ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

VIDEO: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕಿರುಚಿತ್ರದಲ್ಲಿ ಅನು ಪ್ರಭಾಕರ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜು. 14: ಹಲವು ಕುಂದು-ಕೊರತೆಗಳ ಮಧ್ಯೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಸಂಪೂರ್ಣ ಶುಲ್ಕ ಕೊಡದೇ ಕೇವಲ ಶೇಕಡಾ 70ರಷ್ಟನ್ನು ಮಾತ್ರ ಭರಿಸಿರುವ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್ ಕೊಡದೇ ಹಲವು ಖಾಸಗಿ ಶಾಲೆಗಳು ಸತಾಯಿಸಿತ್ತಿವೆ. ಈ ಮಧ್ಯೆ ಆಲ್ ದ ಬೆಸ್ಟ್ ಆಲ್ ದ ಬೆಸ್ಟ್... ಬನ್ನಿ ಮಕ್ಕಳೇ... ನಿಮಗಾಗಿ ಎಲ್ಲ ಸಿದ್ಧತೆಯಾಗಿದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ. ಆಲ್ ದ ಬೆಸ್ಟ್ ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಚಲನಚಿತ್ರ ನಟನಟಿಯರ ಹಾರೈಸಿದ್ದಾರೆ. ಶಿಕ್ಷಣ ಇಲಾಖೆ ಈ ಬಗ್ಗೆ ಕಿರುಚಿತ್ರವನ್ನೇ ಮಾಡಿ ಬಿಡುಗಡೆ ಮಾಡಿದೆ.

ಇದೇ ಜುಲೈ 19 ಹಾಗೂ 22ರಂದು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆಯೋಜಿಸಲಾಗಿದೆ. ಪರೀಕ್ಷೆಗೆ ಹಾಜರಾಗುತ್ತಿರುವ ಪರೀಕ್ಷಾರ್ಥಿಗಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಲು ನಾಡಿನ ಚಲನಚಿತ್ರ ನಟನಟಿಯರು ಶುಭ ಹಾರೈಸಿ ಪರೀಕ್ಷಾ ಸಿದ್ಧತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿರುವ ವ್ಯಾಪಕ ಸಿದ್ಧತೆಗಳನ್ನು ವಿವರಿಸಿ ಧೈರ್ಯವಾಗಿ ಪರೀಕ್ಷೆ ಎದುರಿಸಲು ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಶುಭ ಹಾರೈಸಿದ್ದಾರೆ.

 ಎಸ್ಎಸ್ಎಲ್ ಸಿ ಪರೀಕ್ಷೆ2021: ಸುರಕ್ಷತಾ ಮಾರ್ಗಸೂಚಿ ಪ್ರಕಟ ಎಸ್ಎಸ್ಎಲ್ ಸಿ ಪರೀಕ್ಷೆ2021: ಸುರಕ್ಷತಾ ಮಾರ್ಗಸೂಚಿ ಪ್ರಕಟ

ಕಿರು ಚಿತ್ರ ಬಿಡುಗಡೆ

ಕಿರು ಚಿತ್ರ ಬಿಡುಗಡೆ

ಪರೀಕ್ಷಾ ಸಿದ್ಧತೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಕಿರು ಚಿತ್ರವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹಿರಿಯ ನಟಿ ಅನುಪ್ರಭಾಕರ್, ನಟ ಕಿರಣ್ ಶ್ರೀನಿವಾಸ್, ನಟ ದೇವ್ ದೇವಯ್ಯ, ನಟಿ ಹಿತಾ ಚಂದ್ರಶೇಖರ್, ನಟಿ ಸಂಯುಕ್ತಾ ಹೊರನಾಡು ಮತ್ತಿತರ ನಟರು ಪರೀಕ್ಷಾ ಕೇಂದ್ರದ ಮುಂದೆ ನಿಂತು ಮಕ್ಕಳನ್ನು ಸ್ವಾಗತಿಸುತ್ತಾ ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ಸಿದ್ಧತೆಯನ್ನು ವಿವರಿಸಿದ್ದಾರೆ.

ಅನು ಪ್ರಭಾಕರ್ ಹಾರೈಕೆ ಏನು?

ಅನು ಪ್ರಭಾಕರ್ ಹಾರೈಕೆ ಏನು?

"ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಮುಖ ಹಂತ. ಇದು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಮುಖ ಘಟ್ಟವಾದ್ದರಿಂದ ಈ ಪರೀಕ್ಷೆಯನ್ನು ಎದುರಿಸುವುದು ನಿಜಕ್ಕೂ ಒಂದು ಉತ್ತಮ ಸಂದರ್ಭವಾಗಿದೆ" ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಬೇಕು ಎಂದು ವಿನಂತಿಸಿದ್ದಾರೆ. ಅನು ಪ್ರಭಾಕರ್ ಅವರೊಂದಿಗೆ ಮತ್ತಷ್ಟು ನಟ-ನಟಿಯರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.

ಪರೀಕ್ಷೆ ಬರೆಯಲು SSLC ವಿದ್ಯಾರ್ಥಿಗಳಿಗೆ ಎದುರಾಯ್ತು ಮತ್ತೊಂದು ಆತಂಕ!ಪರೀಕ್ಷೆ ಬರೆಯಲು SSLC ವಿದ್ಯಾರ್ಥಿಗಳಿಗೆ ಎದುರಾಯ್ತು ಮತ್ತೊಂದು ಆತಂಕ!

ಗಮನ ಸೆಳೆಯುತ್ತಿದೆ ಮಾಹಿತಿ

ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸೀಟಿಂಗ್ ವ್ಯವಸ್ಥೆ, ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ಇಡುವ ವ್ಯವಸ್ಥೆ, ಜ್ವರ ಮತ್ತಿತರ ಲಕ್ಷಣವಿರುವವರಿಗೆ ಮಾಡಿರುವ ಪ್ರತ್ಯೇಕ ಕೊಠಡಿ, ಅರೋಗ್ಯ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರ ಸೇವೆ, ಕುಡಿಯುವ ನೀರು ವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯುತ್ತಿರುವುದನ್ನು ಚಿತ್ರೀಕರಿಸಿದ ದೃಶ್ಯಗಳ ಹಿನ್ನೆಲೆಯಲ್ಲಿ ನಟರು ಒಂದೊಂದೇ ಸಿದ್ಧತೆಯನ್ನು ವಿವರಿಸಿರುವುದು ಕಿರುಚಿತ್ರದಲ್ಲಿ ಗಮನ ಸೆಳೆಯುತ್ತಿದೆ.

ಪರೀಕ್ಷೆ ಹೇಗೆ ಬರೆಯಬೇಕು?

ಪರೀಕ್ಷೆ ಹೇಗೆ ಬರೆಯಬೇಕು?

ಪರೀಕ್ಷೆಗೆಬ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದರೊಂದಿಗೆ, ಪರೀಕ್ಷೆಯನ್ನು ಹೇಗೆ ಬರೆಯಬೇಕು ಎಂಬುದರ ಕುರಿತು ಕಿರು ಚಿತ್ರದಲ್ಲಿ ಮಾಹಿತಿ ಕೊಡಲಾಗಿದೆ. ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯನ್ನು ಹೇಗೆ ಬರೆಯುವುದು? ಮತ್ತು ಒಎಂಆರ್ ಶೀಟ್‌ ಹೇಗೆ ತುಂಬುವುದು? ಎಂದು ವಿವರಿಸುತ್ತಾ ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಬಂದು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಲ್ಲಿ ನಟರು-ನಟಿಯರು ಮನವಿ ಮಾಡಿದ್ದಾರೆ. ಯಾರ ಮಾತಿಗೂ ಕಿವಿಗೊಡದೇ ಯಾವುದಕ್ಕೂ ಹಿಂಜರಿಯದೇ ಉತ್ತಮ ವಾತಾವರಣದಲ್ಲಿ ಪರೀಕ್ಷೆ ಬರೆಯಿರಿ ಎಂದೂ ಸಲಹೆ ನೀಡಿದ್ದಾರೆ.

Recommended Video

ದಲಿತ ಯುವಕನಿಗೆ ಮನಸ್ಸಿಗೆ ಬಂದಂತೆ ಹೊಡೆದ ದರ್ಶನ್ ಅಂಡ್ ಗ್ಯಾಂಗ್ | Oneindia Kannada

English summary
Kannada Actors and actresses wished by a short film to SSLC students who writing exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X