ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

64 ಮಂದಿ ಸಾಧಕರಿಗೆ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಕರ್ನಾಟಕ ಸರ್ಕಾರ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರ ಪಟ್ಟಿ ಪ್ರಕಟಿಸಲಾಗಿದೆ.

ಕನ್ನಡ ರಾಜ್ಯೋತ್ಸವದಂದು ಸರ್ಕಾರ ವಿವಿಧ ಕ್ಷೇತ್ರದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಬಾರಿ 64 ಗಣ್ಯರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, 1,700 ಅರ್ಜಿಗಳು ಬಂದಿತ್ತು.

2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

Kannada Rajyotsava Award 2019 list is out

ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್. ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಿ. ಟಿ. ರವಿ ನೇತೃತ್ವದ ಸಮಿತಿ ಅರ್ಹರನ್ನು ಆಯ್ಕೆ ಮಾಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಅಕ್ಟೋಬರ್ 31ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತದೆ. ನವೆಂಬರ್ 1ರಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ. 2018ರಲ್ಲಿ 63 ಗಣ್ಯರಿಗೆ ಪಶಸ್ತಿಯನ್ನು ಪ್ರಧಾನ ಮಾಡಲಾಗಿತ್ತು.

2019ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ
ಸಾಹಿತ್ಯ:
1. ಡಾ. ಮಂಜಪ್ಪ ಶೆಟ್ಟಿ ಮಸಗಲಿ
2. ಪ್ರೊ. ಬಿ ರಾಜಶೇಖರಪ್ಪ
3. ಚಂದ್ರಕಾಂತ ಕರದಳ್ಳಿ
4. ಡಾ. ಸರಸ್ವತಿ ಚಿಮ್ಮಲಗಿ

ರಂಗಭೂಮಿ
5. ಪರಶುರಾಮ ಸಿದ್ದಿ
6. ಪಾಲ್ ಸುದರ್ಶನ
7. ಹೂಲಿ ಶೇಖರ್
8. ಎನ್ ಶಿವಲಿಂಗಯ್ಯ
9. ಡಾ. ಎಚ್. ಕೆ ರಾಮನಾಥ
10. ಭಾರ್ಗವಿ ನಾರಾಯಣ

ಸಂಗೀತ
11. ಛೋಟೆ ರೆಹಮತ್ ಖಾನ್
12. ನಾಗವಲ್ಲಿ ನಾಗರಾಜ್
13. ಡಾ. ಮುದ್ದು ಮೋಹನ್
14. ಶ್ರೀನಿವಾಸ ಉಡುಪ

ಜಾನಪದ
15. ನೀಲಗಾರ ದೊಡ್ಡಗವಿಬಸಪ್ಪ ಮಂಟೇಸ್ವಾಮಿ ಪರಂಪರೆ
16. ಹೊಳಬಸಯ್ಯ ದುಂಡಯ್ಯ ಸಂಬಳದ
17. ಭೀಮಸಿಂಗ್ ಸಕಾರಾಮ್ ರಾಥೋಡ್
18. ಉಸ್ಮಾನ್ ಸಾಬ್ ಖಾದರ್ ಸಾಬ್
19. ಕೋಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ
20 ಕೆ. ಆರ್ ಹೊಸಳಯ್ಯ

ಶಿಲ್ಪಕಲೆ
21. ವಿ. ಎ ದೇಶಪಾಂಡೆ
22. ಕೆ ಜ್ಞಾನೇಶ್ವರ

ಚಿತ್ರಕಲೆ
23. ಯು ರಮೇಶರಾವ್
24. ಮೋಹನ ಸಿತನೂರು

ಕ್ರೀಡೆ
25. ವಿಶ್ವನಾಥ್ ಭಾಸ್ಕರ್ ಗಾಣಿಗ
26. ಚೇನಂಡ ಎ ಕುಟ್ಟಪ್ಪ
27. ನಂದಿತ ನಾಗನಗೌಡರ್

ಯೋಗ
28. ಶ್ರೀಮತಿ ವನಿತಕ್ಕ
29. ಕುಮಾರಿ ಖುಷಿ

ಯಕ್ಷಗಾನ
30. ಶ್ರೀಧರ ಭಂಡಾರಿ ಪುತ್ತೂರು

ಬಯಲಾಟ
31. ವೈ ಮಲ್ಲಪ್ಪ ಗವಾಯಿ

ಚಲನಚಿತ್ರ
32. ಶೈಲಶ್ರೀ

ಕಿರುತೆರೆ
33. ಜಯಕುಮಾರ ಕೊಡಗನೂರ

ಶಿಕ್ಷಣ
34. ಎಸ್. ಆರ್ ಗುಂಜಾಳ್
35. ಪ್ರೊ ಟಿ ಶಿವಣ್ಣ
36. ಡಾ. ಕೆ ಚಿದಾನಂದ ಗೌಡ
37. ಡಾ ಗುರುರಾಜ ಕರ್ಜಗಿ

ಸಂಕೀರ್ಣ
38. ಡಾ. ವಿಜಯ ಸಂಕೇಶ್ವರ
39. ಎಸ್. ಟಿ ಶಾಂತ ಗಂಗಾಧರ
40. ಡಾ. ಚನ್ನವೀರ್ ಶಿವಾಚಾರ್ಯರು
41. ಲೆ. ಜನರಲ್ ಬಿ,ಎನ್ ಪ್ರಸಾದ
42. ಡಾ. ನಾ ಸೋಮೇಶ್ವರ
43. ಲೆ ಪ್ರಕಾಶ್ ಶೆಟ್ಟಿ, ಎಂ. ಆರ್ ಜಿ ಗ್ರೂಪ್

ಪತ್ರಿಕೋದ್ಯಮ
44. ಬಿ. ವಿ ಮಲ್ಲಿಕಾರ್ಜುನಯ್ಯ

ಸಹಕಾರ
45. ರಮೇಶ್ ವೈದ್ಯ

ಸಮಾಜ ಸೇವೆ
46. ಎಸ್ ಜೆ ಭಾರತಿ
47. ಶ್ರೀ ಕತ್ತಿಗೆ ಚನ್ನಪ್ಪ

ಕೃಷಿ
48. ಬಿ. ಕೆ ದೇವರಾಜ್
49. ವಿಶ್ವೇಶ್ವರ ಸಜ್ಜನ್

ಪರಿಸರ
50. ಸಾಲುಮರದ ವೀರಾಚಾರ್
51. ಶಿವಾಜಿ ಛತ್ರಪ್ಪ ಕಾಗಣಿಕರ್ಸಂಘ ಸಂಸ್ಥೆ
52. ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್
53. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ, ಹನಮಂತಪುರ.

ವೈದ್ಯಕೀಯ
54. ಡಾ. ಹನುಮಂತರಾಯ
55. ಡಾ. ಅಂಜನಪ್ಪ
56. ಡಾ. ನಾಗರತ್ನ
57. ಡಾ. ಜಿ. ಟಿ ಸುಭಾಷ್
58. ಡಾ. ಕೃಷ್ಣಪ್ರಸಾದ್

ನ್ಯಾಯಾಂಗ
59. ಕುಮಾರ್ ಎನ್.

ಹೊರನಾಡು
60. ಜಯವಂತ ಮನ್ನೊಳಿ
61. ಶ್ರೀಗಂಗಾಧರ ಬೇವಿನಕೊಪ್ಪ
62. ಬಿ. ಜಿ ಮೋಹನದಾಸ್

ಗುಡಿ ಕೈಗಾರಿಕೆ
63. ನವರತ್ನ ಇಂದುಕುಮಾರ

ವಿಮರ್ಶೆ
64. ಕೆ. ವಿ ಸುಬ್ರಮಣ್ಯಂ.

English summary
Kannada Rajyotsava Award 2019 for 64 achievers announced. Over1,700 application considered for the award, Chief Minister B.S.Yediyurappa led committee has finalised the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X