ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ರಪತಿ ಶಿವಾಜಿಯ 2ನೇ ಮಗನಿಗೆ ಆಶ್ರಯ ನೀಡಿದ್ದು ಕನ್ನಡದ ವೀರ‌ರಾಣಿ‌ ಕೆಳದಿ ಚೆನ್ನಮ್ಮ

|
Google Oneindia Kannada News

ಬೆಂಗಳೂರು, ಜ 18: ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಹಿಂದಕ್ಕೆ ಪಡೆಯುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಇದು ಕುಚೇಷ್ಟೆ. ಶಿವಸೇನೆಯವರಿಗೆ ಮೂರು ತಿಂಗಳಿಗೊಮ್ಮೆ ಗಡಿ ತಂಟೆ ಕೆದಕದಿದ್ದರೆ ತಿಂದಿದ್ದು ಅರಗುವುದಿಲ್ಲ. ಹೀಗೆ ಮಾತಾಡುವುದರಿಂದ ಉದ್ಧವ್ ಠಾಕ್ರೆ ಪದೇಪದೇ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ.

Recommended Video

karkala , nippani , ಬೆಳಗಾವಿ ಮಹಾರಾಷ್ಟ್ರ ಗೆ ಸೇರಬೇಕಂತೆ !! | Oneindia Kannada

"ವಾಸ್ತವಾಂಶ ಏನು ಎಂಬುದನ್ನು ಉದ್ಧವ್ ಠಾಕ್ರೆ ಮರಾಠಿ ಇತಿಹಾಸಕಾರರಿಂದ ತಿಳಿದುಕೊಳ್ಳಲಿ. ಇಡೀ‌ ಮಹಾರಾಷ್ಟ್ರದ ಮುಕ್ಕಾಲು ಭಾಗ ಹಿಂದೆ ಕರ್ನಾಟಕವೇ ಆಗಿತ್ತು. ಮಹಾರಾಷ್ಟ್ರದ ಮೂಲೆಮೂಲೆಗಳಲ್ಲಿ ಸಿಕ್ಕಿರುವ ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ. ಯಾರ ಪ್ರದೇಶವನ್ನು ಯಾರು ಆಕ್ರಮಿಸಿಕೊಂಡಿದ್ದಾರೆಂದು ಅವರು ಅರಿತು ಮಾತನಾಡಲಿ"ಎನ್ನುವ ಸಲಹೆಯನ್ನು ಗೌಡ್ರು ನೀಡಿದ್ದಾರೆ.

ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ

"ಹಾಗೆ ನೋಡಿದರೆ, ಶಿವಸೇನೆಯವರು ಸದಾ ಕನ್ನಡಿಗರಿಗೆ ಚಿರ ಋಣಿಗಳಾಗಿರಬೇಕು. ಅವರ ಆರಾಧ್ಯ ದೊರೆ ಛತ್ರಪತಿ ಶಿವಾಜಿಯವರ ಎರಡನೇ ಮಗನಿಗೆ ಆಶ್ರಯ ನೀಡಿ‌ ಔರಂಗಜೇಬನ ಸೈನ್ಯದಿಂದ ಕಾಪಾಡಿದ್ದು ಕನ್ನಡದ ವೀರ‌ರಾಣಿ‌ ಕೆಳದಿ ಚೆನ್ನಮ್ಮ. ಕನ್ನಡಿಗರು ಆಶ್ರಯದಾತರು, ಆಕ್ರಮಣಕಾರಿಗಳಲ್ಲ ಎಂಬುದನ್ನು ಠಾಕ್ರೆ ಅರಿತುಕೊಳ್ಳಲಿ"ಎಂದು ನಾರಾಯಣ ಗೌಡ್ರು ಹೇಳಿದ್ದಾರೆ.

"ಮೆಹರ್ ಚಂದ್ ಮಹಾಜನ್ ಆಯೋಗ ರಚನೆಯಾಗಿದ್ದೇ ಮಹಾರಾಷ್ಟ್ರದ ಒತ್ತಡದ ಮೇರೆಗೆ. ಆಯೋಗದ‌ ವರದಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಮಹಾರಾಷ್ಟ್ರ ರಾಜಕಾರಣಿಗಳು ಕರ್ನಾಟಕಕ್ಕೆ ತಾಕೀತು ಮಾಡಿದ್ದರು. ಆದರೆ ಆಯೋಗದ ವರದಿ ಬಂದನಂತರ ಮಹಾರಾಷ್ಟ್ರ ಸರ್ಕಾರ ಮಾತಿಗೆ ತಪ್ಪಿತು. ವರದಿಯನ್ನು ಒಪ್ಪುವುದಿಲ್ಲ ಎಂದು ತಗಾದೆ ತೆಗೆಯಿತು. ಗಡಿವಿವಾದ ಪರಿಹಾರಕ್ಕೆ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬುದು ಕರ್ನಾಟಕ ಪ್ರತಿಪಾದಿಸಿಕೊಂಡು ಬಂದಿರುವ ನಿಲುವು"ಎಂದು ಗೌಡ್ರು ಹೇಳಿದ್ದಾರೆ.

ಹಿಂದೀವಾಲಾಗಳಿಗೆ ಯಡಿಯೂರಪ್ಪ ಸರಕಾರದ ಶರಣಾಗತಿಯ ಪರಮಾವಧಿ ಹಿಂದೀವಾಲಾಗಳಿಗೆ ಯಡಿಯೂರಪ್ಪ ಸರಕಾರದ ಶರಣಾಗತಿಯ ಪರಮಾವಧಿ

ಬೆಳಗಾವಿ ತಮಗೆ ಸೇರಬೇಕೆಂಬ ಕಾರಣಕ್ಕೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಗೆ ಹೋಗಿದೆ

ಬೆಳಗಾವಿ ತಮಗೆ ಸೇರಬೇಕೆಂಬ ಕಾರಣಕ್ಕೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಗೆ ಹೋಗಿದೆ

"ಆದರೆ ಬೆಳಗಾವಿ ತಮಗೆ ಸೇರಬೇಕೆಂಬ ಕಾರಣಕ್ಕೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಗೆ ಹೋಗಿದೆ. ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ನೀಡಿರುವ ಪ್ರಮಾಣಪತ್ರದಲ್ಲೂ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಹೇಳಿದೆ.
ವಾಸ್ತವ ಹೀಗಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನಸಿಗೆ ಬಂದಂತೆ ಹೇಳಿಕೆ ನೀಡುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ" - ನಾರಾಯಣ ಗೌಡ್ರು.

ನಾರಾಯಣ ಗೌಡ್ರ ಆಕ್ರೋಶ

ನಾರಾಯಣ ಗೌಡ್ರ ಆಕ್ರೋಶ

"ಇಂಥ ಬಾಯಿಮಾತಿನ ಹೇಳಿಕೆಗಳಿಂದ ಏನೂ ಬದಲಾಗುವುದಿಲ್ಲ. ಕೀಳು ರಾಜಕೀಯಕ್ಕಾಗಿ ಭಾಷಾ ಸಮುದಾಯಗಳ ನಡುವೆ ಬೆಂಕಿ ಹಚ್ಚುವುದು ದುಷ್ಟತನ.ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳು ಪ್ರಗತಿಪರ ರಾಜ್ಯಗಳಾಗಿದ್ದು, ಅತಿಹೆಚ್ಚು ತೆರಿಗೆ ಸಂಗ್ರಹಿಸಿಕೊಡುತ್ತವೆ" ಎಂದು ನಾರಾಯಣ ಗೌಡ್ರು ಆಕ್ರೋಶ ವ್ಯಕ್ತ ಪಡಿಸಿದರು.

ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ

ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ

"ಆದರೂ ಈ ರಾಜ್ಯಗಳ ಮೇಲೆ ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಿತ್ತು. ಉದ್ಧವ್ ಠಾಕ್ರೆಗೆ ಈ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಷಾದನೀಯ. ಶಿವಸೇನೆ, ಎಂಇಎಸ್ ಕುತಂತ್ರಗಳಿಗೆ, ಕಿತಾಪತಿಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ" - ನಾರಾಯಣ ಗೌಡ್ರು.‌

ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಲಿ

ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಲಿ

"ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ನೆಲೆವೀಡು ಬೆಳಗಾವಿಯನ್ನು ದಕ್ಕಿಸಿಕೊಳ್ಳುವ ಹಗಲುಗನಸು ಕಾಣುವುದನ್ನು ಬಿಟ್ಟು ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಲಿ" ಎನ್ನುವ ಬುದ್ದಿಮಾತನ್ನು ನಾರಾಯಣ ಗೌಡ್ರು ನೀಡಿದ್ದಾರೆ.

English summary
KaRaVe State President TA Narayana Gowda Angry On Maharasthra CM Uddhav Thackeray,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X