ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕನ್ನಡಕ್ಕಾಗಿ ನಾವು' ಅಭಿಯಾನದ ವಿವರ ಬಿಡುಗಡೆ ಮಾಡಿದ ಸಚಿವ ವಿ. ಸುನಿಲ್‌ ಕುಮಾರ್‌!

|
Google Oneindia Kannada News

ಬೆಂಗಳೂರು, ಅ. 22: "ಕನ್ನಡ ಕೇವಲ ಭಾಷೆಯಲ್ಲ, ಇದು ನಮ್ಮ ಹೆಮ್ಮೆಯ ಸಂಸ್ಕೃತಿ. ಇದನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ 66ನೇ ಕನ್ನಡ ರಾಜ್ಯೋತ್ಸವವನ್ನು 'ಕನ್ನಡಕ್ಕಾಗಿ ನಾವು' ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ,' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

'ಕನ್ನಡಕ್ಕಾಗಿ ನಾವು' ಅಭಿಯಾನದಲ್ಲಿ ಕನ್ನಡದ ಸಂಸ್ಕೃತಿ ಸಾರುವ ನಾಟಕ, ಸಂಗೀತ, ನೃತ್ಯ, ಗೀತ ಗಾಯನ ಕಾಯಕ್ರಮಗಳು ನಾಡಿನಾಧ್ಯಂತ ನಡೆಯಲಿದೆ. ಅಕ್ಟೋಬರ್‌ 24ರಂದು 'ಮಾತಾಡ್ ಮಾತಾಡ್‌ ಕನ್ನಡ' ಎಂಬ ಘೋಷ ವಾಕ್ಯದೊಂದಿಗೆ ಅಭಿಯಾನ ಶುರುವಾಗಲಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಡೀ ಒಂದು ವಾರ ಕನ್ನಡ ಕಾಯಕ್ರಮಗಳು ನಡೆಯಲಿವೆ ಎಂದು ಇದೇ ವೇಳೆ ವಿವರಿಸಿರುವ ಅವರು, ಕಾರ್ಯಕ್ರಮಗಳ ವಿವರವನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಹಲವು ಕಡೆಗಳಲ್ಲಿ 'ಕನ್ನಡಕ್ಕಾಗಿ ನಾವು' ಅಭಿಯಾನದ ಹಿನ್ನೆಲೆಯಲ್ಲಿ ನಿರಂತರ ಕಾಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಹಿನ್ನೆಲೆಯಲ್ಲಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಸಂಪೂರ್ಣ ವಿವರ ಮುಂದಿದೆ.

ಅ. 24 ಹಾಗೂ 25 ರಂದು ನಡೆಯಲಿರುವ ಕಾರ್ಯಕ್ರಮಗಳು

ಅ. 24 ಹಾಗೂ 25 ರಂದು ನಡೆಯಲಿರುವ ಕಾರ್ಯಕ್ರಮಗಳು

ಅಕ್ಟೋಬರ್‌ 24 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಬೆಳಿಗ್ಗೆ 10ಗಂಟೆಗೆ ಮೈಸೂರು ರಂಗಾಯಣದಿಂದ ಡಾ. ಎಸ್‌.ಎಲ್.‌ ಭೈರಪ್ಪ ಅವರ 'ಪರ್ವ' ನಾಟಕ ಪ್ರದರ್ಶನವಾಗಲಿದೆ. ಬೆಂಗಳೂರು ನಾಟಕ ಅಕಾಡಮಿ ಯವರಿಂದ ಜಾಲಹಳ್ಳಿಯ ಬಿ.ಇ.ಎಲ್‌ ರಂಗಮಂದಿರದಲ್ಲಿ ರಂಗ ಪಯಣ ಪ್ರಸ್ತುತ ಪಡಿಸುವ 'ಗುಲಾಬಿ ಗ್ಯಾಂಗ್' ನಾಟಕ ನಡೆಯಲಿದೆ. ಅಕ್ಟೋಬರ್‌ 25 ರಂದು ಸಂಜೆ 5 ಗಂಟೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ 'ಮೂಕನ ಮಕ್ಕಳು' ನಾಟಕ ಪ್ರದರ್ಶನವಾಗಲಿದೆ. ಮಲ್ಲೇಶ್ವರಂನ ಎಂ.ಇ.ಎಸ್‌. ಕಾಲೇಜಿನ ಸಭಾಭವನದಲ್ಲಿ ದೃಶ್ಯಕಾವ್ಯ ಪ್ರಸ್ತುತ ಪಡಿಸುವ 'ಮಾಯಾಬೇಟೆ' ನಾಟಕ ಪ್ರದರ್ಶನವಾಗಲಿದೆ.

ಅ. 26 ಹಾಗೂ 27ರಂದು ನಡೆಯುವ ಕಾರ್ಯಕ್ರಮಗಳು!

ಅ. 26 ಹಾಗೂ 27ರಂದು ನಡೆಯುವ ಕಾರ್ಯಕ್ರಮಗಳು!

ಅ 26ರ ಸಂಜೆ 6.30ಕ್ಕೆ ರಂದು ಶಿವಮೊಗ್ಗ ರಂಗಾಯಣದವರಿಂದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ 'ಚಾಣಕ್ಯ ಪ್ರಪಂಚ' ನಾಟಕ, ಜೊತೆಗೆ ದಾವಣಗೆರೆ ವೃತಿ ರಂಗಾಯಣದಿಂದ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ 'ರಾಶಿ ಚಕ್ರ' ನಾಟಕ, ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಸ್ತುತ ಪಡಿಸುವ 'ಶಿವರಾತ್ರಿ' ನಾಟಕ ಹಾಗೂ ಮೈಸೂರು ರಂಗಾಯಣದಿಂದ ಪೀಣ್ಯದ ಬಿ.ಇ.ಎಲ್‌ನಲ್ಲಿ 'ಮೂಕನ ಮಕ್ಕಳು' ನಾಟಕ ಪ್ರದರ್ಶನ ಗೊಳ್ಳಲಿದೆ.

ಅಕ್ಟೋಬರ್‌ 27 ರಂದು ಸಂಜೆ 6.30ಕ್ಕೆ ಮೈಸೂರು ರಂಗಾಯಣದಿಂದ ಬೆಂಗಳೂರಿನ ಕಲ್ಯಾಣ ನಗರದ ಡಾ. ಶಿವಕುಮಾರಸ್ವಾಮಿ ಜ್ಞಾನಸೌಧದಲ್ಲಿ 'ಮೂಕನ ಮಕ್ಕಳು', ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ದಾವಣಗೆರೆ ವೃತಿ ರಂಗಾಯಣದವರಿಂದ 'ಕನ್ನಡ ಕಲಿಯೋಣ ಬಾ' ನಾಟಕ, ಧಾರವಾಡ ರಂಗಾಯಣದವರಿಂದ ಮಲ್ಲೇಶ್ವರಂ ಕುವೆಂಪು ಸಭಾಂಗಣದಲ್ಲಿ 'ಕತ್ತಲೆಯ ಕೊರೊನಾ' ನಾಟಕ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಮೆಜೆಸ್ಟಿಕ್‌ ಆರ್.ಎಂ.ಎಸ್‌. ಕನ್ನಡ ಸಂಘದಲ್ಲಿ ಮಹದೇವಯ್ಯ ತಂಡದವರಿಂದ ಸುಗಮ ಸಂಗೀತ ಕಾಯಕ್ರಮ ನಡೆಯಲಿದೆ.

ಅ. 28, 29ರಂದು ನಡೆಯಲಿರುವ ಕಾರ್ಯಕ್ರಮಗಳು

ಅ. 28, 29ರಂದು ನಡೆಯಲಿರುವ ಕಾರ್ಯಕ್ರಮಗಳು

ಅಕ್ಟೋಬರ್‌ 28ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಕುರುಬರಹಳ್ಳಿಯ ರಾಜ್‌ಕುಮಾರ್ ಸಭಾಂಗಣದಲ್ಲಿ 'ಕತ್ತಲೆ ಕರೊನಾ' ನಾಟಕ, ಸುಚಿತ್ರ ಫಿಲಂ ಸೋಸೈಟಿಯಲ್ಲಿ 'ಶ್ರದ್ಧ ಮತ್ತು ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರೆಗಳು' ನಾಟಕ, ಕಲಬುರಗಿ ರಂಗಾಯಣ ದವರಿಂದ ಆರ್‌ಪಿಸಿ ಬಡಾವಣೆಯ ಗ್ರಂಥಾಲಯ ಸಭಾಗಂಣದಲ್ಲಿ ಸಿರಿ ಪುರಂದರ ನಾಟಕ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ರಾಜಾಜಿನಗರದ ಬಾಲಮೋಹನ ವಿದ್ಯಾಲಯದಲ್ಲಿ ಹೆಚ್‌.ಎನ್‌. ಮೀರಾ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್‌ 29 ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಬ್ಯಾಟರಾಯನಪುರ ನಗರಸಭಾ ಸಭಾಂಗಣದಲ್ಲಿ 'ಕತ್ತಲೆ ಕರೊನಾ' ನಾಟಕ, ಕಲಬುರಗಿ ರಂಗಾಯಣದಿಂದ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಸಿರಿ ಪುರಂದರ ನಾಟಕಗಳು ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ವಿಜಯನಗರದ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಸಂಘದಲ್ಲಿ 'ಸವಿಗಾನ ಲಹರಿ' ಸಂಗೀತ ಕಾರ್ಯಕ್ರಮ ನಡೆಯಲಿದೆ.

Recommended Video

Ind vs England ರದ್ದಾಗಿದ್ದ ಪಂದ್ಯ ಯಾವಾಗ ಗೊತ್ತಾ | Oneindia Kannada
ಅ. 30, 31ರಂದು ನಡೆಯಲಿರುವ ಕಾರ್ಯಕ್ರಮಗಳು

ಅ. 30, 31ರಂದು ನಡೆಯಲಿರುವ ಕಾರ್ಯಕ್ರಮಗಳು

ಅಕ್ಟೋಬರ್‌ 30ರಂದು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರಿಂದ ಕಾಮಾಕ್ಷಿಪಾಳ್ಯದ ರಾಘವೇಂದ್ರ ಆಡಿಟೋರಿಯಂನಲ್ಲಿ 'ಕಾನಿನ ಪೌರಾಣಿಕ' ನಾಟಕ ಪ್ರದರ್ಶನವಾಗಲಿದ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಕುಮಾರಸ್ವಾಮಿ ಲೇಔಟ್‌ನ ಕೇಂದ್ರ ಗಂಥಾಲಯದಲ್ಲಿ 'ಕನ್ನಡ ಗೀತೆಗಳು' ಎನ್ನುವ ಸಂಗೀತ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್‌ 31 ರಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಮಲ್ಲೇಶ್ವರದ ಸೇವಾಸದನದಲ್ಲಿ 'ಕನ್ನಡ ಗೀತೆಗಳಿಗೆ ನೃತ್ಯ' ಕಾಯಕ್ರಮ ನಡೆಯಲಿದೆ. ಅದೇ ದಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಮಲ್ಲೇಶ್ವರದ ಸೇವಾಸದನದಲ್ಲಿ 'ಕನ್ನಡ ಗೀತೆಗಳಿಗೆ ನೃತ್ಯ' ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲ ಕಾಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡದ ಈ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ವಿನಂತಿಸಿದ್ದಾರೆ.

English summary
Kannadakkagi Navu campaign details released by Kannada and culture minister V Sunil Kumar. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X