ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್

By ಮಲೆನಾಡಿಗ
|
Google Oneindia Kannada News

ಕನ್ನಡ ಸಾಹಿತ್ಯ, ಸಾಹಿತಿಗಳು ಜ್ಞಾನಪೀಠ, ಸಾಹಿತ್ಯ ಅಕಾಡೆಮಿ, ಸರಸ್ವತಿ ಸಮ್ಮಾನ್ ಪಡೆದು ಲೋಕಖ್ಯಾತಿ ಗಳಿಸಿರುವುದು ಎಲ್ಲರಿಗೂ ಗೊತ್ತೇ ಇದೆ.

ಕನ್ನಡ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಸಿಗಲು ಇಲ್ಲಿನ ಸಾಹಿತ್ಯದಲ್ಲಿರುವ ಗಟ್ಟಿತನ ಹಾಗೂ ವೈವಿಧ್ಯತೆಯೇ ಕಾರಣ ಎನ್ನಬಹುದು. ನಮ್ಮ ಸಾಹಿತಿಗಳ ಹೆಸರುಗಳೇ ಚೆಂದ. ಅದರಲ್ಲೂ ಕೆಲವರ ಕಾವ್ಯನಾಮ ಕೇಳಲಿಕ್ಕೆ ಆನಂದ. ಇತ್ತೀಚಿಗೆ ರೌಡಿಗಳ ಅಲಿಯಾಸ್ ಹೆಸರುಗಳನ್ನು ಓದಿದ ನಿಮ್ಮ ಮುಂದೆ ಸಾಹಿತಿಗಳ ಕಾವ್ಯ ನಾಮಗಳ ಅಸಮಗ್ರ ಪಟ್ಟಿ ನೀಡುತ್ತಿದ್ದೇವೆ.

ಪಂಪ, ರನ್ನ, ಪೊನ್ನ, ಅಸಗ, ಜನ್ನ, ರಾಘವಾಂಕ, ಹರಿಹರ, ಲಕ್ಷ್ಮೀಶ, ರತ್ನಾಕರ ವರ್ಣಿ,ಕುಮಾರವ್ಯಾಸ, ನಯಸೇನ, ಚಾಮರಸ, ಹೀಗೆ ಬೆಳೆದು ಬರುವ ನಾಮಾವಳಿಗಳ ಪಟ್ಟಿಯ ಜೊತೆಗೆ ನವೋದಯ, ನವ್ಯ ಕಾಲಕ್ಕೆ ಕವಿಗಳು ಹಾಗೂ ಕಾವ್ಯನಾಮಗಳು ಗಮನ ಸೆಳೆಯುತ್ತವೆ. [ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ]

Samsa

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅತಿ ಹೆಚ್ಚು ಕಾವ್ಯನಾಮ ಬಳಕೆ ಮಾಡಿದವರು ಸಂಸ ಅಲಿಯಾಸ್ ಎ.ಎನ್.ಸಾಮಿ ವೆಂಕಟಾದ್ರಿ ಐಯ್ಯರ್. ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಅಗರ ಗ್ರಾಮದ ಸಂಸ ಅವರು ಸರಿ ಸುಮಾರು 17ಕ್ಕೂ ಹೆಚ್ಚು ಕಾವ್ಯ ನಾಮ ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ.[ರೌಡಿ ಶೀಟರ್ 'ಅಲಿಯಾಸ್' ಗಳು]

ವಿಗಡ ವಿಕ್ರಮರಾಯ ನಾಟಕಕ್ಕೆ "ಕಂಸ" ಎಂಬ ಕಾವ್ಯನಾಮದಿಂದ ಪ್ರಕಟಣೆಗೆ ನೀಡಿದಾಗ ಮುದ್ರಾರಾಕ್ಷಸನ ಕೃಪೆಯಿಂದ ಅದು "ಸಂಸ" ಎಂದಾಯಿತಂತೆ. ಇದಲ್ಲದೆ ಎ.ಎನ್.ಸಾಮಿ, ಸಾಮಿ, ಸ್ವಾಮಿ ವೆಂಕಟಾದ್ರಿ ಐಯ್ಯರ್, ವೆಂಕಟಾದ್ರಿ, ಸಾಮಿ ವೆಂಕಟಾದ್ರಿ, ಎ.ಎನ್ಎಸ್ ಹೀಗೆ ತಮ್ಮ ಹೆಸರನ್ನು ಬಗೆ ಬಗೆ ರೀತಿಯಲ್ಲಿ ಬಳಸುತ್ತಿದ್ದರಂತೆ. [ಮೊಬೈಲಿನಲ್ಲಿ ವಚನಗಳು, ಆಗಲಿ ನಿಮ್ಮ ಕರಗತ]

Kuvempu

ಕವಿಗಳ ನಿಜ ನಾಮ ಹಾಗೂ ಕಾವ್ಯ ನಾಮದ ಪಟ್ಟಿ ಹೀಗಿದೆ.

ಕವಿ-ಕಾವ್ಯನಾಮ ಕವಿ ನಿಜನಾಮ ಸಾಹಿತಿ ಪೂರ್ಣ ನಾಮ
ಕಿಶೋರಚಂದ್ರವಾಣಿ,ಕುವೆಂಪು
ಕೆ.ವಿ ಪುಟ್ಟಪ್ಪ
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
ಅಂಬಿಕಾತನಯದತ್ತ
ದ.ರಾ. ಬೇಂದ್ರೆ
ದತ್ತಾತ್ತ್ರೇಯ ರಾಮಚಂದ್ರ ಬೇಂದ್ರೆ
ಶ್ರೀ
ಬಿ.ಎಂ. ಶ್ರೀಕಂಠಯ್ಯ
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಶ್ರೀನಿವಾಸ ಮಾಸ್ತಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ವಿನಾಯಕ
ವಿ.ಕೃ. ಗೋಕಾಕ
ವಿನಾಯಕ ಕೃಷ್ಣ ಗೋಕಾಕ್
ವಿಸೀ
ವಿ.ಸೀತಾರಾಮಯ್ಯ
ವೆಂಕಟರಾಮಯ್ಯ ಸೀತಾರಾಮಯ್ಯ
ಆನಂದ ಕಂದ ಆನಂದ ಬೆಟಗೇರಿ ಕೃಷ್ಣಶರ್ಮ
ಕಾವ್ಯಾನಂದ ಸಿದ್ಧಯ್ಯಪುರಾಣಿಕ ಸಿದ್ಧಯ್ಯಪುರಾಣಿಕ
ರಸಿಕರಂಗ ರಂ.ಶ್ರೀ. ಮುಗಳಿ ರಂಗನಾಥ ಶ್ರೀನಿವಾಸ ಮುಗಳಿ
ತ್ರಿವೇಣಿ ಅನಸೂಯಶಂಕರ ಅನಸೂಯಶಂಕರ
ಶ್ರೀರಂಗ ಆದ್ಯರಂಗಾಚಾರ್ಯ ರಂಗಾಚಾರ್ಯ ವಾಸುದೇವಾಚಾರ್ಯ ಜಾಗೀರದಾರ
ಚದುರಂಗ ಸುಬ್ರಮಣ್ಯರಾಜೇ ಅರಸ್ ಸುಬ್ರಮಣ್ಯರಾಜೇ ಅರಸ್
ಜಡಭರತ ಜಿ.ಬಿ. ಜೋಶಿ ಜಿ.ಬಿ. ಜೋಶಿ
ತಿರುಕ ರಾಘವೇಂದ್ರ ಸ್ವಾಮೀಜಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ
ಸಂಸ ವೆಂಕಟಾದ್ರಿ ಐಯ್ಯರ್ ಎ.ಎನ್.ಸಾಮಿ, ಸಾಮಿ, ಸ್ವಾಮಿ ವೆಂಕಟಾದ್ರಿ ಐಯ್ಯರ್, ವೆಂಕಟಾದ್ರಿ, ಸಾಮಿ ವೆಂಕಟಾದ್ರಿ, ಎ.ಎನ್ಎಸ್
ಅನಕೃ ಅನ ಕೃಷ್ಣರಾಯ ಅರಕಲಗೂಡು ನರಸಿಂಗರಾಯ ಕೃಷ್ಣರಾಯ
ತರಾಸು ತ.ರಾ. ಸುಬ್ಬರಾಯ. ತಳಕು ರಾಮಸ್ವಾಮಯ್ಯ ಸುಬ್ಬರಾವ್
ಡಿವಿಜಿ ಡಿ.ವಿ. ಗುಂಡಪ್ಪ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಪು.ತಿ.ನ ಪು.ತಿ.ನ ಪುರೋಹಿತ ತಿರುನಾರಾಯಣ ಅಯ್ಯಂಗಾರ್
ಹೊಯಿಸಳ ಅರಗ ಲಕ್ಷ್ಮಣರಾವ್ ಅರಗ ಲಕ್ಷ್ಮಣರಾವ್
ನಾಕಸ್ತೂರಿ ನಾಕಸ್ತೂರಿ ಕಸ್ತೂರಿ ರಂಗನಾಥ ನಾರಾಯಣ ಶರ್ಮ
ಎನ್ಕೆ,, ನಾನೀಕಾಕಾ
ಎನ್ಕೆ ಕುಲಕರ್ಣಿ ನಾರಾಯಣ ಕೃಷ್ಣರಾವ್ ಕುಲಕರ್ಣಿ
ಮಧುರ ಚೆನ್ನ, ಜಮುನಾಲಾಲ, ವರಪಂಡಿತ ಮಧುರ ಚೆನ್ನ ಗಲಗಲಿಯ ಚನ್ನಮಲ್ಲಪ್ಪ
ಕೆ.ಎಸ್. ನ ಕೆ.ಎಸ್. ನರಸಿಂಹಸ್ವಾಮಿ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ
ಮುದ್ದಣ ಮುದ್ದಣ ನಂದಳಿಕೆ ಲಕ್ಷ್ಮಿನಾರಣಪ್ಪ
ತೀ.ನಂ.ಶ್ರೀ ತೀ.ನಂ.ಶ್ರೀ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ
ಬಿ.ಜಿ.ಎಲ್.ಸ್ವಾಮಿ ಬಿ.ಜಿ.ಎಲ್.ಸ್ವಾಮಿ ಬೆಂಗಳೂರು ಗುಂಡಪ್ಪ ಲಕ್ಷ್ಮಿನಾರಾಯಣ ಸ್ವಾಮಿ
ವೈದೇಹಿ ವೈದೇಹಿ ಜಾನಕಿ ಶ್ರೀನಿವಾಸ ಮೂರ್ತಿ
ಜೋಗಿ, ಜಾನಕಿ ಜೋಗಿ ಗಿರೀಶ್ ರಾವ್ ಹತ್ವಾರ್
ಪಾ.ವೆಂ. ಆಚಾರ್ಯ, ಲಾಂಗೂಲಾಚಾರ್ಯ
ಪಾವೆಂ ಪಾಡಿಗಾರು ವೆಂಕಟರಮಣ ಆಚಾರ್ಯ
ಡಿ.ಎಲ್. ಎನ್ ಡಿ.ಎಲ್. ಎನ್ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್
ಹಾಮಾನಾ ಹಾಮಾನಾ ಹಾರೋಗದ್ದೆ ಮಾನಪ್ಪ ನಾಯಕ
ಕೈಲಾಸಂ ಟಿ.ಪಿ.ಕೈಲಾಸಂ ತ್ಯಾಗರಾಜ ಪರಮಶಿವ ಕೈಲಾಸಂ
ದೇಜಗೌ ದೇಜಗೌ ದೇವೇಗೌಡ ಜವರೇಗೌಡ
ಜಿಪಿ ರಾಜರತ್ನಂ ಭ್ರಮರ ಗುಂಡ್ಲು ಪಂಡಿತ ರಾಜರತ್ನಂ
ಕವಿಶಿಷ್ಯ, ರಾಮಪಂ, ಹರಟೆಮಲ್ಲ
ಪಂಜೆ ಮಂಗೇಶರಾಯರು ಪಂಜೆ ಮಂಗೇಶರಾಯರು
ಶಾಂತಕವಿ ಶಾಂತಕವಿ ಸಕ್ಕರಿ ಬಾಳಾಚಾರ್ಯ
ಗಳಗನಾಥ ಗಳಗನಾಥ ವೆಂಕಟೇಶ ತಿರುಕೊ ಕುಲಕರ್ಣಿ
ಹಂಪನಾ ಹಂಪನಾ ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ
ಕುಂವೀ ಕುಂವೀ ಕುಂ. ವೀರಭದ್ರಪ್ಪ
ತೇಜಸ್ವಿ, ನಳಿನಿ ದೇಶಪಾಂಡೆ
ತೇಜಸ್ವಿ ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ
ಕೆ.ಟಿ ಗಟ್ಟಿ ಕೆ.ಟಿ ಗಟ್ಟಿ ಕೂಡ್ಲು ತಿಮ್ಮಪ್ಪ ಗಟ್ಟಿ
ಅ.ರಾ.ಮಿತ್ರ ಅ.ರಾ.ಮಿತ್ರ ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರ
ಯುಆರ್ ಎ ಯುಆರ್ ಅನಂತಮೂರ್ತಿ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ
ಜಿಎಸ್ಎಸ್ ಜಿಎಸ್ಎಸ್ ಜಿಎಸ್ ಶಿವರುದ್ರಪ್ಪ
ವೈಎನ್ಕೆ ವೈಎನ್ಕೆ ವೈ. ನಾರಾಯಣಮೂರ್ತಿ ಕೃಷ್ಣಮೂರ್ತಿ
ಸು.ರಂ.ಎಕ್ಕುಂಡಿ ಸು.ರಂ.ಎಕ್ಕುಂಡಿ ಸುಬ್ಬಣ್ಣ ರಂಗಾನಾಥ್ ಎಕ್ಕುಂಡಿ
English summary
Kannada writers known to the world for their versatility and also one can observe the unique pen names used by the Kannada poets, Novelist and writers. KV Puttana's pen name 'Kuvempu' D.R Bendre's Ambikadanayadatta and So on. Samsa used more than 17 pen names. Here is the list of pen names used by writers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X