• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ

By Mahesh
|

ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ವಾರೆ ನೋಟ ಇಲ್ಲಿದೆ. ಹೊಸ ಸುದ್ದಿವಾಹಿನಿಗಳ ಆಗಮನ, ತಂತ್ರಜ್ಞರ ವರ್ಗಾವಣೆ, ಚಾನೆಲ್ ಗಳ ಚುನಾವಣೆ ಸಿದ್ಧತೆ, ಸ್ಟಾರ್ ಸ್ಫೋರ್ಟ್ಸ್ ಇಂಡಿಯಾದ ಕನ್ನಡ ಚಾನೆಲ್ ಆರಂಭ ದಿನಾಂಕ ಮುಂದೂಡಿಕೆಯಾಗಿದೆ.

ಈ ಹಿಂದಿನ ಮೀಡಿಯಾ ಮಸಾಲ: ಕನ್ನಡಕ್ಕೆ 'ಸ್ಟಾರ್' ಕ್ರೀಡಾ ಚಾನೆಲ್

ಸುದ್ದಿ ಮುಖ್ಯಾಂಶಗಳು ಹೀಗಿವೆ:

* ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕ್ರೀಡಾ ಚಾನೆಲ್ ಆರಂಭ ಮುಂದೂಡಿಕೆ

* ಪ್ರಮುಖ ಆಂಕರ್ ಸೋಮಣ್ಣ ಮಾಚಿಮಾಡ ಅವರು ಫಸ್ಟ್ ನ್ಯೂಸ್ ನ ಆಂಕರ್.

* ಟಿವಿ9 ಕಟ್ಟಿ ಬೆಳೆಸಿದ ಮಾರುತಿ. ರವಿಕುಮಾರ್ ಅವರು ಫಸ್ಟ್ ನ್ಯೂಸ್ ನ ಪ್ರಮುಖರಾಗಿದ್ದಾರೆ.

* ನ್ಯೂಸ್18 ಕನ್ನಡದಿಂದ ರಂಗನಾಥ್ ಭಾರದ್ವಾಜ್ ಅವರು ಟಿವಿ9ಗೆ, ಪಬ್ಲಿಕ್ ಟಿವಿಯಲ್ಲಿದ್ದ ರಾಧಾ ಹಿರೇಗೌಡರ್ ಅವರು ಬಿಟಿವಿಗೆ ವಲಸೆ ಬಂದಿದ್ದಾರೆ.

ಕನ್ನಡದಲ್ಲಿ ಕ್ರೀಡಾ ಚಾನೆಲ್ ತರಲು ಸ್ಟಾರ್ ಸ್ಫೋರ್ಟ್ಸ್ ಇಂಡಿಯಾ ಮುಂದಾದ ಬೆನ್ನಲ್ಲೇ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಟ್ಟ ಮುಹೂರ್ತಕ್ಕೆ ಸರಿಯಾಗಿ ಕನ್ನಡದಲ್ಲಿ ಕ್ರೀಡಾ ಸುದ್ದಿ ನೋಡುವ, ಕೇಳುವ ಸೌಲಭ್ಯ ಕನ್ನಡಿಗರಿಗೆ ಸಿಕ್ಕಿಲ್ಲ.

ಬಿಟಿವಿಯಿಂದ ಚಂದನ್ ಶರ್ಮ ಟಿವಿ9ಗೆ ಎಂಟ್ರಿ

ಈ ನಡುವೆ ಸ್ಟಾರ್ ಸುವರ್ಣದಲ್ಲಿ ಐಎಸ್ಎಲ್ ಫುಟ್ಬಾಲ್ ಪಂದ್ಯಗಳ ಕನ್ನಡ ಫೀಡ್ ಜಾರಿಯಲ್ಲಿದೆ. ಓಹ್ ನಮ್ಮ ಬ್ಲೂಸ್ ಎಂದು ಸುನಿಲ್ ಛೆಟ್ರಿ ಹಾಡುವುದನ್ನು ಕೇಳಿಸಿಕೊಂಡು ಕಂಠೀರವ ಅಂಗಳದಲ್ಲಿ ಕನ್ನಡ ಫಲಕ ಕಂಡ ಕನ್ನಡ ಕ್ರೀಡಾಪ್ರೇಮಿಗಳು ಪುಳಕಿತರಾಗಿದ್ದಾರೆ. ನವೆಂಬರ್ 26ಕ್ಕೆ ಇಲ್ಲಿ ಪಂದ್ಯವಿದೆ.

ಟಿವಿ9 ಕನ್ನಡ ಚಾನೆಲ್ ನ ಪ್ರಮುಖರಾಗಿದ್ದ ಮಾರುತಿ. ರವಿಕುಮಾರ್, ಪ್ರಮುಖ ಆಂಕರ್ ಸೋಮಣ್ಣ ಮಾಚಿಮಾಡ ಅವರು ಹೊಸ ಚಾನೆಲ್ ಫಸ್ಟ್ ನ್ಯೂಸ್ ಲೋಗೊದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ...

ಟಿವಿ9 ಕಟ್ಟಿ ಬೆಳೆಸಿದ್ದ ಮಾರುತಿ-ರವಿ

ಟಿವಿ9 ಕಟ್ಟಿ ಬೆಳೆಸಿದ್ದ ಮಾರುತಿ-ರವಿ

ಟಿವಿ9 ಕನ್ನಡ ಚಾನೆಲ್ ನಿಂದ ಹೊರ ಬಂದ ನಂತರ ಚೀಫ್ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ರವಿಕುಮಾರ್ ಮತ್ತು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಾರುತಿ ಅವರು ಯಾವ ಚಾನೆಲ್ ಸೇರುತ್ತಾರೆ ಎಂಬುದು ಕುತೂಹಲಕಾರಿಯಾಗಿತ್ತು.

2006ರ ಮಾರ್ಚ್ 1ರಂದು ಟಿವಿ9 ಕನ್ನಡ ಸಂಸ್ಥೆ ಸೇರಿದ್ದ ಇವರಿಬ್ಬರು ಸುಮಾರು 12 ವರ್ಷಗಳ ಕಾಲ ಸಂಸ್ಥೆಯನ್ನು ಕಟ್ಟಿ ಬೆಳೆಸಿ ನಂ.1 ಸ್ಥಾನಕ್ಕೇರುವಂತೆ ಮಾಡಿದವರು. ಹೀಗಾಗಿ, ಸುದ್ದಿ ವಾಹಿನಿಗಳ ಕ್ಷೇತ್ರದಲ್ಲಿ ಸಹಜವಾಗಿ ಇವರಿಬ್ಬರಿಗೂ ಬಹುಬೇಡಿಕೆ ಇತ್ತು.

ಅನೇಕ ಚಾನೆಲ್ ಗಳ ಆಫರ್ ಇತ್ತು?

ಅನೇಕ ಚಾನೆಲ್ ಗಳ ಆಫರ್ ಇತ್ತು?

ಟಿವಿ9 ಕನ್ನಡ ತೊರೆದ ಬಳಿಕ ಇಬ್ಬರು ನ್ಯೂಸ್ 18(ಈಟಿವಿ ಕನ್ನಡ ನ್ಯೂಸ್‍ಗೆ) ಹೋಗ್ತಾರೆ, ಸುವರ್ಣ ಚಾನಲ್‍ಗೆ ಹೋಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅಲ್ಲದೆ, ಎಬಿಪಿ ನ್ಯೂಸ್ ಅಥವಾ ಜೀ ನ್ಯೂಸ್ ನ ಕನ್ನಡ ಆವೃತ್ತಿಯ ಸಾರಥ್ಯ ವಹಿಸುತ್ತಾರೆ ಎಂಬ ಸುದ್ದಿ ಹರಡಿತ್ತು.

ಇದಲ್ಲದೆ, ಸ್ಟಾರ್ ಸ್ಪೋಟ್ಸ್ ಕನ್ನಡ ವಿಭಾಗದ ಉಸ್ತುವಾರಿ ಹೊತ್ತಿದ್ದಾರೆ ಎನ್ನಲಾಗಿತ್ತು. ಈ ಹಿಂದೆ ಈಟಿವಿ ನ್ಯೂಸ್, ಸಮಯ, ಟಿವಿ9 ಕನ್ನಡ ನ್ಯೂಸ್ ನಲ್ಲಿದ್ದ ಸೋಮಣ್ಣ ಮಾಚಿಮಾಡ ಅವರು ಕೂಡಾ ಕ್ರೀಡಾ ಚಾನೆಲ್ ಅಥವಾ ಎಬಿವಿ ನ್ಯೂಸ್ ಸೇರಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಈಗ ಮೂವರ ಬಾಯಲ್ಲಿ ಒಂದೇ ಮಂತ್ರ ಫಸ್ಟ್ ನ್ಯೂಸ್.

ಯಾವಾಗ ಬರಲಿದೆ ಫಸ್ಟ್ ನ್ಯೂಸ್ ?

ಯಾವಾಗ ಬರಲಿದೆ ಫಸ್ಟ್ ನ್ಯೂಸ್ ?

ಕನ್ನಡ ಮಾಧ್ಯಮ ಲೋಕಕ್ಕೆ ಹೊಸದೊಂದು ಸುದ್ದಿವಾಹಿನಿ ಸೇರ್ಪಡೆಗೊಳ್ಳುತ್ತಿದೆ. ರವಿ ಕುಮಾರ್ ಹಾಗೂ ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್. ಇದರ ಲೋಗೋವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಲಾಯಿತು.

ಲಭ್ಯ ಮಾಹಿತಿ ಪ್ರಕಾರ ಜನವರಿ 2018ರ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಸುದ್ದಿ ಪ್ರಸಾರ ಆರಂಭಗೊಳ್ಳಲಿದೆ. ಲೋಗೋ ನೋಡಲು ಮೈಸೂರಿನ ಸ್ಥಳೀಯ ಚಾನೆಲ್ ನ್ಯೂಸ್ 1 ರೀತಿಯಲ್ಲೆ ಇದೆಯಲ್ಲ ಎಂದು ನಿಮಗನ್ನಿಸಿದರೆ ನಮ್ಮ ತಪ್ಪಲ್ಲ.

ಇನ್ನು ಫಸ್ಟ್ ನ್ಯೂಸ್ ಚಾನೆಲ್ ಸೇರಲು ಪತ್ರಕರ್ತರಲ್ಲದೆ, ತಂತ್ರಜ್ಞರ ದಂಡು ಸಜ್ಜಾಗಿದ್ದು, ಈಗಾಗಲೇ ಟಿವಿ9ನಿಂದ ರವಿ-ಮಾರುತಿ ಹಿಂಬಾಲಕರು ಫಸ್ಟ್ ನ್ಯೂಸ್ ಗೆ ವಲಸೆ ಆರಂಭಿಸಿರುವ ಸುದ್ದಿ ಬಂದಿದೆ.

ಸ್ಟಾರ್ ಸ್ಫೋರ್ಟ್ಸ್ ಕನ್ನಡ ಚಾನೆಲ್ ಎಲ್ಲೆಲ್ಲಿ ಲಭ್ಯ

ಸ್ಟಾರ್ ಸ್ಫೋರ್ಟ್ಸ್ ಕನ್ನಡ ಚಾನೆಲ್ ಎಲ್ಲೆಲ್ಲಿ ಲಭ್ಯ

ಡಿಎಎಸ್, ಡಿಟಿಎಚ್, ಐಪಿಟಿವಿ ಹಾಗೂ ಎಚ್ ಐಟಿಎಸ್ ಮಾದರಿಯಲ್ಲಿ ಲಭ್ಯ. ಬಹುಶಃ ನವೆಂಬರ್ ತಿಂಗಳಿನಲ್ಲೇ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಎಂದು ಪ್ರಸಾರ ಆರಂಭಗೊಳ್ಳಲಿದೆ ಎಂದು ಸ್ಟಾರ್ ಇಂಡಿಯಾ ಪ್ರೈ ಲಿಮಿಟೆಡ್ ಕಡೆಯಿಂದ ಮಾಹಿತಿ ಸಿಕ್ಕಿದೆ.

ಇದಕ್ಕೆ ಪ್ರತ್ಯೇಕವಾಗಿ ಯಾವುದೇ ವ್ಯವಸ್ಥೆ ಬೇಡವಾಗಿದ್ದು, ಪ್ರಸಾರಕರಿಂದ ನೇರ ಫೀಡ್ ಲಭ್ಯವಿರುತ್ತದೆ.ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಅಲ್ಲದೆ ಇನ್ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ 10ನೇ ಆವೃತ್ತಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಕನ್ನಡ ಭಾಷೆಯಲ್ಲಿ ಕೇಳಲು ಸಾಧ್ಯ. ಐಪಿಎಲ್ ವೀಕ್ಷಕ ವಿವರಣೆಯನ್ನು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲಿ ಪಡೆಯಬಹುದಾಗಿದೆ.

English summary
Kannada electronic media is abuzz with many developments. Some prominent journalists are jumping from channel to channel. Welcome new channel First News by Ravikumar and Maruti who built TV9 Kannada over the years this and many more news from across the media houses in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X