ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಆರ್ ಪಿ ವಾರ್ ನಲ್ಲಿ ಮಕಾಡೆ ಮಲಗಿದ ಬಿಗ್ ಬಾಸ್ ಕನ್ನಡ 5

By ಜೇಮ್ಸ್ ಮಾರ್ಟಿನ್
|
Google Oneindia Kannada News

Recommended Video

ಕನ್ನಡ ಮಾಧ್ಯಮ ಜಗತ್ತಿನ ಸುತ್ತ ಒಂದು ನೋಟ | ಬಾರ್ಕ್ ರಿಪೋರ್ಟ್ ಇಲ್ಲಿದೆ | Oneindia Kannada

ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಈ ವಾರದ ವಾರೆ ನೋಟ ಇಲ್ಲಿದೆ.ಈ ವಾರವೂ ಮೇಲಕ್ಕೇರದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಎಂದು BARC ರಿಪೋರ್ಟ್ ಹೇಳುತ್ತಿದೆ. ನಾಳೆಯಿಂದ ಫ್ಯಾಮಿಲಿ ಶೋ ನಿರೂಪಕರಾಗಿ ಮತ್ತೊಮ್ಮೆ ಕಿರುತೆರೆಯಲ್ಲಿ ಮೋಡಿ ಮಾಡಲು ಪುನೀತ್ ಎಂಟ್ರಿ ಕೊಡುತ್ತಿದ್ದಾರೆ.

ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ

ಸುದ್ದಿ ಮುಖ್ಯಾಂಶಗಳು ಹೀಗಿವೆ:
* ವಿಜಯವಾಣಿ- ದಿಗ್ವಿಜಯ ಎರಡಕ್ಕೂ ಸಂಪಾದಕರು ಬೇಕಾಗಿದ್ದಾರೆ.
* ಟಿಆರ್ ಪಿಯಲ್ಲಿ ಕಲರ್ಸ್ ಕನ್ನಡ ಮುಂದು, ನ್ಯೂಸ್ ಚಾನೆಲ್ ಪೈಕಿ ಟಿವಿ9 ಎಂದಿನಂತೆ ನಂ.1.
* ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿ ಜನಪ್ರಿಯತೆ ಕುಗ್ಗುತ್ತಿದೆಯೇ?
* ಎಫ್ ಬಿ ಲೈವ್ ಮೂಲಕ ಎಂಟ್ರಿ ಕೊಟ್ಟ ಫೋಕಸ್ ಟಿವಿ.
* ಹಿರಿಯ ಪತ್ರಕರ್ತ ಅನಂತ ಚಿನಿವಾರ್ ಎಲ್ಲಿದ್ದಾರೆ?

ಮೀಡಿಯಾ ಮಸಾಲ: ಕನ್ನಡಕ್ಕೆ 'ಸ್ಟಾರ್' ಕ್ರೀಡಾ ಚಾನೆಲ್ಮೀಡಿಯಾ ಮಸಾಲ: ಕನ್ನಡಕ್ಕೆ 'ಸ್ಟಾರ್' ಕ್ರೀಡಾ ಚಾನೆಲ್

ಸುದ್ದಿ ವಾಹಿನಿಗಳಿಂದ ವಲಸೆ ನಡೆಯುತ್ತಿರುವ ಬೆನ್ನಲ್ಲೇ ಫಿಕ್ಷನ್ ಟೀಮ್ ಗಳ ಪುನರ್ ರಚನೆಯಾಗುತ್ತಿದೆ. ಧಾರಾವಾಹಿಗಳ ಭರಾಟೆಯ ನಡುವೆ ರಿಯಾಲಿಟಿ ಶೋ, ಟಾಕ್ ಶೋ, ಗೇಮ್ ಶೋಗಳು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಸುವರ್ಣ, ಜೀ, ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಗಳ ಉದಯ ಟಿವಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದೆ.

ಬಿಗ್ ಬಾಸ್ ಕನ್ನಡ ಜನಪ್ರಿಯತೆಗೆ ಏನಾಗಿದೆ?

ಬಿಗ್ ಬಾಸ್ ಕನ್ನಡ ಜನಪ್ರಿಯತೆಗೆ ಏನಾಗಿದೆ?

ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿ ಜನಪ್ರಿಯತೆ ಕುಗ್ಗುತ್ತಿದೆಯೇ? ಹೀಗೊಂದು ಪ್ರಶ್ನೆ ಮೊದಲ ವಾರದ ಕೊನೆಗೆ ಮೂಡಿದ್ದು ಸುಳ್ಳಲ್ಲ. ವೀಕೆಂಡ್ ನಲ್ಲಿ ಸುದೀಪ್ ನಿರೂಪಣೆ ಬಗ್ಗೆ, ಕಿಚನ್ ಕಮಾಲ್ ಬಗ್ಗೆ ಕೆಮ್ಮಂಗಿಲ್ಲ. ಆದರೆ, ಪ್ರೇಕ್ಷಕರ ಮನಸ್ಸಿನಲ್ಲಿ ಛಾಪು ಮೂಡಿಸಲು ವಿಫಲರಾದ ಸ್ಪರ್ಧಿಗಳು, ಅದೇ ಹಳೆ ಫಾರ್ಮ್ಯೂಲಾ, ಟಾಸ್ಕ್ ಗಳು, ಗಿಮಿಕ್ ಗಳು ಹೊಸ ಪ್ರೇಕ್ಷಕರನ್ನು ಹುಟ್ಟುಹಾಕುವಲ್ಲಿ ವಿಫಲರಾಗಿರುವುದರಿಂದ ಟಿ ಆರ್ ಪಿ ಮೇಲಕ್ಕೇರಿಲ್ಲ.

ಟಾಪ್ 5: ಎಲ್ಲಾ ಕಲರ್ಸ್ ವಾಹಿನಿಯ ಕಾರ್ಯಕ್ರಮ

ಟಾಪ್ 5: ಎಲ್ಲಾ ಕಲರ್ಸ್ ವಾಹಿನಿಯ ಕಾರ್ಯಕ್ರಮ

ನವೆಂಬರ್ 11 ರಿಂದ ನವೆಂಬರ್ 17ರ ತನಕದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ 5 ಕನ್ನಡ ಕಾರ್ಯಕ್ರಮಗಳು. ಎಲ್ಲವೂ ಕಲರ್ಸ್ ವಾಹಿನಿಯ ಕಾರ್ಯಕ್ರಮಗಳಾಗಿರುವುದು ವಿಶೇಷ.

1. ಕಲರ್ಸ್ ಕನ್ನಡ (ಪುಟ್ಟಗೌರಿ ಮದುವೆ)
2. ಕಲರ್ಸ್ ಕನ್ನಡ (ಲಕ್ಷ್ಮಿ ಬಾರಮ್ಮ)
3. ಕಲರ್ಸ್ ಕನ್ನಡ (ಕುಲವಧು)
4. ಕಲರ್ಸ್ ಕನ್ನಡ (ರಾಧಾ ರಮಣ)
5. ಕಲರ್ಸ್ ಕನ್ನಡ (ಅಗ್ನಿಸಾಕ್ಷಿ)
 ಟಾಪ್ 5 ಚಾನೆಲ್ ಗಳು

ಟಾಪ್ 5 ಚಾನೆಲ್ ಗಳು

ನವೆಂಬರ್ 11 ರಿಂದ ನವೆಂಬರ್ 17ರ ತನಕದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ 5 ಚಾನೆಲ್ ಗಳು.

1. ಕಲರ್ಸ್ ಕನ್ನಡ
2. ಜೀ ಕನ್ನಡ
3. ಉದಯ ಟಿವಿ
4. ಉದಯ ಮೂವಿಸ್
5. ಕಲರ್ಸ್ ಸೂಪರ್
ಮುಂಬರುವ ಚಾನೆಲ್ ಗಳು: ಟಿವಿ 1, ಫೋಕಸ್, ಪವರ್ ಕನ್ನಡ, ಎಬಿಪಿ, ಜೀ ಕನ್ನಡ ನ್ಯೂಸ್, ಗರುಡಾ ಮಾಲ್ ಒಡೆತನದ ಚಾನೆಲ್ ಬರುವ ಮುನ್ಸೂಚನೆ ಸಿಕ್ಕಿದೆ.

ದಿಗ್ವಿಜಯಕ್ಕೆ ಸಂಪಾದಕರು ಬೇಕಿದ್ದಾರೆ

ದಿಗ್ವಿಜಯಕ್ಕೆ ಸಂಪಾದಕರು ಬೇಕಿದ್ದಾರೆ

ವಿಜಯವಾಣಿ ಮತ್ತು ದಿಗ್ವಿಜಯ ಟಿವಿ ಸಂಪಾದಕರಾಗಿದ್ದ ಹರಿಪ್ರಕಾಶ ಕೋಣೆಮನೆಯನ್ನು ಸಂಸ್ಥೆಯಿಂದ ಹೊರ ಬಂದಿರುವ ಸುದ್ದಿ ಹೊಸದೇನಲ್ಲ. ಜತೆಗೆ ಔಟ್ಪುಟ್ ಚೀಫ್ ಆಗಿದ್ದ ಶರತ್ ಎಂ ಎಸ್ ಅವರು ಸಂಸ್ಥೆ ತೊರೆದಿದ್ದಾರೆ. ಆನಂದ್ ಸಂಕೇಶ್ವರ್ ಅವರು ಎಣಿಸಿ, ಗುಣಿಸಿ, ಭಾಗಿಸಿ ಅಳೆದು ತೂಗಿ ನೇಮಕಾತಿ ಪ್ರಕ್ರಿಯೆ ನೋಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ಚಾನೆಲ್ ಗಳು ಬರುತ್ತಿದ್ದು, ಅನುಭವಿ ಸಂಪಾದಕರನ್ನು ನೇಮಿಸಿ ಪೈಪೋಟಿಯಲ್ಲಿ ಉಳಿಯುವುದು ಅನಿವಾರ್ಯವಾಗಿದೆ.

BARC : ವರದಿ ಟಾಪ್ ನ್ಯೂಸ್ ಚಾನೆಲ್

BARC : ವರದಿ ಟಾಪ್ ನ್ಯೂಸ್ ಚಾನೆಲ್

ನವೆಂಬರ್ 11 ರಿಂದ ನವೆಂಬರ್ 17ರ ತನಕದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ ಕನ್ನಡ ಸುದ್ದಿ ವಾಹಿನಿಗಳು, ಕರ್ನಾಟಕ, ಬೆಂಗಳೂರು, ನಗರ ಹಾಗೂ ಗ್ರಾಮೀಣ ವಿಭಾಗದ ವರದಿ ಆಧಾರಿತ

1. ಟಿವಿ9 ಕನ್ನಡ
2. ಪಬ್ಲಿಕ್ ಟಿವಿ
3. ಸುವರ್ಣ 24/7
4. ನ್ಯೂಸ್18 ಕನ್ನಡ
5. ಬಿಟಿವಿ
6. ಉದಯ ಟಿವಿ
7. ಪ್ರಜಾ ಟಿವಿ
8. ದಿಗ್ವಿಜಯ
9. ಕಸ್ತೂರಿ
10. ಸುದ್ದಿ
11. ಸಮಯ
12. ರಾಜ್ ನ್ಯೂಸ್ ಕನ್ನಡ
13. ಜನಶ್ರೀ ಕನ್ನಡ

ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಗೆ

ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಗೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಫ್ಯಾಮಿಲಿ ಪವರ್ ಕಾರ್ಯಕ್ರಮದ ಮೂಲಕ ಪುನೀತ್ ರಾಜ್ ಕುಮಾರ್ ಅವರು ಕಿರುತೆರೆಯಲ್ಲಿ ಮತ್ತೊಮ್ಮೆ ನಿರೂಪಕನ ಪಾತ್ರವಹಿಸುತ್ತಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
*****
* ಹಿರಿಯ ಪತ್ರಕರ್ತೆ ಜ್ಯೋತಿ ಇರ್ವತ್ತೂರು ಅವರು ಎಫ್ ಬಿ ಲೈವ್ ಮೂಲಕ ಫೋಕಸ್ ಟಿವಿ ಬಗ್ಗೆ ಮಾಹಿತಿ ನೀಡಿದರು.
* ಹಿರಿಯ ಪತ್ರಕರ್ತ ಅನಂತ ಚಿನಿವಾರ್ ಅವರು ನ್ಯೂಸ್ 18 ಕನ್ನಡ ವಾಹಿನಿ ಸೇರಿದ್ದಾರೆ. ಇನ್ನಷ್ಟು ಮಾಹಿತಿ, ಸುದ್ದಿ, ಗಾಳಿಸುದ್ದಿಗಳು ಮುಂದಿನ ಬದಲಾವಣೆಯ ನಂತರ ಸದ್ಯಕ್ಕೆ ಬ್ರೇಕ್.

English summary
Kannada electronic media is abuzz with many developments. BARC rating report for 11th November 2017 to Friday, 17th November 2017 Week is out Bigg Boss Kannada 5 failed to appear this also and many more news from across the media houses in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X