡಾಗುವ ಕುರಿ, ಮೇಕೆಮರಿಗಳಿಗೆ 5,000 ರೂ.ಗಳ ಪರಿಹಾರ.

 ರೇಷ್ಮೆ ಅಭಿವೃದ್ಧಿಗೆ ಕ್ರಮ

ರೇಷ್ಮೆ ಅಭಿವೃದ್ಧಿಗೆ ಕ್ರಮ

ಕೇಂದ್ರ ರೇಷ್ಮೆ ಮಂಡಳಿಯು ಆಯೋಜಿಸುವ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದಡಿ ಒಂದು ತಿಂಗಳ ಅವಧಿಗೆ ಗ್ರಾಮೀಣ ಪ್ರದೇಶದ ಡಿಪ್ಲೋಮಾದಾರರಿಗೆ ತರಬೇತಿ ನೀಡಲು ಆರ್ಥಿಕ ನೆರವು. ರೇಷ್ಮೆ ವಲಯದ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳ ಬಗ್ಗೆ ರೈತರಿಗೆ ಮತ್ತು ಇಲಾಖೆಯ ನೌಕರರಿಗೆ ತರಬೇತಿ
ನೀಡಲು ಹಾಸನ ಜಿಲ್ಲೆಯಲ್ಲಿ ರೇಷ್ಮೆ ತರಬೇತಿ ಸಂಸ್ಥೆ ಸ್ಥಾಪನೆ. ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆ ಆವರಣದಲ್ಲಿ ಎರಡನೇ ಸಂಘಟಿತ ನೇಯ್ಗೆ ಕಾರ್ಖಾನೆ ಸ್ಥಾಪನೆಗೆ 5 ಕೋಟಿ ರೂ. ಅನುದಾನ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister and Finance Minister Siddaramaiah has tabled Karnataka Budget 2017-18 on Wednesday, March 15, 2017. Siddaramaiah announced several projects regarding animal husbandry. Here are the full highlights.
Please Wait while comments are loading...