ಬಜೆಟ್: ಸಾಲ ಮನ್ನಾ ಇಲ್ಲ, ನೀರಾಕ್ಕೆ ಲೈಸೆನ್ಸ್, ಕೃಷಿಗೆ ಸಿದ್ದು ನೀಡಿದ್ದೇನು?

Subscribe to Oneindia Kannada

ಬೆಂಗಳೂರು, ಮಾರ್ಚ್ 15: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು 2017-18ನೇ ಸಾಲಿನ 1,86,561 ಕೋಟಿ ರೂಪಾಯಿ ಗಾತ್ರದ ಆಯವ್ಯಯ ಮಂಡಿಸಿದರು.

ಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ತಮ್ಮ ಬಜೆಟಿನಲ್ಲಿ ಭರಪೂರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕೃಷಿ ಭಾಗ್ಯದಿಂದ ಆರಂಭಿಸಿ ಪ್ರಧಾನಿ ಫಸಲ್ ಬಿಮಾ ಯೋಜನೆಯವರೆಗೆ ಹಲವು ಪ್ರಾಜೆಕ್ಟ್ ಗಳಿಗೆ ಅನುದಾನ ಘೋಷಿಸಿದ್ದಾರೆ.

ಆದರೆ ಬಹು ನಿರೀಕ್ಷೆಯ 'ಸಾಲ ಮನ್ನಾ'ವನ್ನು ಸಿದ್ದರಾಮಯ್ಯ ಮಾಡಿಲ್ಲ. ಈ ಮೂಲಕ ಕಾತರದಿಂದ ಕಾಯುತ್ತಿದ್ದ ಅಪಾರ ರೈತ ಸಮುದಾಯಕ್ಕೆ ಮುಖ್ಯಮಂತ್ರಿ ನಿರಾಸೆ ಮೂಡಿಸಿದ್ದಾರೆ.[43 ಹೊಸ ತಾಲೂಕುಗಳು, ಅವುಗಳ ಹೆಸರುಗಳು]

ಐತಿಹಾಸಿಕ ತೀರ್ಮಾನದಲ್ಲಿ ನೀರಾಕ್ಕೆ ಲೈಸನ್ಸ್ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಗೇರು ಅಭಿವೃದ್ಧಿ ಮಂಡಳಿ ರಚನೆಗೂ ಸರಕಾರ ತೀರ್ಮಾನಿಸಿದೆ. ರೈತರಿಗೆ 25 ಸಾವಿರ ಕೋಟಿ ಸಾಲ ನೀಡಲು ಸರಕಾರ ಮುಂದಾಗಿದ್ದಲ್ಲದೆ, ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲದ ಪ್ರಮಾಣವನ್ನು 3 ಲಕ್ಷಕ್ಕೆ ಏರಿಸಲಾಗಿದೆ.

ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಪತ್ನಿಯರಿಗೆ 2,000 ರೂಪಾಯಿ ಮಾಸಿಕ ಪಿಂಚಣಿ ನೀಡಲು ಸರಕಾರ ಮುಂದಾಗಿದೆ. ಸಿದ್ದರಾಮಯ್ಯ ತಮ್ಮ ಬಜೆಟಿನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಪೂರ್ಣ ವಿವರ ಇಲ್ಲಿದೆ.[ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]

ಕೃಷಿ ಭಾಗ್ಯ ಯೋಜನೆ ವಿಸ್ತರಣೆ

ಕೃಷಿ ಭಾಗ್ಯ ಯೋಜನೆ ವಿಸ್ತರಣೆ

ಕೃಷಿ ಭಾಗ್ಯ ಯೋಜನೆಯನ್ನು ಕರಾವಳಿ ಮತ್ತು ಮಲೆನಾಡು ಪ್ರದೇಶಗಳ (ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿ) ಎಲ್ಲ ತಾಲ್ಲೂಕುಗಳಿಗೆ ವಿಸ್ತರಣೆ ಮಾಡಲಾಗಿದೆ. ಬಜೆಟಿನಲ್ಲಿ ಇದಕ್ಕಾಗಿ 600 ಕೋಟಿ ರೂ. ತೆಗೆದಿರಿಸಲಾಗಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

'ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'ಗೆ ವ್ಯಾಪ್ತಿಗೆ 31.5 ಲಕ್ಷ ಹೆಕ್ಟೇರ್ ಪ್ರದೇಶ ಸೇರ್ಪಡೆಗೊಳಿಸಲಾಗುವುದು. ಇದಕ್ಕಾಗಿ ಕೇಂದ್ರದ ನೆರವಿನ ಜೊತೆಗೆ ರಾಜ್ಯ ಸರ್ಕಾರದ ಸಂಪನ್ಮೂಲಗಳಿಂದ 845 ಕೋಟಿ ರೂ. ನೆರವು ನೀಡಲಾಗುವುದು.

ಹನಿ ಮತ್ತು ತುಂತುರು ನೀರಾವರಿ

ಹನಿ ಮತ್ತು ತುಂತುರು ನೀರಾವರಿ

ನೀರಿನ ದಕ್ಷ ಬಳಕೆಗೆ 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ಮತ್ತು ತುಂತುರು ನೀರಾವರಿ ಸ್ಥಾಪಿಸಲು ನೆರವು. ಇದಕ್ಕಾಗಿ ರೈತರಿಗೆ 2 ಹೆಕ್ಟೇರ್ ವರೆಗೆ ಶೇ.90 ಹಾಗೂ 5 ಹೆಕ್ಟೇರ್ ವರೆಗೆ ಶೇ. 50 ರಷ್ಟು ಸಹಾಯ ಧನ ವಿತರಣೆ. ಇದಕ್ಕಾಗಿ ಬಜೆಟಿನಲ್ಲಿ 375 ಕೋಟಿ ಮೀಸಲು.

ಕೃಷಿ ಯಂತ್ರಧಾರೆ

ಕೃಷಿ ಯಂತ್ರಧಾರೆ

122 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಯಂತ್ರಧಾರೆ ಕಾರ್ಯಕ್ರಮದಡಿ ಹೋಬಳಿಗಳಲ್ಲಿ 250ಕ್ಕೂ ಹೆಚ್ಚು ಕೇಂದ್ರಗಳ ಸ್ಥಾಪನೆ.

ಉತ್ಪಾದನೆಗೆ ಪ್ರೋತ್ಸಾಹ

ಉತ್ಪಾದನೆಗೆ ಪ್ರೋತ್ಸಾಹ

ಬೇಸಾಯದ ಖರ್ಚು ಕಡಿತ, ಸುಧಾರಿತ ತಾಂತ್ರಿಕತೆ ಅಳವಡಿಕೆಯನ್ನು ಉತ್ತೇಜಿಸಲು ಹಾಗೂ ಭತ್ತ, ದ್ವಿದಳ ಧಾನ್ಯ, ಎಣ್ಣೆಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ರೈತರ ಖಾತೆಗೆ ನೇರವಾಗಿ ಪ್ರೋತ್ಸಾಹಧನ. ಇದಕ್ಕಾಗಿ 100 ಕೋಟಿ ರೂಪಾಯಿ ಎತ್ತಿಟ್ಟ ಸಿದ್ದರಾಮಯ್ಯ.

 ಶೂನ್ಯ ಬಡ್ಡಿ ದರದಲ್ಲಿ ಸಾಲ

ಶೂನ್ಯ ಬಡ್ಡಿ ದರದಲ್ಲಿ ಸಾಲ

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ಗಳವರೆಗಿನ ಅಲ್ಪಾವಧಿ ಕೃಷಿ ಸಾಲ ಮತ್ತು ಶೇ. 3ರ ಬಡ್ಡಿದರದಲ್ಲಿ 10 ಲಕ್ಷ ರೂ. ಗಳವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ನೀಡಿಕೆಗೆ ಯೋಜನೆ ರೂಪಿಸಲಾಗಿದೆ.

ಈ ವರ್ಷದಲ್ಲಿ 25 ಲಕ್ಷ ರೈತರಿಗೆ 13,500 ಕೋಟಿ ರೂ. ಗಳ ಕೃಷಿ ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ.

ಆತ್ಮಹತ್ಯೆಗೆ ಶರಣಾದ ರೈತರ ಪತ್ನಿಯರಿಗೆ ಪಿಂಚಣಿ

ಆತ್ಮಹತ್ಯೆಗೆ ಶರಣಾದ ರೈತರ ಪತ್ನಿಯರಿಗೆ ಪಿಂಚಣಿ

ಆತ್ಮಹತ್ಯೆ ಶರಣಾದ ರೈತರ ಪತ್ನಿಯರಿಗೆ ಮಾಸಿಕ 2,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ.

ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ

ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ

ಪ್ರತಿ ತಾಲ್ಲೂಕು ಕೇಂದ್ರಕ್ಕೆ ಒಂದರಂತೆ 175 ಗ್ರಾಮೀಣ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರಗಳ ಸ್ಥಾಪನೆ; ಪ್ರತಿ ಕೇಂದ್ರ ಸ್ಥಾಪನೆಗೆ ಬ್ಯಾಂಕ್ ಲಿಂಕೇಜ್‌ನೊಂದಿಗೆ 5 ಲಕ್ಷ ರೂ. ಅಥವಾ ಗರಿಷ್ಟ ಶೇ. 50 ಸಹಾಯಧನ; ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗರಿ ಶೇ. 75ರವರೆಗೆ ಸಹಾಯಧನ. ಇದಕ್ಕಾಗಿ ಒಟ್ಟು ಖರ್ಚು 10 ಕೋಟಿ.

ತೋಟಗಾರಿಕೆ ಇಲಾಖೆಯ

ತೋಟಗಾರಿಕೆ ಇಲಾಖೆಯ

ತೋಟಗಾರಿಕೆ ಇಲಾಖೆಯಡಿ ಮೊಟ್ಟ ಮೊದಲ ಬಾರಿಗೆ ಕೃಷಿ ಭಾಗ್ಯ ಯೋಜನೆ ಅನುಷ್ಟಾನ 200 ಕೋಟಿ ರೂ. ಪ್ರತ್ಯೇಕ ಅನುದಾನ. 20,000 ಎಕರೆ ಪ್ರದೇಶಕ್ಕೆ ತೋಟಗಾರಿಕಾ ಬೆಳೆಗಳ ವಿಸ್ತರಣೆಗೆ 20,000ರೈತರಿಗೆ 40 ಲಕ್ಷ ಉತ್ತಮ ಗುಣಮಟ್ಟದ ಸಸಿ ನೆಡುವ ಸಾಮಗ್ರಿಗಳ ಪೂರೈಕೆ. ಇದಕ್ಕಾಗಿ 5 ಕೋಟಿ ಬಜೆಟಿನಲ್ಲಿ ಮೀಸಲಿಟ್ಟ ಸಿದ್ದರಾಮಯ್ಯ.

100 ಮಾದರಿ ತೋಟ

100 ಮಾದರಿ ತೋಟ

10 ಕೋಟಿ ರೂಪಾಯಿ ವೆಚ್ಚದಲ್ಲಿ ತೋಟಗಾರಿಕೆ ಇಲಾಖೆಯ 418 ತೋಟಗಳಲ್ಲಿ ಮುಂದಿನ 5ವರ್ಷಗಳಲ್ಲಿ 100 ಮಾದರಿ ತೋಟಗಳ ಅಭಿವೃದ್ಧಿ.

ಗೇರು ಅಭಿವೃದ್ದಿ ಮಂಡಳಿ

ಗೇರು ಅಭಿವೃದ್ದಿ ಮಂಡಳಿ

ಉತ್ತಮ ಗುಣಮಟ್ಟದ ಗೇರುಬೀಜ ಬೆಳೆಗಳ ಅಭಿವೃದ್ಧಿಗೆ ಗೇರು ಅಭಿವೃದ್ಧಿ ಮಂಡಳಿ ಪ್ರಾರಂಭ; ಇದಕ್ಕಾಗಿ ಬಜೆಟಿನಲ್ಲಿ 10 ಕೋಟಿ ಅನುದಾನ ಇದರಿಂದ 10,000ಕ್ಕೂ ಹೆಚ್ಚಿನ ರೈತರಿಗೆ ಅನುಕೂಲ.

ತೆಂಗಿನ ತೋಟಗಳ ಅಭಿವೃದ್ಧಿ

ತೆಂಗಿನ ತೋಟಗಳ ಅಭಿವೃದ್ಧಿ

10 ಕೋಟಿ ವೆಚ್ಚದಲ್ಲಿ 10,000 ಹೆಕ್ಟೇರ್ ಪ್ರದೇಶದಲ್ಲಿನ, ತೆಂಗಿನ ತೋಟಗಳ ಪುನಃಶ್ಚೇತನ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ಕ್ರಮ; ಇದರಿಂದ 10,000 ಜನರಿಗೆ ಅನುಕೂಲ.

ಮಾವು ತೋಟಗಳ ಅಭಿವೃದ್ಧಿ

ಮಾವು ತೋಟಗಳ ಅಭಿವೃದ್ಧಿ

10 ಕೋಟಿ ವೆಚ್ಚದಲ್ಲಿ 5,000 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳ ಪುನಃಶ್ಚೇತನ ಮತ್ತು ಉತ್ಪಾದನೆ ಹೆಚ್ಚಳಕ್ಕೆ ಕ್ರಮ. ಇದರಿಂದ 5,000ಮಾವು ಬೆಳೆಗಾರರಿಗೆ ಅನುಕೂಲ.

ಉತ್ತಮ ಗುಣಮಟ್ಟದ ಮಾವು ಉತ್ಪಾದನೆಗಾಗಿ, ಮಾವು ಬೆಳೆಗಾರರು ಜಾಗತಿಕ GAP (Good Agricultural

Practices) ಪ್ರಮಾಣಪತ್ರ ಪಡೆದುಕೊಳ್ಳುವುದಕ್ಕೆ ಉತ್ತೇಜನ; 100 ಎಪಿಎಂಸಿ ಮಾರುಕಟ್ಟೆಗಳಲ್ಲಿ ವೈಜ್ಞಾನಿಕ ಹಣ್ಣು ಮಾಗಿಸುವ ಸೌಲಭ್ಯ ಕಲ್ಪಿಸಲು 10 ಕೋಟಿ ರೂ. ಅನುದಾನ.

ಸಂಬಾರ ಅಭಿವೃದ್ದಿ ಮಂಡಳಿಗೆ ಅನುದಾನ

ಸಂಬಾರ ಅಭಿವೃದ್ದಿ ಮಂಡಳಿಗೆ ಅನುದಾನ

ಸಂಬಾರ ಅಭಿವೃದ್ಧಿ ಮಂಡಳಿ ಮೂಲಕ ಒಣಮೆಣಸಿನಕಾಯಿ, ಮೆಣಸು ಮತ್ತು ಅರಿಷಿನ ಇತ್ಯಾದಿ ಬೆಳೆಗಾರರಿಗೆ ಉತ್ತಮ ಕೊಯ್ಲೋತ್ತರ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ನೆರವು; 3 ಕೋಟಿ ರೂಪಾಯಿ ಅನುದಾನದಿಂದ 7,000 ರೈತರಿಗೆ ಅನುಕೂಲ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದೆ.

ನೀರಾಕ್ಕೆ ಲೈಸೆನ್ಸ್

ನೀರಾಕ್ಕೆ ಲೈಸೆನ್ಸ್

ನೀರಾವನ್ನು ಪುಷ್ಟಿದಾಯಕ ಪೇಯವನ್ನಾಗಿ ಇಳಿಸಲು ಹಾಗೂ ಇದನ್ನು ಇತರ ಉದ್ದೇಶಗಳಿಗೆ ಬಳಸುವುದಕ್ಕೆ ಸಂಸ್ಕರಿಸಲು ಆಯ್ದ ತೆಂಗು ಉತ್ಪಾದಕ ಕಂಪನಿಗಳಿಗೆ ಮತ್ತು ರೈತ ಉತ್ಪಾದಕ ಕಂಪನಿಗಳಿಗೆ ಲೈಸನ್ಸ್ ನೀಡಲಾಗುತ್ತದೆ. ನೀರಾಕ್ಕೆ ಮಾರುಕಟ್ಟೆ ಸೌಲಭ್ಯ ಹಾಗೂ ಇತರೆ ಸೌಲಭ್ಯ ಕಲ್ಪಿಸಲು 3 ಕೋಟಿ ಅನುದಾನ ನೀಡಲಾಗುತ್ತದೆ.

ಟ್ಯಾಂಕರ್ ಖರೀದಿಗೆ ಸಹಾಯಧನ

ಟ್ಯಾಂಕರ್ ಖರೀದಿಗೆ ಸಹಾಯಧನ

35,000 ರೈತರಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲು ಶೇ. 90 ಸಹಾಯಧನ ನೀಡಲಾಗುವುದು. ಇದಕ್ಕಾಗಿ ಬಜೆಟಿನಲ್ಲಿ 233 ಕೋಟಿ ಅನುದಾನ ನೀಡಲಾಗಿದೆ. ಪ್ರತಿ ತಾಲ್ಲೂಕಿಗೆ 10ರಂತೆ ನೀರಿನ ಟ್ಯಾಂಕರ್‌ಗಳನ್ನು ಖರೀದಿಸಲು ರೈತರಿಗೆ ಶೇ.50 ಅಥವಾ ಗರಿಷ್ಠ ೫೦,೦೦೦ ರೂಪಾಯಿಗಳ ಸಹಾಯಧನ ನೀಡಲಾಗುವುದು.

ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಸಹಾಯ ಧನ

ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಸಹಾಯ ಧನ

ಆರ್ಥಿಕವಾಗಿ ಕಾರ್ಯಸಾಧುವೆನಿಸುವ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆಗೆ ಸರಕಾರ ಕ್ರಮ ಕೈಗೊಳ್ಳಲಿದೆ.
ಗದಗದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಈರುಳ್ಳಿ ಗೋದಾಮುಗಳ ಸ್ಥಾಪನೆ; ಜಾನುವಾರು ಮಾರುಕಟ್ಟೆಗಳ ಆಧುನೀಕರಣ ಮತ್ತು ತರಕಾರಿ ಮಾರುಕಟ್ಟೆಗಳಿಗೆ ಅತ್ಯಾಧುನಿಕ ಸೌಲಭ್ಯ ನೀಡಲು ಸರಕಾರ ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister and Finance Minister Siddaramaiah has tabled Karnataka Budget 2017-18 on Wednesday, March 15, 2017. Siddaramaiah announced several project for farmers. Here are the full highlights.
Please Wait while comments are loading...