• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನಿಟ್ರ್ಯಾಪ್ ಗಾಳಕ್ಕೆ ಧಾರವಾಹಿ ನಟಿಯರೇ ಹುಳು

|
Google Oneindia Kannada News

ಬೆಂಗಳೂರು, ಡಿಸೆಂಬರ್ 04: ಹಲವು ಶಾಸಕರು, ಉದ್ಯಮಿಗಳನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಲು ಧಾರವಾಹಿ ನಡಿಯರನ್ನು ಆರೋಪಿ ರಾಘವೇಂದ್ರ ಬಳಸುತ್ತಿದ್ದನೆಂಬ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.

ಹಲವು ಧಾರವಾಹಿ ನಟಿಯರು ರಾಘವೇಂದ್ರ ಗೆ ಪರಿಚಯವಿದ್ದು, ಅವರನ್ನು ಬಳಸಿಯೇ ರಾಘವೇಂದ್ರ ಶಾಸಕರನ್ನು ಉದ್ಯಮಪತಿಗಳನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸುತ್ತಿದ್ದ.

ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್

ಹನಿಟ್ರ್ಯಾಪ್ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಮುಖ್ಯ ಆರೋಪಿ ರಾಘವೇಂದ್ರ ಜೊತೆಗೆ ಇಬ್ಬರು ಧಾರವಾಹಿ ನಟಿಯರನ್ನು ಬಂಧಿಸಲಾಗಿದೆ. ಇನ್ನೂ ಹಲವು ನಟಿಯರು ಹನಿಟ್ರ್ಯಾಪ್‌ ಗೆ ಕೆಲಸ ಮಾಡಿರುವ ಶಂಕೆ ಇದ್ದು, ತನಿಖೆ ಸಾಗಿದೆ.

ಪರಿಚಿತ ಮುಖಗಳನ್ನೇ ರಾಘವೇಂದ್ರ ಆಯ್ಕೆ ಮಾಡಿಕೊಳ್ಳುತ್ತಿದ್ದ

ಪರಿಚಿತ ಮುಖಗಳನ್ನೇ ರಾಘವೇಂದ್ರ ಆಯ್ಕೆ ಮಾಡಿಕೊಳ್ಳುತ್ತಿದ್ದ

ಧಾರವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುವವ ಯುವತಿಯರನ್ನೇ ಈ ಕಾರ್ಯಕ್ಕೆ ರಾಘವೇಂದ್ರ ಆಯ್ಕೆ ಮಾಡುತ್ತಿದ್ದ. ಧಾರವಾಹಿ ನಟಿಯರು ಅವಕಾಶಕ್ಕಾಗಿ ತೆಗೆಸಿಕೊಂಡಿರುವ ಚಿತ್ರಗಳನ್ನೇ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಉದ್ದೇಶಿತ ವ್ಯಕ್ತಿಗೆ ಕಳುಹಿಸಿ ಅವರನ್ನು ಬಲೆಗೆ ಬೀಳಿಸುತ್ತಿದ್ದ ರಾಘವೇಂದ್ರ.

ಬೇರೆ ಜಾಲವೂ ಕಾರ್ಯನಿರ್ವಹಿಸುತ್ತಿರುವ ಶಂಕೆ

ಬೇರೆ ಜಾಲವೂ ಕಾರ್ಯನಿರ್ವಹಿಸುತ್ತಿರುವ ಶಂಕೆ

ಹಲವು ಧಾರವಾಹಿ ನಟಿಯರು, ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುವ ನಟಿಯರು ಈ ಜಾಲದಲ್ಲಿ ಇರುವುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಇವರೆಲ್ಲರೂ ರಾಘವೇಂದ್ರ ಮೂಲಕವೇ ಹನಿಟ್ರ್ಯಾಪ್ ಮಾಡುತ್ತಿದ್ದರೆ, ಅಥವಾ ಸ್ವತಂತ್ರ್ಯವಾಗಿ ಅಥವಾ ಬೇರೆ ಜಾಲದ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರೆ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆ

ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಸರ್ಕಾರದಿಂದಲೇ ಬ್ರೇಕ್?

ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಸರ್ಕಾರದಿಂದಲೇ ಬ್ರೇಕ್?

ಆದರೆ ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಉಪಚುನಾವಣೆ ಅಡ್ಡಗಾಲು ಹಾಕಿದೆ. ಉಪಚುನಾವಣೆ ಮುಗಿಯುವವರೆಗೂ ಹನಿಟ್ರ್ಯಾಪ್ ಪ್ರಕರಣವನ್ನು ಕೈಬಿಡುವಂತೆ ಆಡಳಿತ ಪಕ್ಷವು ಖಡಕ್ ಸಂದೇಶವನ್ನು ಸಿಸಿಬಿ ಗೆ ನೀಡಿದೆ.

ಹನಿಟ್ರ್ಯಾಪ್ ಬಲೆಯಲ್ಲಿ ರಾಜ್ಯದ 12 ಮಾಜಿ, ಹಾಲಿ ಶಾಸಕರುಹನಿಟ್ರ್ಯಾಪ್ ಬಲೆಯಲ್ಲಿ ರಾಜ್ಯದ 12 ಮಾಜಿ, ಹಾಲಿ ಶಾಸಕರು

ಉಪಚುನಾವಣೆ ಮೇಲೆ ಪರಿಣಾಮ

ಉಪಚುನಾವಣೆ ಮೇಲೆ ಪರಿಣಾಮ

ಹಲವು ಹಾಲಿ ಮತ್ತು ಮಾಜಿ ಶಾಸಕರು ಸಿಲುಕಿರುವ ಹನಿಟ್ರ್ಯಾಪ್ ತನಿಖೆ ಮುಂದುವರೆದರೆ ಆಡಳಿತ ಪಕ್ಷಕ್ಕೆ ಭಾರಿ ಮುಖಭಂಗ ಉಂಟಾಗಲಿದ್ದು, ಅದರ ಪರಿಣಾಮ ಉಪಚುನಾವಣೆ ಮೇಲೆ ಬೀಳುತ್ತದೆಂಬ ಆತಂಕದಿಂದ ಪೊಲೀಸರಿಗೆ ಈ ಮೌಖಿಕ ಆದೇಶವನ್ನು ಹೊರಡಿಸಲಾಗಿದ.

ಬಿಜೆಪಿ ಶಾಸಕನ 'ಆ' ವಿಡಿಯೋಗೆ ಲಕ್ಷಾಂತರ ಹಣ ಕೊಟ್ಟಿದ್ದ ಕಾಂಗ್ರೆಸ್‌ ಶಾಸಕಬಿಜೆಪಿ ಶಾಸಕನ 'ಆ' ವಿಡಿಯೋಗೆ ಲಕ್ಷಾಂತರ ಹಣ ಕೊಟ್ಟಿದ್ದ ಕಾಂಗ್ರೆಸ್‌ ಶಾಸಕ

English summary
Kannada serial actress used for honey trap by accused Raghavendra. CCB investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X