ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತ ಮಹೋತ್ಸವ: ವೈರಲ್‌ ಆದ ಕನ್ನಡ ನಟರ 'ವಂದೇ ಮಾತರಂ' ಹಾಡು

|
Google Oneindia Kannada News

ಬೆಂಗಳೂರು ಆಗಸ್ಟ್ 16: 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಕನ್ನಡದ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದ 'ವಂದೇ ಮಾತರಂ' ಹಾಡಿನ ಮೂಲಕ ಸ್ಯಾಂಡಲ್‌ವುಡ್ ನಟರು ದೇಶಕ್ಕೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ನಾಡಿಗೆ ಕೊಡುಗೆ ನೀಡಿದವರಿಗೆ ಗೌರವ ಸಲ್ಲಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಡನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಸಂವಾದ ಚಾನಲ್‌ನಲ್ಲಿ ಒಂದೇ ದಿನದಲ್ಲಿ 2.48ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ನೋಡಿದ್ದಾರೆ. ಭಾರತ ಮಾತೆಗೆ ಗೌರವ ಅರ್ಪಿಸಿದ ಹಾಡು ಇದೀಗ ಎಲ್ಲೆಡೆ ವೈರಲ್‌ ಆಗಿದ್ದು, ಸಾಕಷ್ಟು ಜನರಿಂದ ಪ್ರಶಂಸೆಗೂ ಪಾತ್ರವಾಗಿದೆ.

ಹುಬ್ಬಳ್ಳಿ: ಶೆರೆವಾಡ ಗ್ರಾಮಸ್ಥರ ದಾಹ ನೀಗಿಸಲಿದೆ 'ಅಮೃತ ಸರೋವರ'ಹುಬ್ಬಳ್ಳಿ: ಶೆರೆವಾಡ ಗ್ರಾಮಸ್ಥರ ದಾಹ ನೀಗಿಸಲಿದೆ 'ಅಮೃತ ಸರೋವರ'

ಸಾಹಿತಿ ಎಸ್‌.ಎಲ್‌.ಬೈರಪ್ಪ, ವೃಕ್ಷಮಾತೆ, ಸಾಲುಮರದ ತಿಮ್ಮಕ್ಕ, ಭಾರತದ ಮಾಜಿ ಕ್ರಿಕೇಟಿಗ ಕನ್ನಡದ ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಈ ಹಾಡು ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತ ಹೋರಾಟಗಾರರು, ನಾಡಿಗೆ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸುತ್ತದೆ. ಜತೆಗೆ ನಮ್ಮ ಕಲೆ, ಸಂಸ್ಕೃತಿ ಬಿಂಬಿಸುವ ಸುಮಧುರ ಹಾಡಿಗೆ ವಿಜಯ ಪ್ರಕಾಶ್ ಕಂಠಸಿರಿ ಸೇರಿದ್ದು, ಅದು ಜನರಿಗೆ ಮತ್ತಷ್ಟು ಅತ್ಯಾಪ್ತವಾಗಲು ಕಾರಣವಾಗಿದೆ. ಕೆಲವರು ಈ ಅದ್ಭುತ ಹಾಡನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Kannada Actors Vande Mataram song Video goes Viral

ಸೊಗಸಾದ ಚತ್ರೀಕರಣ

ಹಾಡಿನಲ್ಲಿ ಕನ್ನಡ ನಟರಾದ ಆನಂತನಾಗ್‌, ರಮೇಶ್‌ ಅವರಿಂದ್, ವಿ.ರವಿಚಂದ್ರನ್, ಶಿವರಾಜ್‌ಕುಮಾರ್, ಜಗ್ಗೇಶ್, ಸುದೀಪ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ್ ಇನ್ನಿತರ ಸ್ಟಾರ್ ನಟರು ಕಾಣಿಸಿಕೊಂಡಿದ್ದಾರೆ.

ಹಾಡನ್ನು ನೋಡುತ್ತಿದ್ದರೆ ಇದು ನಮ್ಮೂರಿನ ಶಾಲೆ-ಕಾಲೇಜಿನಲ್ಲಿ ನಡೆಯುತ್ತಿರುವ ಅದ್ಧೂರಿ ಸ್ವಾತಂತ್ರ್ಯೋತ್ಸವ ಅನ್ನಿಸದೆ ಇರದು. ಇಲ್ಲಿ ಆನಂತ್ ನಾಗ್ ಅವರು ಶಾಲೆ ಪ್ರಾಂಶುಪಾಲರ ರೀತಿಯಲ್ಲಿ ಧ್ವಜಾರೋಹಣ ನೆರವೇರಿಸಿದರೆ ರಮೇಶ್ ಅರವಿಂದ್, ರವಿಚಂದ್ರನ್ ಅವರು ಶಿಕ್ಷಕರ ರೀತಿ ಕಾಣಿಸುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಶಾಲಾ ಕಾಲೇಜುಗಳಲ್ಲಿ ಕಂಡು ಬರುವ ವಿಶೇಷ ವಾತಾವರಣ, ಅಲ್ಲಲ್ಲಿ ತ್ರಿವರ್ಣ ಧ್ವಜಗಳ ಹಾರಾಟ ಇನ್ನಿತರ ಅಂಶಗಳನ್ನು ಈ ಹಾಡಿನಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ.

ಎಲ್ಲ ಕಲಾವಿದರೂ ಶಾಂತಿ, ಪಾವಿತ್ರ್ಯತೆಯ ಸಂಕೇತವಾದ ಶ್ವೇತ ಬಟ್ಟೆಯಲ್ಲಿ ಕಾಣಿಸುವುದರಿಂದ ಹಾಡು ಮತ್ತಷ್ಟು ವಿಶೇಷ ಎನ್ನಿಸುತ್ತದೆ. ಈ ಕಾರಣಕ್ಕೆ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕನ್ನಡದ 'ವಂದೇ ಮಾತರಂ' ಹಾಡು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸದ್ದು ಮಾಡುತ್ತಿದೆ.

Kannada Actors Vande Mataram song Video goes Viral

ಮಹಿಳಾ ಸಾಧಕಿಯರು ಇಲ್ಲವೇ?

ಅದ್ಭುತವಾಗಿ ಮೂಡಿ ಬಂದ ಈ 'ವಂದೇ ಮಾತರಂ' ಕೆಲವೇ ಸ್ವಾತಂತ್ರ್ಯ ಹೋರಾಟಗಾರರನ್ನು ತೋರಿಸಲಾಗಿದೆ. ಅಲ್ಲದೇ ಕನ್ನಡ ನಟರು ಮಾತ್ರ ಇದ್ದು, ನಟಿಯರು ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು ತಮ್ಮ ಖಾತೆಯಲ್ಲಿ ಕನ್ನಡ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ ಎಂದು ಬರೆದು ವಿಡಿಯೋ ಶೇರ್‌ ಮಾಡಿದ್ದಾರೆ. ಹಾಗಾದರೆ ಮಹಿಳಾ ಸಾಧಕಿಯರು ಚಿತ್ರರಂಗದಲ್ಲಿ ಇಲ್ಲವೇ ಎಂದಿದ್ದಾರೆ. ಇನ್ನು ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ ದಿ.ಡಾ.ಪುನೀತ್‌ ರಾಜ್‌ಕುಮಾರ್ ಅವರ ಒಂದೇ ಪೋಟೋ ಇಲ್ಲದಿರುವುದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Recommended Video

ಆರ್‌ಎಸ್‌ಎಸ್‌ಗೆ ಶರಣಾದ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ? | OneIndia Kannada

English summary
Kannada actor's 'Vande Mataram' song went viral on social media Platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X