ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗನಿಗೆ ಅಮೆರಿಕಾದ ಸಿ.ಎ.ಹಜೆನ್ಟೆಗ್ಲೋ(C.A.Hogentogler ) ಪ್ರಶಸ್ತಿ!

|
Google Oneindia Kannada News

2020ನೇ ಸಾಲಿನ ಅಮೆರಿಕಾದ ಪ್ರತಿಷ್ಠಿತ ಸಿ.ಎ.ಹಜೆನ್ಟೆಗ್ಲೋ ಪ್ರಶಸ್ತಿ ಕನ್ನಡಿಗ ಡಾ. ಲಕ್ಷ್ಮೀಕಾಂತ ಮೂಕನಹಳ್ಳಿ ಅವರಿಗೆ ಲಭಿಸಿದೆ. ಅವರ ಲೇಖನ - Boundary Effects in the Desiccation of Soil Layers with Controlled Environmental Conditions ವನ್ನ ಪೇಪರ್ ಆಫ್ outstanding ಮೆರಿಟ್ ಎಂದು ಹೆಸರಿಸಲಾಗಿದೆ.

ಲಕ್ಷ್ಮಿಕಾಂತ ಮೂಕನಹಳ್ಳಿ ಹುಟ್ಟಿದ್ದು ಮೇ 1, 1977ರಲ್ಲಿ , ಕರ್ನಾಟಕ ರಾಜ್ಯದ ಸಿರಾ ತಾಲೂಕಿನ ಹೊಸೂರು ಎನ್ನುವ ಕುಗ್ರಾಮದಲ್ಲಿ. ಅಪ್ಪ ಶ್ರೀ ರಾಮಶೇಷ ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಇದ್ದವರು . ತಾಯಿ ಶ್ರೀಮತಿ ನಾಗಲಕ್ಷ್ಮಿ ಮನೆಯ ಭಾರವನ್ನ ಹೊತ್ತವರು. ಪ್ರಾಥಮಿಕ ಶಿಕ್ಷಣದ ಮೊದಲ ಎರಡು ವರ್ಷಗಳು ಕೂಡ ಹೊಸೂರಿನಲ್ಲಿ ಆಗುತ್ತದೆ. ಆ ನಂತರ ಬೆಂಗಳೂರಿನ ದೇವನಹಳ್ಳಿಯ ಬಳಿಯ ವಿಜಯಪುರ ಎನ್ನುವ ಪುಟಾಣಿ ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಯುತ್ತದೆ.

 ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ! ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ!

ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನ ಪೀಣ್ಯ ಸರಕಾರಿ ಶಾಲೆಯಲ್ಲಿ ಮುಗಿಸಿದ ನಂತರ , ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಪಿಯುಸಿ , ಎಂ ಎಸ್ ರಾಮಯ್ಯದಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನ ಪಡೆದು , ಕೆ.ಆರ್.ಇ.ಸಿಯಲ್ಲಿ ಜಿಯೋಟೆಕ್ನಾಲಿಜಿ ವಿಷಯದಲ್ಲಿ ಎಂಟೆಕ್ ಪದವಿಯನ್ನ ಪಡೆಯುತ್ತಾರೆ . ಆ ನಂತರ ಪಿ ಹೆಚ್ ಡಿ ಪದವಿಯನ್ನ ಪಡೆಯಲು ಅವರು ಆಯ್ದು ಕೊಂಡ ಊರು ಬಾರ್ಸಿಲೋನಾ . ಇಲ್ಲಿನ ಪ್ರತಿಷ್ಠಿತ ಯೂನಿವೆರ್ಸಿಟಿ (ಯು ಪಿ ಸಿ - ಯೂನಿವೆರ್ಸಿದಾದ್ ದೆ ಪಾಲಿಟೆಕ್ನಿಕ ದೆ ಕಾತಲೂನ್ಯ ) ಇಂದ ಜಿಯೋಮೆಕ್ಯಾನಿಕ್ಸ್ ವಿಷಯದಲ್ಲಿ ಪಿಹೆಚ್ಡಿ ಪದವಿಯನ್ನ 2007ರಲ್ಲಿ ಪಡೆಯುತ್ತಾರೆ.

Kannadiga Dr. Lakshmikantha Mookanahalli Awarded With Prestigious C.A.Hogentogler For The Year 2020

ಇದಾದ ನಂತರ ರಿಸರ್ಚ್ ಅಸ್ಸೊಸಿಯೆಟ್ ಆಗಿ ಪ್ಯಾರಿಸ್ ನಗರದ ಯೂನಿವೆರ್ಸಿಟಿಯಲ್ಲಿ ಒಂದೂವರೆ ವರ್ಷ ಕೆಲಸ ಸಾಗುತ್ತದೆ. ಆ ನಂತರದ್ದು ಕಾರ್ಪೊರೇಟ್ ಬದುಕು . ಲಂಡನ್ ನಗರದಲ್ಲಿ schlumberger ಎನ್ನುವ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸದ ನಂತರ ಸ್ಪೇನ್ ನ ದೈತ್ಯ ಆಯಿಲ್ ಅಂಡ್ ಗ್ಯಾಸ್ ಸಂಸ್ಥೆ ರೆಪ್ಸೊಲ್ ನಲ್ಲಿ ಹಂತ ಹಂತವಾಗಿ ಮೇಲಿನ ಸ್ಥರಕ್ಕೆ ಏರುತ್ತಾ ಇಲ್ಲಿಯವರೆಗೆ ಅಲ್ಲೇ ನೆಲೆಯೂರಿದ್ದಾರೆ .

ಕಳೆದ 20ವರ್ಷದಲ್ಲಿ ಜಗತ್ತಿನ ಎಲ್ಲಾ ಖಂಡಗಳನ್ನೂ ಸುತ್ತಿ ಅನುಭವವನ್ನ ಪಡೆದುಕೊಂಡಿದ್ದಾರೆ. ಕೆಲಸ ಸಲುವಾಗಿ ಮೂರು ವರ್ಷ ಅಮೆರಿಕಾದ ಟೆಕ್ಸಾಸ್ ನಲ್ಲಿ ನೆಲೆ ನಿಂತ ದಿನಗಳಲ್ಲಿ ಯೂನಿವೆರ್ಸಿಟಿ ಆಫ್ ಟೆಕ್ಸಾಸ್ ಅಂಡ್ ಆಸ್ಟಿನ್ ನಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿ ಮುಗಿಸುತ್ತಾರೆ.ಮರಳಿ ಸ್ಪೇನ್ ನ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಬದುಕಲು ಶುರು ಮಾಡಿದಾಗ ವಿಶ್ವ ವಿಖ್ಯಾತ ಎಸದೆ (ESADE ) ಬ್ಯಸಿನೆಸ್ಸ್ ಅಂಡ್ ಲಾ ಸ್ಕೂಲ್ ನಲ್ಲಿ ಉನ್ನತ ಮ್ಯಾನೇಜ್ಮೆಂಟ್ ಶಿಕ್ಷಣವನ್ನ ಪಡೆಯುತ್ತಾರೆ.

ಬರವಣಿಗೆ ಎನ್ನುವುದು ಬಹಳ ಇಷ್ಟವಾದ ಕೆಲಸ. ಹೀಗಾಗಿ ಇಲ್ಲಿಯವರೆಗೆ ವೃತ್ತಿಗೆ ಸಂಬಂಧ ಪಟ್ಟ ಒಟ್ಟು 78ಲೇಖನಗಳು ಅಂತರ್ರಾಷ್ಟ್ರೀಯ ಮ್ಯಾಗಜಿನ್ ಗಳಲ್ಲಿ ಪ್ರಕಟವಾಗಿವೆ. ಇವರ ಹೆಸರಿನಲ್ಲಿ ಇಲ್ಲಿಯವರೆಗೆ 569 ಸೈಟೇಷನ್ ದಾಖಲಾಗಿದೆ. 12 ಪೇಟೆಂಟ್ ಕೂಡ ಲಕ್ಷ್ಮೀಕಾಂತ್ ಅವರ ಹೆಸರಿನಲ್ಲಿವೆ .

 ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!! ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!

ಅಮೆರಿಕನ್ ಸೊಸೈಟಿ ಫಾರ್ ಟೆಸ್ಟಿಂಗ್ ಅಂಡ್ ಮೆಟೀರಿಯಲ್ಸ್ (ASTM ) 1902ರಲ್ಲಿ West Conshohocken, Pennsylvania, northwest of Philadelphia ದಲ್ಲಿ ಸ್ಥಾಪನೆಯಾಗುತ್ತದೆ. ಇದರ ಶಾಖೆಗಳು ಬೆಲ್ಜಿಯಂ , ಚೀನಾ , ಕೆನಡಾ , ವಾಷಿಂಗ್ಟನ್ ಮತ್ತು ಪೆರು ದೇಶಗಳಲ್ಲಿ ಇದೆ.

Recommended Video

ಸಿಎಂ ಬಿಎಸ್ ವೈ ಖಾಸಗಿ ಆಸ್ಪತ್ರೆ ರೌಂಡ್ಸ್ | Oneindia Kannada

ಬಾಲ್ಯದಿಂದಲೂ ಗಣಿತ ಮತ್ತು ವಿಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿದ್ದ ಲಕ್ಷ್ಮೀಕಾಂತ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದದ್ದು ಕನ್ನಡದಲ್ಲಿ ಎನ್ನುವುದು ಗಮನಿಸ ಬೇಕಾದ ಅಂಶ. ಬಾಲ್ಯದಲ್ಲಿ ಹೇಳಿಕೊಳ್ಳುವ ಯಾವ ಸೌಲಭ್ಯವೂ ಇಲ್ಲದೆ ಶ್ರೀಯುತರ ಇಲ್ಲಿನವರೆಗಿನ ಸಾಧನೆ ಹತ್ತಾರು ಕನ್ನಡಿಗರಿಗೆ ಪ್ರೇರಣೆಯಾದರೆ ಸಾಕು.

English summary
Kannadiga Dr. Lakshmikantha Mookanahalli Awarded With Prestigious C.A.Hogentogler For The Year 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X