ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವಿವಿ ಉಳಿಸಿ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಫುಲ್ ಟ್ರೆಂಡಿಂಗ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಹಂಪಿ ಕನ್ನಡ ವಿಶ್ವವಿದ್ಯಾಲಯ ಬೆಂಬಲಿಸಿ, ಕನ್ನಡ ವಿವಿ ಉಳಿಸಿ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಕರ್ನಾಟಕ ರಕ್ಷಣಾ ವೇದಿಕೆ ಕರೆಕೊಟ್ಟಿದ್ದ ಟ್ವಿಟ್ಟರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಟ್ವಿಟ್ಟರ್‌ನಲ್ಲಿ ಈಗಾಗಲೇ #ಕನ್ನಡ ವಿವಿ ಉಳಿಸಿ ಟ್ರೆಂಟ್ ಆಗುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ವಿವಿ ಉಳಿಸಿ ಟ್ವಿಟ್ಟರ್ ಅಭಿಯಾನಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ವಿವಿ ಉಳಿಸಿ ಟ್ವಿಟ್ಟರ್ ಅಭಿಯಾನ

ಧರ್ಮದ ಅಮಲಿನಲ್ಲಿ ತೇಲಾಡುತ್ತಿರುವ ಕನ್ನಡಿಗರೆ ಇಂದು ಕನ್ನಡ ನಾಡಿನಲ್ಲಿ ಕನ್ನಡ ವಿವಿಗೆ ಬಂದಿರುವ ಗತಿಯೇ ನಾಳೆ ಕನ್ನಡಿಗರಿಗೆ ಬರುತ್ತದೆ ಎಂದು ಟ್ವಿಟ್ಟಿಗರು ಎಚ್ಚರಿಕೆ ನೀಡಿದ್ದಾರೆ.

Kannada VV Ulisi Twitter Campaign In Support To Humpi Kannada University

ಹಂಪಿ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಒಂದು ವರ್ಷದಿಂದ ಬೇಕಾಗಿರುವ ಅನುದಾನ ಒದಗಿಸದೆ ವಿಧ್ಯಾರ್ಥಿಗಳಿಗೆ ಕಣ್ಣೀರುತರಿಸುತ್ತಿದ್ದರೆ. ಈ ವಿವಿ ಯಲ್ಲಿ 99% ರಷ್ಟು ಬಡಕುಟುಂಬದ ಮಕ್ಕಳು ಓದುತ್ತಿದ್ದಾರೆ. ಸರ್ಕಾರದ ಫೆಲೋಶಿಪ್ ನಂಬಿಕೊಂಡು ಬಂದಿರುವ ಅನೇಕ ವಿಧ್ಯಾರ್ಥಿಗಳಿಗೆ ಭಾರಿ ನಿರಾಸೆ ಮಾಡಿದೆ ಸರ್ಕಾರ.

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಇಂತ ದೊಡ್ಡ ಮೋಸ ಮಾಡುತ್ತಿರುವ ಸರ್ಕಾರಕ್ಕೆ ಎಲ್ಲ ಕನ್ನಡಿಗರಿಂದ ದಿಕ್ಕಾರ. ಕನ್ನಡ ವಿವಿ ಮೇಲೆ ಯಾಕೆ ಇಂತಹ ಧೋರಣೆ. ಸರ್ಕಾರದ ಇಂತಹ ತಾತ್ಸಾರ ಖಂಡನೀಯ.

ಎಂದಿನಂತೆ ಇದಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿರುವವರು ಕರ್ನಾಟಕ ರಕ್ಷಣಾ ವೇದಿಕೆ. ಇಲ್ಲಿನ ಸಂಶೋದನಾ ವಿದ್ಯಾರ್ಥಿಗಳ ಅಳಲು ನಿಲ್ಲಿಸಲು ಕರ್ನಾಟಕ ರಕ್ಷಣಾ ವೇದಿಕೆಯು ಇಂದು ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನವನ್ನು ಆಯೋಜಿಸಿದ್ದಾರೆ. ಎಲ್ಲಾ ಕನ್ನಡಿಗರೂ ಸೇರಿ ಈ ಅಭಿಯಾನಕ್ಕೆ ಕೈ ಜೋಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ನಿಲ್ಲಬೇಕು ಎಂದಿದ್ದಾರೆ ದಿವ್ಯಶ್ರೀ.ವಿ.

Kannada VV Ulisi Twitter Campaign In Support To Hampi Kannada University

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಸಂಶೋಧನೆ, ಬೋಧನೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ನ್ಯಾಕ್ ಗುಣಮಟ್ಟದಲ್ಲಿ ಎ+ ಇದ್ದ ಶ್ರೇಣಿ ಮೂರು ಮೆಟ್ಟಿಲು ಕೆಳಗಿಳಿದು ಬಿ ಶ್ರೇಣಿಗೆ ಇಳಿದಿದೆ.

ವಿಶ್ವವಿದ್ಯಾಲಯದ ಕುಲತಿಗಳಾದ ಪ್ರೊ.ಸ.ಚಿ.ರಮೇಶ್ ರಾಜ್ಯ ಸರ್ಕಾರದಿಂದ ಅನುದಾನಗಳನ್ನು ತರಲು ವಿಫಲರಾಗಿದ್ದಾರೆ. ಬಿ ಶ್ರೇಣಿಗೆ ಇಳಿದ ಪರಿಣಾಮವಾಗಿ ಯುಜಿಸಿಯಿಂದ ಬರುವ ಅನುದಾನಗಳೂ ನಿಂತುಹೋಗಿದೆ. ಕುಲಪತಿಗಳು, ಕುಲಸಚಿವರೇ ಅಸಹಾಯಕತೆ ಪ್ರದರ್ಶಿಸುತ್ತಿರುವುದರಿಂದ ಅರಾಜಕ ವ್ಯವಸ್ಥೆ ಸೃಷ್ಟಿಯಾಗಿದೆ.

Recommended Video

ಕೇವಲ 39 ಗಳಿಸಿ ಎಲ್ಲಾ ವಿಕೆಟ್ ಒಪ್ಪಿಸಿದ ನಮ್ಮ ಭಾರತ | Oneindia Kannada

ಕಳೆದ ಎರಡು ವರ್ಷಗಳಿಂದ ಕನ್ನಡ ವಿವಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಸಂಶೋಧನಾ ಕಾರ್ಯಗಳು ಸ್ಥಗಿತಗೊಂಡಿವೆ ಅಥವಾ ವೇಗ ಕಳೆದುಕೊಂಡಿವೆ. ದೂರಶಿಕ್ಷಣ ಕೋರ್ಸ್ ಗಳು ಮುಚ್ಚಿಕೊಳ್ಳುತ್ತಿವೆ. ಇದೆಲ್ಲವನ್ನೂ ಸರಿಪಡಿಸಬೇಕಾದ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ ಎಂದಿದ್ದಾರೆ.

English summary
Kannada VV Ulisi Campaign Trending In Twitter now, Support To Hampi Kannada University.Karnataka Rakshana Vedike Organised this campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X