ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಹುದ್ದೆಗೆ 15 ಸ್ಪರ್ಧಿಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 5 : ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣಾ ಕಣದಲ್ಲಿ 15 ಅಭ್ಯರ್ಥಿಗಳಿದ್ದಾರೆ. ಫೆಬ್ರವರಿ 28ರಂದು ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ.

ಸಾಹಿತ್ಯ ಪರಿಷತ್ತಿನ 25ನೇ ರಾಜ್ಯಾಧ್ಯಕ್ಷರ ಆಯ್ಕೆ, 30 ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆ ಮತ್ತು ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡಿನ ಗಡಿನಾಡ ಘಟಕಗಳ ಅಧ್ಯಕ್ಷರ ಆಯ್ಕೆಗೆ ಫೆ.28ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 2ರಂದು ಫಲಿತಾಂಶ ಪ್ರಟಕಗೊಳ್ಳಲಿದೆ. [ಸಾಹಿತ್ಯ ಪರಿಷತ್ತು ಚುನಾವಣೆ ವೇಳಾಪಟ್ಟಿ]

kannada sahitya parishat

ಈಗಾಲೇ ಎಲ್ಲಾ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ಅಧ್ಯಕ್ಷ ಹುದ್ದೆಯ ಕಣದಲ್ಲಿ 15 ಅಭ್ಯರ್ಥಿಗಳಿದ್ದಾರೆ. ಆಂಧ್ರ ಪ್ರದೇಶ ಗಡಿನಾಡ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ಗಡಿನಾಡ ಘಟಕಗಳ ಅಧ್ಯಕ್ಷ ಹುದ್ದೆಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ, ಚುನಾವಣೆ ನಡೆಯುವುದಿಲ್ಲ. [ಕವಿ, ಮೇಷ್ಟರು, ಸಜ್ಜನ, ಸಾಶಿ ಮರುಳಯ್ಯ ಕಣ್ಮರೆ]

ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಒಟ್ಟು 123 ಅಭ್ಯರ್ಥಿಗಳಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ, ಈ ಎರಡು ಜಿಲ್ಲೆಗಳಲ್ಲಿ ಮತದಾನದ ಅಗತ್ಯವಿಲ್ಲ. [ಇಂಗ್ಲೀಷ್-ಎಲ್ಲರ ಕನ್ನಡ ನಿಘಂಟಿಗೆ ಮುನ್ನುಡಿ]

245 ಮತಗಟ್ಟೆ ಸ್ಥಾಪನೆ : ಸುಮಾರು ಒಂದೂವರೆ ಲಕ್ಷ ಮತದಾರರು ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಮತದಾನದಕ್ಕಾಗಿ 245 ಮತಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 26,591 ಮತದಾರರಿದ್ದಾರೆ. ಮಂಡ್ಯದಲ್ಲಿ 12,049 ಮತ್ತು ಕೊಡಗು ಜಿಲ್ಲೆಯಲ್ಲಿ 1,316 ಮತದಾರರಿದ್ದಾರೆ.

ಅಧ್ಯಕ್ಷ ಸ್ಥಾನದ ಕಣದಲ್ಲಿರುವವರು : 25ನೇ ರಾಜ್ಯಾಧ್ಯಕ್ಷರ ಆಯ್ಕೆಗೆ ನಡೆಯುವ ಚುನಾವಣಾಕಣದಲ್ಲಿ 15 ಅಭ್ಯರ್ಥಿಗಳಿದ್ದಾರೆ. ಅಮೃತೇಶ ಎನ್.ಪಿ, ಮ.ಚಿ.ಕೃಷ್ಣ, ಆರ್.ಎಸ್.ಎನ್.ಗೌಡ, ಡಾ.ಎಚ್.ಎಲ್.ಜನಾರ್ಧನ, ಬಿ.ಜಯಪ್ರಕಾಶಗೌಡ, ಪಟೇಲ್ ಪಾಂಡು, ಬಸವರಾಜ ಶಿ.ಹಳ್ಳೂರ, ಮನು ಬಳಿಗಾರ್, ವೈ.ರೇಣುಕ, ಶರಣಬಸಪ್ಪ ಕಲ್ಲಪ್ಪ ದಾನಕೈ, ಶಿವಪ್ಪ ಮಲ್ಲಪ್ಪ ಬಾಗಲ, ಶಿವರಾಜ ಗುರುಶಾಂತಪ್ಪ ಪಾಟೀಲ, ಸಿರಿಗೇರಿ ಎರ್ರಿಸ್ವಾಮಿ, ಸಂಗಮೇಶ ಬಾದವಾಡಗಿ, ಸಂಜೀವ ಕುಮಾರ ಅವರು ಕಣದಲ್ಲಿದ್ದಾರೆ.

English summary
A total of 15 candidates were left in the fray of Kannada Sahitya Parishat president post election scheduled on February 28, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X