ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದಲ್ಲಿ ಕನ್ನಡ ಪ್ರೇಮ ಮೆರೆದ ಕನ್ನಡಿಗನಿಗೆ ಮೆಚ್ಚುಗೆಯ ಮಹಾಪೂರ

|
Google Oneindia Kannada News

ಬೆಂಗಳೂರು, ಮೇ 20: ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದೇಶದಲ್ಲಿದ್ದರೂ ಕನ್ನಡ ಪ್ರೇಮ ಮೆರೆದ ಸಂಸದರ ನಡೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Chandra Arya: ಕೆನಡಾದಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ!Chandra Arya: ಕೆನಡಾದಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ!

ಚಂದ್ರಆರ್ಯ ಕನ್ನಡ ಪ್ರೇಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ತುಮಕೂರು ಜಿಲ್ಲೆಯ, ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಕನ್ನಡಿಗ ಚಂದ್ರ ಆರ್ಯ ಕೆನಡಾ ದೇಶದ ಸಂಸತ್ತಿನ ಪ್ರತಿನಿಧಿಯಾಗಿ, ತಮ್ಮ ಮೊದಲ ಭಾಷಣವನ್ನು ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡದ ಸೊಗಡನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊಳಗಿಸಿದ್ದಾರೆ. ಮನುಷ್ಯ ತಾನು ಎಷ್ಟೇ ಎತ್ತರಕ್ಕೆ ಹೋದರೂ, ತನ್ನ ನೆಲದ ಮೂಲ ಬೇರನ್ನು ನೆನಪಿಸಿಕೊಳ್ಳಬೇಕು ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದ ಚಂದ್ರ ಆರ್ಯರಿಗೆ ತುಂಬು ಹೃದಯದ ಅಭಿನಂದನೆಗಳು. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಎಂದು ಟ್ವೀಟ್ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹ ಮೆಚ್ಚುಗೆ ಸೂಚಿಸಿದ್ದಾರೆ. "ಕೆನಡಾದ ಸಂಸತ್ತಿನಲ್ಲಿ ನಮ್ಮ ಶ್ರೇಷ್ಠ ಕನ್ನಡ ಭಾಷೆ ಮಾತನಾಡಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಚಂದ್ರ ಆರ್ಯ ಅವರ ಆಲೋಚನೆ ಉತ್ತಮವಾಗಿದೆ. ಜಗತ್ತಿನಾದ್ಯಂತ ಇರುವ ಕನ್ನಡಿಗರು ನಮ್ಮ ಮಾತೃಭಾಷೆಯ ಧ್ವಜವನ್ನು ಎತ್ತರಕ್ಕೆ ಹಾರಿಸಬೇಕು" ಎಂದು ಹೇಳಿದ್ದಾರೆ.

ಬಿಜೆಪಿ ಕರ್ನಾಟಕ ಟ್ವೀಟ್

ಚಂದ್ರ ಆರ್ಯರ ಕನ್ನಡ ಪ್ರೇಮವನ್ನು ಶ್ಲಾಘಿಸಿರುವ ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೆನಡಾ ಸಂಸದರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. "ಕೆನಡಾ ಸಂಸತ್ತಿನಲ್ಲಿ ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಕನ್ನಡದ ಕಂಪನ್ನು ಕೆನಡಾದ ನೆಲದಲ್ಲಿ ಪಸರಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಲ್ಲಾದರು ಇರು ಎಂತಾದರೂ ಇರು, ಎಂದೆಂದಿ���ೂ ನೀ ಕನ್ನಡವಾಗಿರು!" ಎಂದು ಕರ್ನಾಟಕ ಬಿಜೆಪಿ ಘಟನೆ ಟ್ವೀಟ್‌ ಮಾಡಿದೆ.

ಕುವೆಂಪು ಆಶಯವನ್ನು ಎತ್ತಿಹಿಡಿದಿದ್ದಾರೆ

ರಾಷ್ಟ್ರಕವಿ ಕುವೆಂಪು ಆಶಯವನ್ನು ಎತ್ತಿಹಿಡಿದ್ದಾರೆ ಎಂದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚಂದ್ರಆರ್ಯ ಕನ್ನಡಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. "ನಮ್ಮ ಭಾಷೆ ನಮ್ಮ ಹೆಮ್ಮೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂ���ಿಗೂ ನೀ ಕನ್ನಡವಾಗಿರು ಎಂದು ಕುವೆಂಪು ಹೇಳಿದಂತೆ ನಮ್ಮ ಚಂದ್ರಆರ್ಯ ಕೆನಡಾ ಸಂಸತ್ತಿನಲ್ಲಿ ಕನ್ನಡಲ್ಲಿ ಮಾತನಾಡುವ ಮೂಲಕ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಅವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು. ನಮ್ಮಲ್ಲಿಯೂ ಎಲ್ಲ ಭಾಷೆಗಳಿಗೆ ಸಮಾನ ಅವಕಾಶ, ಗೌರವಗಳು ಸಿಗುವಂತಾಗಲಿ" ಎಂದು ಹೇಳಿದೆ.

ಸಪ್ತಸಾಗರದಾಚೆ ಕನ್ನಡ ಪಸರಿಸಲಿ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಚಂದ್ರಆರ್ಯ ಕನ್ನಡ ಭಾಷಣ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. "ಕೆನಡಾದ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆ ಕನ್ನಡ‌ದಲ್ಲಿ‌ ಮಾತನಾಡಿದ ಅಲ್ಲಿನ ಸಂಸದರಾದ ಶ್ರೀ ಆರ್ಯಚಂದ್ರ ಅವರು ಸಪ್ತಸಾಗರದಾಚೆ ಕನ್ನಡದ ಕಂಪನ್ನು‌ ಉಣಬಡಿಸಿದ್ದಾರೆ. ಅವರಿಗೆ ಇಡೀ ಕರ್ನಾಟಕದ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ‌ ಸಲ್ಲಿಸುತ್ತೇನೆ. ಕನ್ನಡದ ಮೇಲಿನ ನಿಮ್ಮ‌ ಅಭಿಮಾನ ಇನ್ನಷ್ಟು ಪಸರಿಸಲಿ ಎಂದು ಹಾರೈಕೆ" ಎಂದು ಹೇಳಿದ್ದಾರೆ.

ಸಚಿವ ಸುನೀಲ್ ಕುಮಾರ್ ಟ್ವೀಟ್

'ಮಹಾಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರು ಇರು ನೀನು ಕನ್ನಡವಾಗಿರು ಎಂಬ ಹೊನ್ನುಡಿಗೆ ಬದ್ದರಾಗಿ, ಕೆನಡಾ ಸಂಸತ್ ನಲ್ಲಿ ಇದೇ ಮೊದಲಿಗೆ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಇತಿಹಾಸ ನಿರ್ಮಿಸಿ, ಸಮಸ್ತ ಕನ್ನಡಿಗರಿಗೆ ಆದರ್ಶವೆನಿಸಿದ ಕನ್ನಡಿಗ, ಕೆನಡಾ ಸಂಸತ್ ಪ್ರತಿನಿಧಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು' ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಎಂ. ಪಿ. ರೇಣುಕಾಚಾರ್ಯ ಟ್ವೀಟ್

"ಕನ್ನಡ ಕಂಪು ಕೆನಡಾದಲ್ಲಿಯೂ ಇಂಪು" ಎಂದಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿದೇಶದ ಸಂಸತ್ತಿನಲ್ಲಿ ಮೊದಲ ಬಾರಿಗೆ ಕನ್ನಡ ಬಳಕೆಯಾಗಿದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ ಆರ್ಯಚಂದ್ರ ಅವರೇ ಕನ್ನಡದ ಮೇಲಿನ ನಿಮ್ಮ ಪ್ರೀತಿ & ಗೌರವಕ್ಕೆ ಕರ್ನಾಟಕ ಹೆಮ್ಮೆ ಪಡುತ್ತದೆ, ಸಮಸ್ತ ಕನ್ನಡಿಗರ ಪರವಾಗಿ ನಿಮಗೆ ನಮಸ್ಕರಿಸುತ್ತೇನೆ ಎಂದಿದ್ದಾರೆ.

English summary
Chandra Arya's video went viral on socal media. He speak Kannada in the Canadian parliament. CM Basavaraja Bommai and other praised the move of Chandra Arya who in from Tumakuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X