ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ : ಯಾವ್ಯಾವ ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಪ್ರಶಸ್ತಿ?

By Mahesh
|
Google Oneindia Kannada News

Rajyotsava award winners announced
ಬೆಂಗಳೂರು, ಅ.30: ಕರ್ನಾಟಕ ರಾಜ್ಯದ 59ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 59 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಗಾಯಕಿ ಎಸ್ ಜಾನಕಿ, ಇಸ್ರೋ ನಿವೃತ್ತ ವಿಜ್ಞಾನಿ ಡಾ.ಕಸ್ತೂರಿ ರಂಗನ್, ನಿವೃತ್ತ ನ್ಯಾಯಾಧೀಶ ವೆಂಕಟಾಚಲಯ್ಯ ಮುಂತಾದ ಪ್ರಮುಖರು ಪಟ್ಟಿಯಲ್ಲಿದ್ದಾರೆ.

ಸಾಹಿತಿ ಚನ್ನವೀರ ಕಣವಿ, ಬರಗೂರು ರಾಮಚಂದ್ರಪ್ಪ, ಮರುಳ ಸಿದ್ದಪ್ಪ, ಎಚ್.ಜಿ.ಸಿದ್ದರಾಮಯ್ಯ ಸೇರಿದಂತೆ ಐದು ಮಂದಿ ಸದಸ್ಯರ ಸಮಿತಿ ಸಿದ್ಧಪಡಿಸಿರುವ 2014ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿತ ಹಾಕಿ, ಯಾವುದೇ ವಿವಾದ ಎದುರಾದರೆ ಸಮಿತಿ ಸದಸ್ಯರೇ ಹೊಣೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಸುಮಾರು 1700ಕ್ಕೂ ಹೆಚ್ಚು ಅರ್ಜಿಗಳು ಪ್ರಶಸ್ತಿಗಾಗಿ ಸಲ್ಲಿಕೆಯಾಗಿದ್ದವು. ಗಣ್ಯರ ಸೇವೆ ಪರಿಗಣಿಸಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡಲಾಗಿದ್ದು, ಅರ್ಜಿ ಸಲ್ಲಿಸದೆ ಇರುವವರನ್ನು ಪರಿಗಣಿಸಿ ಪ್ರಶಸ್ತಿ ನೀಡಲು ಕ್ರಮ ವಹಿಸಲಾಗಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮಾಜಸೇವೆ, ಚಿತ್ರೋದ್ಯಮ, ಪತ್ರಿಕೋದ್ಯಮ, ಸಾಹಿತ್ಯ, ಕ್ರೀಡೆ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ 59 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಸರ್ಕಾರಿ ಆದೇಶ ಸಂಖ್ಯೆ : ಕಸಂವಾ/ 695/ಕಸಧ/2014, 30.10.2014 ಅನ್ವಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಕ್ಷೇತ್ರ ಹಾಗೂ ಜಿಲ್ಲಾವಾರು ಪಟ್ಟಿ ಇಂತಿದೆ:

ಸಾಹಿತ್ಯ -ಜಿಲ್ಲೆ
1. ಮೂಡ್ನಾಕೂಡು ಬಿ.ಚಿನ್ನಸ್ವಾಮಿ, ಚಾಮರಾಜನಗರ
2.ಡಾ ಎಚ್ ಗಿರಿಜಮ್ಮ, ದಾವಣಗೆರೆ
3.ಶೂದ್ರ ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ
4.ಜಿ.ಎಚ್ ಹನ್ನೆರಡು ಮಠ, ಧಾರವಾಡ'
5.ವಿಷ್ಣು ಜಿ.ಭಂಡಾರಿ, ಉತ್ತರ ಕನ್ನಡ

ರಂಗಭೂಮಿ
6.ಕಂಠಿ ಹನುಮಂತರಾಯ, ಬಾಗಲಕೋಟೆ
7.ಅಬ್ದುಲ್ ಸಾಬ್ ಅಣ್ಣಿಗೇರಿ, ಹಾವೇರಿ
8.ತೋ ನಂಜುಂಡ ಸ್ವಾಮಿ, ಮೈಸೂರು
9.ಜೆ ಲೋಕೇಶ್, ಬೆಂಗಳೂರು
10. ಶಿವಕುಮಾರಿ, ಬಳ್ಳಾರಿ

ಸಂಗೀತ
11.ವಿ.ಮಣಿ, ಬೆಂಗಳೂರು
12. ಡಿ. ಕುಮಾರದಾಸ, ಬಳ್ಳಾರಿ
13.ಎಸ್ ಶಂಕರ್, ಬೆಂಗಳೂರು
14. ಇಂದೂ ವಿಶ್ವನಾಥ್, ಬೆಂಗಳೂರು
15. ಪಂಕಜಾ ರಾಮಕೃಷ್ಣ, ಮೈಸೂರು

ಜಾನಪದ
16. ಎಸ್ ಯೋಗಲಿಂಗಂ, ಬೆಂಗಳೂರು
17. ಮಾರುತಿ ಹಣಮಂತ ಭಜಂತ್ರಿ, ಬಾಗಲಕೋಟೆ
18. ಪೂಜಾರಿ ನಾಗರಾಜ್, ಕೋಲಾರ
19. ಲಕ್ಷ್ಮಿಬಾಯಿ ರೇವಲ್, ಯಾದಗಿರಿ
20. ಚಿಕ್ಕಮರಿಯಪ್ಪ, ಮೈಸೂರು

ಯಕ್ಷಗಾನ/ಬಯಲಾಟ
21. ವಣಸೆ ನಾರಾಯಣ ಗಾಣಿಗ, ಉಡುಪಿ
22. ಸಂಪಾಜೆ ಸೀನಪ್ಪ ರೈ, ದಕ್ಷಿಣ ಕನ್ನಡ
23. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ, ಕೊಪ್ಪಳ
24. ಬಸಪ್ಪ ದುಡಲಪ್ಪ ಸಲಲ, ಗದಗ

ಸಮಾಜಸೇವೆ
25. ಡಾ. ಗುರುರಾಜ ಹೆಬ್ಬಾರ್, ಹಾಸನ
26. ರೆ.ಫಾ ಡಾ. ಜೇಕಬ್ ಪಿ.ಜೆ, ಧಾರವಾಡ
27. ಎ. ವೆಂಕಟೇಶ್, ಚಿಕ್ಕಬಳ್ಳಾಪುರ
28. ಹನುಮಂತಬೊಮ್ಮೇಗೌಡ, ಉತ್ತರಕನ್ನಡ
29. ಡಾ. ಲೀಲಾ ಸಂಪಿಗೆ, ತುಮಕೂರು

ಸಂಕೀರ್ಣ
30. ನ್ಯಾ. ಎಂಎನ್ ವೆಂಕಟಚಲಯ್ಯ, ಬೆಂಗಳೂರು
31 ಅಂಕೇಗೌಡ(ಗ್ರಂಥ ಸಂಗ್ರಹ), ಮಂಡ್ಯ
32. ದಾದಾ ಪೀರ್ ಪಂಜರ್ಲ(ಭಾವೈಕ್ಯತೆ), ರಾಯಚೂರೆಉ
33. ಕಂಚ್ಯಾಣಿ ಶರಣಪ್ಪ(ಮಕ್ಕಳ ಸಾಹಿತ್ಯ), ಬಿಜಾಪುರ

ಸಿನಿಮಾ
34. ಡಾ. ಎಸ್ ಜಾನಕಿ, ಚೆನ್ನೈ
35. ವೈಜನಾಥ ಬಿರಾದಾರ ಪಾಟೀಲ್, ಬೀದರ್
36. ಆರ್.ಟಿ ರಮಾ, ಮಂಡ್ಯ
37. ಎಂ.ಎಸ್ ರಾಜಶೇಖರ್, ಮೈಸೂರು

ಶಿಲ್ಪಕಲೆ/ಲಲಿತಕಲೆ
38. ಚಂದ್ರಶೇಖರ್ ವೈ.ಶಿಲ್ಪಿ, ಕಲ್ಬುರ್ಗಿ
39. ವೈ. ಯಂಕಪ್ಪ, ದಾವಣಗೆರೆ
40. ಲಕ್ಷ್ಮಿರಾಮಪ್ಪ, ಶಿವಮೊಗ್ಗ [ಲಕ್ಷ್ಮಿರಾಮಪ್ಪ ಅವರ ಚಿತ್ರಕಲೆ ಬಗ್ಗೆ ಓದಿ]
41 ಖಾಸೀಂ ಕನ್ಸಾವಿ, ಬಾಗಲಕೋಟೆ

ಕೃಷಿ/ಪರಿಸರ
42. ಚೌಡಪ್ಪ. ಡಿ.ಎ, ಚಿಕ್ಕಬಳ್ಳಾಪುರ
43. ಶಿವಾನಂದ ಕಳವೆ, ಉತ್ತರ ಕನ್ನಡ
44. ಕೀರಣಗೆರೆ ಜಗದೀಶ್, ರಾಮನಗರ
45. ಆಶಾ ಶೇಷಾದ್ರಿ, ಶಿವಮೊಗ್ಗ

ಮಾಧ್ಯಮ
46. ಖಾದ್ರಿ ಎಸ್. ಅಚ್ಯುತನ್, ಮಂಡ್ಯ
47. ಅಬ್ದುಲ್ ಹಫೀಜ್, ಬೆಂಗಳೂರು
48. ಲಕ್ಷ್ಮಣ ಕೊಡಸೆ, ಶಿವಮೊಗ್ಗ
49. ಎಂಬಿ ದೇಸಾಯಿ, ಬೆಳಗಾವಿ
50. ಡಾ.ಸಂಧ್ಯಾ ಸತೀಶ್ ಪೈ, ಉಡುಪಿ

ಸಂಘ ಸಂಸ್ಥೆ
51. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
52. ಶಾಂತಿ ಕುಟೀರ-ಕುನ್ನೂರು, ಬಿಜಾಪುರ

ಹೊರನಾಡು/ಹೊರದೇಶ
53. ಜಯಾ ಸುವರ್ಣ, ಮುಂಬೈ
ವಿಜ್ಞಾನ/ತಂತ್ರಜ್ಞಾನ
54. ಡಾ. ಕಸ್ತೂರಿರಂಗನ್, ಬೆಂಗಳೂರು
55. ಡಾ. ಬಿ.ಎನ್ ಸುರೇಶ್, ಚಿಕ್ಕಮಗಳೂರು

ವೈದ್ಯಕೀಯ

56. ಡಾ. ಸತೀಶ್ ಚಂದ್ರ.ಪಿ, ಚಿತ್ರದುರ್ಗ

ಕ್ರೀಡೆ

57. ಪೂವಮ್ಮ.ಎಂ.ಆರ್(ಅಥ್ಲೆಟಿಕ್ಸ್), ಕೊಡಗು
58. ಮಮತಾ ಪೂಜಾರಿ(ಕಬಡ್ಡಿ), ದಕ್ಷಿಣ ಕನ್ನಡ
59. ವಿಲಾಸ ನೀಲಗುಂದ, ಗದಗ

English summary
The Karnataka State government announced the list of 59 Rajyotsava award winners for the year 2014 late on Thursday(Oct.30) evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X