• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking; ಕಾಂಗ್ರೆಸ್‌ ತೊರೆದ ಮುಖ್ಯಮಂತ್ರಿ ಚಂದ್ರು

|
Google Oneindia Kannada News

ಬೆಂಗಳೂರು, ಮೇ 29; ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ರಾಜೀನಾಮೆ ಪತ್ರವನ್ನು ರವಾನೆ ಮಾಡಿದ್ದಾರೆ.

25/5/2022ರ ದಿನಾಂಕದಂದು ಬರೆದಿರುವ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಎಂಬ ವಿಷಯದಲ್ಲಿ ಕಾರಣ ವಿವರಿಸಿದ್ದಾರೆ.

ಕಾಂಗ್ರೆಸ್ ಟೀಕೆಗೆ ಜೂ. 15ರಂದು ಉತ್ತರ: ಬಸವರಾಜ ಹೊರಟ್ಟಿ ಕಾಂಗ್ರೆಸ್ ಟೀಕೆಗೆ ಜೂ. 15ರಂದು ಉತ್ತರ: ಬಸವರಾಜ ಹೊರಟ್ಟಿ

ಈ ಪತ್ರದ ಮೂಲಕ ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

 ರಾಜ್ಯಸಭೆ ಚುನಾವಣೆ; ಕಾಂಗ್ರೆಸ್ ಟಿಕೆಟ್‌ಗೆ ನೂರು ಮಂದಿ ಅರ್ಜಿ! ರಾಜ್ಯಸಭೆ ಚುನಾವಣೆ; ಕಾಂಗ್ರೆಸ್ ಟಿಕೆಟ್‌ಗೆ ನೂರು ಮಂದಿ ಅರ್ಜಿ!

ದೇಶದಲ್ಲೇ ಸುಧೀರ್ಘ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ವ್ಯಾಪಕ ನೆಲೆಯಲ್ಲಿ ಜನಸೇವೆ ಮಾಡುವ ಆಶಯದಿಂದ ಸೇರ್ಪಡೆಗೊಂಡೆ. ಪಕ್ಷಕ್ಕೆ ಸೇರಿದಂದಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ.

ಕಾಂಗ್ರೆಸ್ ಚಿಂತನ ಶಿಬಿರದ ನಂತರ ಈಗ ಬಿಜೆಪಿಯಿಂದ ರಾಷ್ಟ್ರೀಯ ಸಭೆ ಎಲ್ಲಿ? ಯಾಕೆ ನಡೆಯುತ್ತಿದೆ? ಕಾಂಗ್ರೆಸ್ ಚಿಂತನ ಶಿಬಿರದ ನಂತರ ಈಗ ಬಿಜೆಪಿಯಿಂದ ರಾಷ್ಟ್ರೀಯ ಸಭೆ ಎಲ್ಲಿ? ಯಾಕೆ ನಡೆಯುತ್ತಿದೆ?

ಸದ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದು, ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷದ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಪ್ರಕಟಿಸಿರುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ.

ಇಂದಿನವರೆಗೂ ನನಗೆ ಪಕ್ಷದಲ್ಲಿ ಬೆಂಬಲಿಸಿದ ಪ್ರೀತಿಯನ್ನು ತೋರಿಸಿದ ಎಲ್ಲರಿಗೂ ಮನದಾಳದ ಕೃತಜ್ಞತೆಗಳು ಎಂದು ರಾಜೀನಾಮೆ ಪತ್ರದಲ್ಲಿ ಮುಖ್ಯಮಂತ್ರಿ ಚಂದ್ರು ವಿವರಿಸಿದ್ದಾರೆ.

English summary
Senior Kannada actor Mukhyamantri Chandru submitted resignation for Congress party primary membership. He submitted letter to KPCC president D. K. Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X