ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರೋಟರಿ-ಕಸಾಪ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

By Mahesh
|
Google Oneindia Kannada News

ಕುಮಟಾ, ನ.13: ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಇಲ್ಲಿನ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ವಿಶೇಷವಾಗಿ ಪ್ರಥಮ ಬಾರಿಗೆ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದ 'ರೋಟರಿ-ಕಸಾಪ ಕಾವ್ಯ ಪ್ರಶಸ್ತಿ' ಸ್ಥಾಪಿಸಿದ್ದು ಪ್ರಶಸ್ತಿಗಾಗಿ ಕವನ ಸಂಕಲನವನ್ನು ಆಹ್ವಾನಿಸಿದೆ.

ಪ್ರಶಸ್ತಿಯು 10,000 ರೂ.ನಗದು, ಫಲಕ, ಪ್ರಶಸ್ತಿ ಪತ್ರ ಗಳಿಂದೊಡಗೂಡಿದೆ ಎಂದು ಕಸಾಪ ತಾಲ್ಲೂಕಾಧ್ಯಕ್ಷ ಎನ್.ಆರ್.ಗಜು, ರೋಟರಿ ಅಧ್ಯಕ್ಷ ಮ್ಹೌಸಿನ್ ಖಾಜಿ ಮತ್ತು ಕಾರ್ಯದರ್ಶಿ ವಸಂತ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧಾ ನಿಯಮಗಳು:

* ರಾಷ್ಟ್ರದಾದ್ಯಂತ ಸಮಸ್ತ ಕನ್ನಡ ಕವಿಗಳಿಗೆ ತೆರೆದ ಸ್ಪರ್ಧೆ. ಯಾವುದೇ ಪ್ರವೇಶ ಧನ ಇಲ್ಲ.

* ಕವಿಗಳು ತಮ್ಮ ಪ್ರಥಮ ಪ್ರಕಟಣೆಗೆ ಸಿದ್ಧವಾದ ಒಂದು ಕವನ ಸಂಕಲನ ಕಳುಹಿಸಬೇಕು.

* ಸಂಕಲನವು ಕನಿಷ್ಠ 40 ರಿಂದ 70 ಪುಟಗಳ ಮಿತಿಯಲ್ಲಿರಬೇಕು.

* ಖಂಡ ಕಾವ್ಯ, ಚುಟುಕು, ಹನಿಗವನಗಳನ್ನು ಪರಿಗಣಿಸಲಾಗುವುದಿಲ್ಲ.

Kannada Sahithya Parishat and Rotary Club invited Poetry Collections for Rotary- Kasapa Award

* ಕವನ ಸಂಕಲನವನ್ನು ಡಿ.ಟಿ.ಪಿ. ಮಾಡಿಯೇ ಕಳುಹಿಸತಕ್ಕದ್ದು. ಕೈ ಬರಹ, ಕಾರ್ಬನ್ ನಕಲು, ಪತ್ರಿಕಾ ಪ್ರಕಟಿತ ಕಟಿಂಗ್ ಯಾವುದನ್ನೂ ಪರಿಗಣಿಸುವುದಿಲ್ಲ.

* ಸಂಕಲನದ ಯಾವುದೇ ಭಾಗದಲ್ಲಿಯೂ ತಮ್ಮ ಹೆಸರನ್ನು ನಮೂದಿಸಬಾರದು.

* ಯಾವುದೇ ಕಾರಣಕ್ಕು ಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ.

* ಬೇರೆ ಪ್ರತ್ಯೇಕ ಹಾಳೆಯಲ್ಲಿ ತಮ್ಮ ವಿಳಾಸ, ದೂರವಾಣಿ ಸಂಖ್ಯೆ, ಇತ್ತೀಚೆಗಿನ ಭಾವಚಿತ್ರ, ಜನ್ಮದಿನಾಂಕ, ಮೊದಲ ಪ್ರಕಟಣೆಯೆಂಬ ಸ್ವ-ದೃಢೀಕರಣ ಪತ್ರ ಕಳುಹಿಸತಕ್ಕದ್ದು.

* ಆಯ್ಕೆಗೊಂಡರೆ ಮುಂದೆ ಪ್ರಕಟಿಸುವಾಗ ಮುದ್ರಿತ ರಕ್ಷಾ ಕವಚದ ಮೇಲೆ "ಕುಮಟಾ ರೋಟರಿ-ಕಸಾಪ ಕಾವ್ಯ ಪ್ರಶಸ್ತಿ" ವಿಜೇತ ಕೃತಿ ಎಂದು ಮುದ್ರಿಸಬೇಕು.

* ಕಳುಹಿಸಲು ಕೊನೆಯ ದಿನಾಂಕ: ಡಿಸೆಂಬರ್ 10. 2014.,

* ಪ್ರಶಸ್ತಿಯನ್ನು ಜನೇವರಿ 2015 ರಲ್ಲಿ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ವಿಶೇಷ ಸಮಾರಂಭ ಏರ್ಪಡಿಸಿ ವಿತರಿಸಲಾಗುವುದು.

* ನಿರ್ಣಾಯಕರ ನಿರ್ಣಯವೇ ಅಂತಿಮ. ಈ ಕುರಿತಾದ ಯಾವುದೇ ಸಂಪರ್ಕಕ್ಕೆ ಅವಕಾಶ ಇಲ್ಲ.

* ಸ್ಪರ್ಧೆಗೆ ಕವನ ಸಂಕಲನವನ್ನು ಈ ವಿಳಾಸಕ್ಕೆ ಕಳುಹಿಸಬೇಕು:
ಎನ್.ಆರ್.ಗಜು, ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು,
"ಅಮೃತ" ಗಿಬ್ ಪ್ರೌಢಶಾಲೆಯ ಹತ್ತಿರ,
ಕುಮಟಾ, ಉತ್ತರ ಕನ್ನಡ,
ಕರ್ನಾಟಕ 581 343
ಸಂಪರ್ಕ: 97414 72378

English summary
Kannada Sahithya Parishat and Rotary Club invited Poetry Collections for Rotary- Kasapa Award, It is national level competition and no entry fee is required said Rotary Club Secretary Vasanth Rao in Kumta, Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X