ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾಪ ಚುನಾವಣೆ: ಚಿತ್ರದುರ್ಗ, ಚಿಕ್ಕಮಗಳೂರಿನಲ್ಲಿ ಗೆದ್ದವರಾರು?

By Lekhaka
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 22: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಂ.ಸಿ. ಶಿವಾನಂದ ಸ್ವಾಮಿ ಎದುರು ಅಂದಾಜು 650 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಗಾದಿ ಕಣದಲ್ಲಿ ಎಂ.ಸಿ. ಶಿವಾನಂದಸ್ವಾಮಿ, ಸುಂದರ್‌ ಬಂಗೇರಾ, ಬಿಳಿಗಿರಿ ವಿಜಯಕುಮಾರ್, ಸೂರಿ ಶ್ರೀನಿವಾಸ್, ಎಚ್.ಡಿ. ರೇವಣ್ಣ ಸ್ಪರ್ಧಿಸಿದ್ದರು. ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ಮತ್ತು ಎಂ.ಸಿ. ಶಿವಾನಂದ ಸ್ವಾಮಿ ನಡುವೆ ತೀವ್ರ ಪೈಪೋಟಿ ನಡೆಸಿದ್ದು, ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ.

ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿತು. 4 ಗಂಟೆಯಿಂದ ಆರಂಭವಾಗ ಮತ ಎಣಿಕೆ ಕಾರ್ಯ ರಾತ್ರಿ 7:30ರವರೆಗೂ ನಡೆಯಿತು.

Kannada Sahitya Parishat Election Results: Who Won in Chitradurga And Chikkamagaluru?

ಆಯಾ ಮತ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಗೊಂಡಿದ್ದು, ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ಮತ್ತು ಎಂ.ಸಿ. ಶಿವಾನಂದ ಸ್ವಾಮಿ ನಡುವೆ ಕೊನೆಯವರೆಗೂ ಪೈಪೋಟಿ ಏರ್ಪಟ್ಟಿತ್ತು.

ನರಸಿಂಹರಾಜಪುರ 60, ಬಾಳೆಹೊನ್ನೂರು 55, ಕಳಸ 18, ಯಗಟಿ 104, ಅಜ್ಜಂಪುರ 153, ಕೊಪ್ಪ 103, ಶೃಂಗೇರಿ 157, ಜಯಪುರ 66, ಬೀರೂರು 79, ಆಲ್ದೂರು 58, ಮೂಡಿಗೆರೆ 202 ಚಿಕ್ಕಮಗಳೂರು 421 ಹಾಗೂ ಕಡೂರಿನಲ್ಲಿ 763 ಮತಗಳನ್ನು ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಮತ ಪಡೆದುಕೊಂಡರು.

ನರಸಿಂಹರಾಜಪುರ ಮತಗಟ್ಟೆಯಲ್ಲಿ 67, ಬಾಳೆಹೊನ್ನೂರು 41, ಕಳಸ 8, ಯಗಟಿ 188, ಅಜ್ಜಂಪುರ 203, ಕೊಪ್ಪ 39, ಶೃಂಗೇರಿ 107, ಜಯಪುರ 32, ಬೀರೂರು 147, ಆಲ್ದೂರು 61, ಮೂಡಿಗೆರೆ 98, ಚಿಕ್ಕಮಗಳೂರು 333 ಕಡ 542 ಮತಗಳನ್ನು ಎಂ.ಸಿ.ಶಿವಾ ನಂದಸ್ವಾಮಿ ಪಡೆದುಕೊಂಡರು.

Kannada Sahitya Parishat Election Results: Who Won in Chitradurga And Chikkamagaluru?


ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಹೇಳಿದ್ದೇನು?
"ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಸಾಹಿತಿಗಳು ನನ್ನ ಕೈಹಿಡಿದಿದ್ದು, ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ನನ್ನ ಕನಸು ಮತ್ತು ಗುರಿಯಾಗಿದೆ. ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಪಡೆದು ನಿರಂತರ ಶ್ರಮಿಸುತ್ತೇನೆ," ಎಂದು ನೂತನವಾಗಿ ಆಯ್ಕೆಯಾದ ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕೆ.ಎಂ. ಶಿವಸ್ವಾಮಿ ಆಯ್ಕೆ
ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕೆ.ಎಂ. ಶಿವಸ್ವಾಮಿ 1757 ಮತ ಪಡೆದು ಆಯ್ಕೆಯಾಗಿದ್ದಾರೆ. ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ಮತದಾನ ಮುಗಿದ ಬಳಿಕ ಫಲಿತಾಂಶ ಹೊರಬಿದ್ದಿತ್ತು.

ಕೆ.ಎಂ. ಶಿವಸ್ವಾಮಿ ನಾಯಕನಹಟ್ಟಿ 829 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಒಟ್ಟು 9 ಅಭ್ಯರ್ಥಿಗಳು ಕಸಾಪ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿ ಚುನಾವಣೆ ಕಣದಲ್ಲಿದ್ದರು. ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಎರಡನೇ ಸ್ಥಾನ ಪಡೆದರು. ಮರು ಆಯ್ಕೆ ಬಯಸಿದ್ದ ಕಸಾಪ ಮಾಜಿ ಅಧ್ಯಕ್ಷ ಡಾ. ದೊಡ್ಡ ಮಲ್ಲಯ್ಯ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲು ಕಾರಣಿಕರ್ತರಾದ ಇಡೀ ಜಿಲ್ಲೆಯ ಕಸಾಪ ಮತದಾರರಿಗೆ ಧನ್ಯವಾದ ತಿಳಿಸಿದರು. ಅಧ್ಯಕ್ಷರಾಗಿ ಮಾತನಾಡಿದ ಕೆ.ಎಂ. ಶಿವಸ್ವಾಮಿ ನಾಯಕನಹಟ್ಟಿ, "ಬಹುಶಃ ಇದು ಐತಿಹಾಸಿಕ ಮತದಾನದ ದಿನ ಎಂದು ಹೇಳಬಹುದು. ಇಷ್ಟು ದೊಡ್ಡ ಅಂತರದ ಮತಗಳನ್ನು ನೀಡಿದ್ದೀರಿ. ಇದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಜಿಲ್ಲೆಯಲ್ಲಿರುವ ಹಿರಿಯ ಸಾಹಿತಿಗಳೊಟ್ಟಿಗೆ ಚರ್ಚೆ ನಡೆಸಿ,‌ ಹಿರಿಯರ ಮಾರ್ಗದರ್ಶನದೊಂದಿಗೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸೇವೆ ನಿರ್ವಹಿಸುತ್ತೇನೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ‌.

Kannada Sahitya Parishat Election Results: Who Won in Chitradurga And Chikkamagaluru?

ಒಟ್ಟು 4020 ಮತಗಳು ಚಲಾವಣೆಗೊಂಡಿದ್ದವು. 33 ಮತಗಳು ತಿರಸ್ಕೃತಗೊಂಡಿದ್ದವು. ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫಲಿತಾಂಶ ಹೊರಬಿದ್ದಿದ್ದು, ಕಣದಲ್ಲಿದ್ದ ಅಭ್ಯರ್ಥಿಗಳು ಈ ಕೆಳಕಂಡಂತೆ ಮತ ಪಡೆದಿದ್ದಾರೆ.

1). ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ- 1757
2). ಚಿಕ್ಕಪ್ಪನಹಳ್ಳಿ ಷಣ್ಮುಖ- 928
3). ಡಾ.ದೊಡ್ಡಮಲ್ಲಯ್ಯ- 549
4). ಜೆ.ತಿಪ್ಪೇಸ್ವಾಮಿ ಕೊರ‌್ಲಕುಂಟೆ- 223
5). ರಾ.ಸು.ತಿಮ್ಮಯ್ಯ ಗೌಡಿಹಳ್ಳಿ- 97
6). ಮಾಲತೇಶ್ ಅರಸ್ ಹರ್ತಿಕೋಟೆ- 33
7). ನ.ಕೆಂಚವೀರಪ್ಪ - 11
( ಕಣದಿಂದ ಹಿಂದೆ ಸರಿದವರು ಇಬ್ಬರು)
ಆರ್.ಶೇಷಣ್ಣಕುಮಾರ್- 26
ಡಿ.ಓ.ಮುರಾರ್ಜಿ - 21 ಮತ ಪಡೆದರು.

Recommended Video

ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಏರುಗತಿ ಪಡೆದು, ಗರಿಷ್ಠ ಸಂಖ್ಯೆಗೆ ತಲುಪಿದ ಕಾರಣ ಸರ್ಕಾರ ಕಸಾಪ ಚುನಾವಣೆಯನ್ನು ಮುಂದೂಡಿತ್ತು. ಇದೀಗ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿದ ಹಂತದಿಂದ ಯಥಾವತ್ತಾಗಿ ಮುಂದುವರೆಸಲಾಗಿದ್ದು, ನವೆಂಬರ್ 21ರ ಭಾನುವಾರ ಚುನಾವಣೆ ನಡೆಯಿತು.

English summary
Suri Srinivas won in Chikkamagaluru District Kannada Sahitya Parishat elections and KM Shivaswamy elected in Chitradurga District Kannada Sahitya Parishat elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X