ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಕಡ್ಡಾಯದ ಸುತ್ತೋಲೆ ರದ್ದುಮಾಡಿದ ಸರಕಾರ; ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಸ್ವಾಗತ

|
Google Oneindia Kannada News

ಬೆಂಗಳೂರು ಜೂ. 18: ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಏರ್ಪಡಿಸಿರುವ ಪ್ರವಾಸಕ್ಕೆ ವಿದ್ಯಾರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮ ಸ್ವಾಗತಾರ್ಹವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಶುಕ್ರವಾರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ʻಒಂದು ಭಾರತ - ಶ್ರೇಷ್ಠ ಭಾರತʼ ಕಾರ್ಯಕ್ರಮದಡಿ ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳ ಪ್ರವಾಸಕ್ಕೆ ಆಯೋಜಿಸಿದೆ. ಪ್ರವಾಸಕ್ಕೆ ಹಿಂದಿ ಭಾಷೆ ಬಲ್ಲ, ತಂತ್ರಜ್ಞಾನ ತಿಳುವಳಿಕೆವುಳ್ಳ ವಿದ್ಯಾರ್ಥಿಗಳಿಗೆ ಆಧ್ಯತೆ ಎನ್ನುವ ಸುತ್ತೋಲೆ ವಾಪಸ್ ಪಡೆಯುವಂತೆ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚಿಸಿರುವುದು ಅಭಿನಂದಾನರ್ಹ ಎಂದರು.

'ರಾಷ್ಟ್ರಗೀತೆ'ಗೆ ಅವಮಾನಿಸಿದ್ರೆ ಮೂರು ವರ್ಷ ಜೈಲು: 'ನಾಡಗೀತೆ'ಗೆ ಅವಮಾನ ಮಾಡಿದ್ರೆ?'ರಾಷ್ಟ್ರಗೀತೆ'ಗೆ ಅವಮಾನಿಸಿದ್ರೆ ಮೂರು ವರ್ಷ ಜೈಲು: 'ನಾಡಗೀತೆ'ಗೆ ಅವಮಾನ ಮಾಡಿದ್ರೆ?

ಹಿಂದಿ ಕಡ್ಡಾಯ ಎಂದು ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಉಪನಿರ್ದೇಶಕರು ಹೊರಡಿಸಿರುವ ಸುತ್ತೋಲೆ ವಿರುದ್ಧ ಪರಿಷತ್ತು ಧ್ವನಿ ಎತ್ತಿತ್ತು. ಸುತ್ತೋಲೆ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಲ್ಲಿ ಭಾಷಾ ಗೊಂದಲ ಹುಟ್ಟುಹಾಕುವುದು ಸರಿಯಾದ ಕ್ರಮವಲ್ಲ. ಇದರಿಂದ ಕನ್ನಡ ಭಾಷೆಗೆ ಅಪಚಾರ ವೆಸಗಿದಂತಾಗುತ್ತದೆ. ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ ಇರುವಾಗ ʻಆಜಾದಿ ಕಾ ಅಮೃತ್ ಮಹೋತ್ಸವʼ ಎನ್ನುವ ಹಿಂದಿ ಶಿಷಿಕೆಯನ್ನು ಕನ್ನಡಕ್ಕೆ ಅನುವಾದಿಸಿ ʻಸ್ವಾತಂತ್ರೋತ್ಸವದ ಅಮೃತ ಮಹೋತ್ಸವʼ ಎಂದು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Kannada Sahitya Parishat President Welcomes Govt Stand Against Hindi Compulsary for Azadi Ka Mahotsav

ಸುತ್ತೋಲೆಗೆ ಸಂಬಂಧಿಸಿದಂತೆ ಪರಿಷತ್ತು ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಕೂಡಲೇ ಎಚ್ಚೆತ್ತುಕೊಂಡ ಸಚಿವ ಬಿ.ಸಿ. ನಾಗೇಶ್ ಅವರು, ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳ ಪ್ರವಾಸಕ್ಕೆ ಕರೆದುಕೊಂಡು ಹೊಗುವಲ್ಲಿ ಹಿಂದಿ ಭಾಷೆ ಬಲ್ಲ ವಿದ್ಯಾರ್ಥಿಗಳಿಗೆ ಆದ್ಯತೆ ಎನ್ನುವ ಸುತ್ತೋಲೆ ವಾಪಸ್‌ ಪಡೆಯುವಂತೆ ಸೂಚಿಸಿದರು. ಜತೆಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಮಾರ್ಗದರ್ಶನ ಇಲ್ಲದಿದ್ದರು ಹಿಂದಿ ಕಡ್ಡಾಯಗೊಳಿಸಿ ಸುತ್ತೋಲೆ ಹೋರಡಿಸಿದ ಅಧಿಕಾರಿ ವಿರುದ್ಧ ಕ್ರಮದ ಭರವಸೆ ನೀಡಿರುವುದು ಸ್ವಾಗತಾರ್ಹ ಎಂದರು.

ಕಾರವಾರದಲ್ಲಿ ಹಿಂದಿ ನಾಮಫಲಕಕ್ಕೆ ಮಸಿ ಬಳಿದ ಕರವೇಕಾರವಾರದಲ್ಲಿ ಹಿಂದಿ ನಾಮಫಲಕಕ್ಕೆ ಮಸಿ ಬಳಿದ ಕರವೇ

ಭಾಷೆ ವಿಚಾರದಲ್ಲಿ ತಪ್ಪಾಗದಂತೆ ಎಚ್ಚರವಹಿಸಿ:

ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ಇಂತಹ ಯಾವುದೇ ತಪ್ಪುಗಳಾದಲ್ಲಿ ಅದನ್ನು ಸರಕಾರ ತಕ್ಷಣ ಗಮನಿಸಿ ಅವಾಂತರಕ್ಕೆ ಅವಕಾಶ ಮಾಡಿ ಕೊಡಬಾರದು. ಪದೇ ಪದೆ ಕನ್ನಡ ಭಾಷೆ ವಿಚಾರದಲ್ಲಿ ಇಂತಹ ತಪ್ಪುಗಳು ಆಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.

Kannada Sahitya Parishat President Welcomes Govt Stand Against Hindi Compulsary for Azadi Ka Mahotsav

ಇದೇ ವಿಷಯಕ್ಕೆ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಸೇರಿದಂತೆ ಹಲವು ಮಹನೀಯರು ಶಿಕ್ಷಣ ಇಲಾಖೆಗೆ ಪತ್ರ ಬರೆದು ಆಗಿರುವ ತಪ್ಪು ಸರಿಪಡಿಸುವಂತೆ ಕೋರಿದ್ದರು.

(ಒನ್ಇಂಡಿಯಾ ಸುದ್ದಿ)

English summary
State govt has canceled the circular which said that knowledge of Hindi and English is compulsary for students who go on tour for Azadi Ka Mahotsav program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X