• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಕ್ಕೊಬ್ಬರೇ ಡಾ. ರಾಜ್‌ಕುಮಾರ್, ಆನ್‌ಲೈನ್ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ

|

ಬೆಂಗಳೂರು, ಏಪ್ರಿಲ್ 21: ಏಪ್ರಿಲ್ 24 ಅಂದರೆ ಎಲ್ಲರಿಗೂ ತಿಳಿದಿರುವಂತೆ ವರನಟ ಡಾ. ರಾಜ್‌ಕುಮಾರ್ ಅವರ ಜನ್ಮದಿನ.

ಹೌದು ಈ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ಯೂರಿಯಾಸಿಟಿ.ಕಾಂ, ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಡಾ. ರಾಜ್‌ಕುಮಾರ್ ಕುರಿತ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಇದಾಗಿದ್ದು, ಮೇಘವಿ ಹಾಗೂ ಕೌಸ್ತುಭ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಕನ್ನಡ ಅಂದರೆ ಡಾ ರಾಜ್.. ಡಾ ರಾಜ್ ಅಂದರೆ ಕನ್ನಡ. ಇನ್ನೇನು ಏಪ್ರಿಲ್ ನಾಲ್ಕಕ್ಕೆ ಅವರ 92ನೇ ಜನ್ಮದಿನ ಬಂದೇ ಬಿಡ್ತು. ಪ್ರತಿವರ್ಷದಂತೆ ಹೊರಬಂದು ಸಂಭ್ರಮಿಸೋ ಅವಕಾಶವಿಲ್ಲದಿದ್ದರೇನು , ಆನ್‌ಲೈನ್ ಮೂಲಕ ಅರ್ಥಪೂರ್ಣವಾಗಿ ಡಾ. ರಾಜ್ ರವರ ಜೀವನ ಹಾಗೂ ಸಾಧನೆಯನ್ನು ಅರಿಯುವ ಹಾಗೂ ಸ್ಮರಿಸುವ ಉತ್ತಮ ಪ್ರಯತ್ನ ಈ ಯುವತಂಡದಿಂದ ನಡೆಯುತ್ತಿದೆ.

ಬೆಂಗಳೂರು ಮೂಲದ ಕ್ಯೂರಿಯಾಸಿಟಿ ಎಂಬ ಕ್ವಿಜ಼್ ಸಂಸ್ಥೆಯು 'ಕನ್ನಡಕ್ಕೊಬ್ಬರೇ' - ಡಾ. ರಾಜ್‌ಕುಮಾರ್ ವಿಶೇಷ ರಸಪ್ರಶ್ನೆಯನ್ನು, ಏ. 24ರಂದು ವರ್ಚುವಲ್ ಮಾದ್ಯಮದ ಮೂಲಕ ನಡೆಸುವ ಮೂಲಕ ಒಂದು ವಿನೂತನ ಪ್ರಯೋಗವನ್ನು ಮಾಡಲಿದೆ.

ವರನಟನ ಅಪ್ರತಿಮ ಬದುಕನ್ನು ಕ್ರಿಯಾತ್ಮಕವಾಗಿ ಪ್ರಶ್ನೆಗಳ ರೂಪದಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಇದಾಗಿದೆ. ವಿಶೇಷವೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಯಾರು ಬೇಕಾದರೂ ಭಾಗವಹಿಸುವ ಅವಕಾಶವನ್ನ ಒದಗಿಸಿದೆ.

ಕಾರ್ಯಕ್ರಮವನ್ನು ನಡೆಸಿಕೊಡಲಿರುವ 'ಥಟ್ ಅಂತ ಹೇಳಿ' ಖ್ಯಾತಿಯ ಕ್ವಿಜ಼್ ಮಾಸ್ಟರ್ ಮೇಘವಿ ಮಂಜುನಾಥ್ ಅವರು ಹೇಳುವಂತೆ ' ಭಾರತೀಯ ಚಿತ್ರರಂಗದಲ್ಲೇ ಡಾ ರಾಜ್ ಅವರ ವರ್ಚಸನ್ನು ಹೋಲುವ ಇನ್ನೊಬ್ಬ ಕಲಾವಿದ ಇಲ್ಲ.

ಅವರ ಸಾಧನೆಯ ಬಗ್ಗೆ ನಮ್ಮ ಪೀಳಿಗೆಯವರಿಗೆ ಇರುವಷ್ಟೇ ಅರಿವು ಹಾಗೂ ಅಭಿಮಾನವನ್ನು , ಈಗಿನ ಮಕ್ಕಳಲ್ಲೂ ಬಿತ್ತುವ ಪುಟ್ಟ ಪ್ರಯತ್ನವಿದು. ಹಾಗಾಗಿ ಶಾಲಾ ವಿಭಾಗದಲ್ಲೂ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ನೀಡಲಿದ್ದೇವೆ.

ಯಾವ ಸಂಘ ಸಂಸ್ಥೆಗಳ ಸಹಾಯವೂ ಇಲ್ಲದೆ , ಸ್ವಂತ ಆಸಕ್ತಿಯಿಂದ ಮುಂದೆ ಬಂದು ಸಹಕರಿಸದ ಕೆಲವು ರಾಜ್ ಅಭಿಮಾನಿಗಳ ನೆರವಿನಿಂದ ಈ ಕಾರ್ಯಕ್ರಮ ನಡೆಯಲಿದೆ'.

ಕಾರ್ಯಕ್ರಮದ ಸಹ ನಿರೂಪಕ ಕ್ವಿಜ಼್ ಮಾಸ್ಟರ್ ಕೌಸ್ತುಭ ವೇಣುಗೋಪಾಲ್ ಅವರು ' ಕನ್ನಡಿಗರೆಲ್ಲರೂ ರಾಜ್ ಕುಮಾರ್ ಅವರ ಅಭಿಮಾನಿಗಳೇ.. ಎಲ್ಲರೂ ತಮ್ಮದೇ ರೀತಿಯಲ್ಲಿ ಅಣ್ಣಾವ್ರನ್ನ ಅವರ ಜನ್ಮದಿನದಂದು ನೆನಪಿಸಿಕೊಳ್ಳುತ್ತಾರೆ.

ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡಿ ಬೆಳೆದ ನನಗೆ, ಅವರ ಕುರಿತಾದ ಕೆಲವು ರೋಚಕ ವಿಷಯಗಳನ್ನು ಮೆಲಕು ಹಾಕೋ, ಇತರೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳೋ ಅವಕಾಶ ಇದು.' ಎಂದರು.

   ಸರ್ಕಾರದ ಹೊಸ ಕಟ್ಟು ನಿಟ್ಟಿನ ಕ್ರಮ ! | Oneindia Kannada

   ಕಳೆದ ವರ್ಷ ಲಾಕ್‌ಡೌನ್ ಆದಾಗಿನಿಂದ, ವರ್ಚುವಲ್ ರಸಪ್ರಶ್ನೆಗಳು ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ. ಮನೆಯಿಂದಲೇ ಸ್ಪರ್ಧಿಸೋ ಅವಕಾಶವಿರುವುದರಿಂದ ಭಾಗವಹಿಸುವವರ ಸಂಖ್ಯೆ ಹೆಚ್ಚಾಗಿರುವುದು ವಿಶೇಷ.

   ಕ್ವಿಜ್ ಕಾರ್ಯಕ್ರಮಗಳೆಂದರೆ ಎಂದರೆ ಯಾರೋ ಬುದ್ಧಿವಂತ ಕೆಲವರಿಗಷ್ಟೇ ಎನ್ನುವ ಪರಿಕಲ್ಪನೆಯನ್ನು ಸುಳ್ಳಾಗಿಸಿ , ಮನೋರಂಜಕವಾಗಿ ನಡೆಸುವ ಈ ರೀತಿಯ ಹಲವು ಪ್ರಯತ್ನಗಳು ನಡೆಯುತ್ತಿರುವುದು ವಿಶೇಷ.

   ಮುಕ್ತ ಹಾಗೂ ಶಾಲಾ ವಿಭಾಗದ 6 ಸ್ಪರ್ಧಿಗಳಿಗೆ ಒಟ್ಟು 12 ಸಾವಿರ ರೂ. ಮೊತ್ತದ ನಗದು ಬಹುಮಾನ ನೀಡಲಾಗುತ್ತದೆ. ಏಪ್ರಿಲ್ 24ರಂದು ಸಂಜೆ 6ಗಂಟೆಗೆ ರಸಪ್ರಶ್ನೆ ಕಾರ್ಯಕ್ರಮ ಶುರುವಾಗಲಿದೆ. 'ಕನ್ನಡಕ್ಕೊಬ್ಬರೇ' ಡಾ ರಾಜ್ ಕ್ವಿಜ಼್ ನಲ್ಲಿ ಭಾಗವಹಿಸುವರು, ಈ ಲಿಂಕ್‌ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.

   English summary
   Quriositi.com organising Kannadakkobbare Dr Rajkumar Online Quiz competition on April 24th, On the occasion of Dr Rajkumar Birthday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X