ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗೆ ಬುದ್ಧಿಜೀವಿಗಳು ಸಲ್ಲಿಸಿದ ಮನವಿಯಲ್ಲೇನಿದೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 15: ಪ್ರಗತಿಪರ ಸಾಹಿತಿಗಳು, ಬುದ್ಧಿಜೀವಿಗಳು, ಮಠಾಧೀಶರು ಮತ್ತು ಪ್ರೊ . ಎಂಎಂ ಕಲಬುರ್ಗಿ ಅವರ ಪುತ್ರ ವಿಜಯ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ವಿವಿಧ ಆಗ್ರಹಗಳುಳ್ಳ ಮನವಿಯನ್ನು ಮಂಗಳವಾರ ಸಲ್ಲಿಕೆ ಮಾಡಿದ್ದಾರೆ.

ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಚಂಪಾ, ವಸುಂಧರಾ ಭೂಪತಿ, ಒಕ್ಕಲಿಗ ಮಠಾಧೀಶರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ. ನಿಯೋಗದಲ್ಲಿ ಕಲಬುರ್ಗಿ ಅವರ ಪುತ್ರ ವಿಜಯ್ ಮತ್ತು ಮುಕ್ತಾ ದಾಭೋಲ್ಕರ್ ಸಹ ಇದ್ದರು.[ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]

kannada

ಸಾಹಿತಿಗಳ ಭೇಟಿ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರೋ. ಕಲಬುರ್ಗಿ ಹತ್ಯೆ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ಘೋ‍ಷಿಸಿದ್ದಾರೆ. ಅಲ್ಲದೇ ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದ್ದಾರೆ.

ಸಾಹಿತಿಗಳು ಸಲ್ಲಿಸಿದ ಮನವಿಯಲ್ಲಿ ಏನಿದೆ?
* ರಾಜ್ಯದಲ್ಲಿ ಮೂಢ ನಂಬಿಕೆ ಪ್ರಗತಿಬಂಧಕ ಕಾಯಿದೆ ಜಾರಿಯಾಗಬೇಕು.
* ಕಲಬುರ್ಗಿ ಹತ್ಯೆ ತನಿಖೆ ಶೀಘ್ರ ಮುಗಿಯಬೇಕಿದೆ.[ಎಂ.ಎಂ.ಕಲಬುರ್ಗಿ ಅವರ ಮೇಲೆ ದಾಳಿ ನಡೆದಿದ್ದು ಹೇಗೆ?]
* ತನಿಖೆಗೆ ದಕ್ಷ ಅಧಿಕಾರಿಗಳ ತಂಡವನ್ನು ನೇಮಕ ಮಾಡಬೇಕು.
* ಕೋಮು ಭಾವನೆ ಕೆರಳಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು
* ರಾಘವೇಶ್ವರ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ನಿಷ್ಪಕ್ಷ ತನಿಖೆ ನಡೆಯಬೇಕು.

English summary
Kannada Intellectuals and MM Kalburgi son Vijay demands CM Siddaramaiah regarding the quick probe on Professor M M Kalburgi Murder case and several Issues. The Intellectuals Including Girish Karnad and other thinkers urged to Implement black magic forbidden act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X