ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜ್ಞಾನಪೀಠ ಪ್ರಶಸ್ತಿಗೆ ಯುಆರ್ಎ, ಕಾರ್ನಾಡ್ ಅರ್ಹರಲ್ಲ'

By Mahesh
|
Google Oneindia Kannada News

ಬೆಂಗಳೂರು, ಫೆ.8 : ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರಿಗೆ ಹೆಚ್ಚಿನ ಮನ್ನಣೆ ಸಿಗುತ್ತಿರುವುದು ಒಳ್ಳೆ ಬೆಳವಣಿಗೆಯಲ್ಲ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.

ಈ ವರೆಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಪೈಕಿ ಯುಆರ್ ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಅವರು ಪ್ರಶಸ್ತಿಗೆ ಅರ್ಹರಲ್ಲ ಎಂದು 'ಅರಮನೆ' ಕೃತಿಗಾಗಿ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕುಂ.ವೀ ಹೇಳಿದ್ದಾರೆ.

ಕನ್ನಡ ಸಾಹಿತಿಗಳ ಪೈಕಿ ಯುಆರ್ ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಅವರು ಉತ್ತಮ ಸಾಹಿತಿಗಳು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಇಬ್ಬರನ್ನು ಬಿಟ್ಟು ಉಳಿದ ಆರು ಮಂದಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತರ ಸಾಲಿನಲ್ಲಿ ಕೂರಿಸುವುದು ಅಷ್ಟು ಸರಿ ಕಾಣುವುದಿಲ್ಲ. ಈ ಇಬ್ಬರು ಲೇಖಕರು ಕನ್ನಡದ ಸರ್ವ ಶ್ರೇಷ್ಠ ಸಾಹಿತಿಗಳು ಎಂದು ಹೇಳಲಾಗದು ಎಂದು ವೀರಭದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ನನ್ನ ಅಭಿಪ್ರಾಯ ಜ್ಞಾನಪೀಠ ಪ್ರಶಸ್ತಿಗೆ ಇಬ್ಬರು ಅರ್ಹರೇ ಇಲ್ಲವೇ ಎಂಬುದರ ಬಗ್ಗೆ ಮಾತ್ರ ಅಷ್ಟೆ. ಉಳಿದಂತೆ ಇಬ್ಬರು ಕನ್ನಡದ ಉತ್ತಮ ಸಾಹಿತಿಗಳು ಎಂದು ವೀರಭದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಾರ್ನಾಡ್ ಅವರಿಗಿಂತ ಅನಂತಮೂರ್ತಿ ಅವರ ಸಾಹಿತ್ಯ ಓದಬಹುದು. ಆದರೆ, ಇಬ್ಬರ ಕೃತಿಗಳಲ್ಲಿ ಕನ್ನಡದ ಸೊಗಡು ಕಮ್ಮಿ, ಒಟ್ಟಾರೆ ಜ್ಞಾನಪೀಠ ಎಂಬುದೇ ಅರ್ಥಹೀನ. ಈ ಇಬ್ಬರನ್ನು ಕುವೆಂಪು, ಮಾಸ್ತಿ, ಬೇಂದ್ರೆ ಸಾಲಿಗೆ ಸೇರಿಸುವುದು ತಪ್ಪು ಎಂದು ಕುಂ ವೀರಭದ್ರಪ್ಪ ಅವರು ಕೊಪ್ಪಳದಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದಾರೆ.

Noted Kannada writer kum. Veerabhadrappa kicks up Jnanpith storm

ನಂತರ ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ಸ್ಪಷ್ಟನೆ ನೀಡಿದ ವೀರಭದ್ರಪ್ಪ ಅವರು, ಅನುವಾದ ಸಾಹಿತ್ಯ, ಕನ್ನಡದಿಂದ ಇಂಗ್ಲೀಷ್ ಗೆ ವಲಸೆ ಹೋದ ಸಾಹಿತ್ಯಕ್ಕೆ ಮನ್ನಣೆ ಸಿಗುತ್ತಿರುವುದು ದುರಂತ. ಕಾರ್ನಾಡ್ ನಾಟಕ ಗುಣಮಟ್ಟ ಸರಿಯಿಲ್ಲ, ಅವರು ಠಾಗೋರ್ ಅವರನ್ನು ಟೀಕಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಜೈನ ಸಮುದಾಯ, ಮೂಲಭೂತವಾದಿಗಳು ನೀಡುವ ಪ್ರಶಸ್ತಿ ಹೀಗಾಗಿ ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಒಳ್ಳೆಯದಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ 8 ಜನರೇ ಕನ್ನಡ ಸಾಹಿತಿಗಳೆಂದು ಬಿಂಬಿಸುವುದು ಅರೋಗ್ಯಕರವಲ್ಲ ಎಂದಿದ್ದಾರೆ.

ಸಾರ್ವಜನಿಕ, ಶೈಕ್ಷಣಿಕ ವಲಯದಲ್ಲಿ ಈ ಇಬ್ಬರು ಸೇರಿದಂತೆ ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಮಾತ್ರ ಶ್ರೇಷ್ಠ ಸಾಹಿತಿಗಳು ಎಂದು ಬಿಂಬಿಸುತ್ತಿರುವುದು ತಪ್ಪು. ಅನಂತಮೂರ್ತಿ, ಕಾರ್ನಾಡ್ ಅವರಿಗಿಂತ ಕೆಪಿ ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲ, ನಿಸಾರ್ ಅಹಮದ್, ಪಿ. ಲಂಕೇಶ್ ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಕುಂವೀ ಹೇಳಿದ್ದಾರೆ.

ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ ಇದು ಜ್ಞಾನಪೀಠ ಪ್ರಶಸ್ತಿಗಿಂತ ಸಾವಿರ ಪಟ್ಟು ಮೇಲು, ನಮ್ಮ ಶಾಲೆಗಳಲ್ಲಿ ಪಂಪ, ರನ್ನ, ಪೊನ್ನ, ಇವರ ಬಗ್ಗೆ ತಿಳಿ ಹೇಳಬೇಕಾಗಿದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಇಂಗ್ಲೀಷ್ ಅನುವಾದವಾಗಿದ್ದರೆ ನೊಬೆಲ್ ಸಿಗುತ್ತಿತ್ತು. ಠಾಗೋರ್ ಅವರ ಗೀತಾಂಜಲಿಗೆ ಕವಿ ಯೇಟ್ಸ್ ಮುನ್ನುಡಿ ಬರೆಯದಿದ್ದರೆ ಠಾಗೋರ್ ಅವರಿಗೆ ನೊಬೆಲ್ ಸಿಗುವುದೇ ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Noted Kannada writer kum. Veerabhadrappa kicks up Jnanpith storm said U.R Ananthamurthy and Girish Karnad did not deserve the award. I would have been proud if the choice had been made in a more transparent manner and had it been awarded to a more deserving candidates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X