• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ಧ್ರುವ ಸರ್ಜಾ, ಪ್ರೇರಣಾ

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 2: ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಮನೆಗೆ ಹೊಸ ಅತಿಥಿ ಬರಮಾಡಿಕೊಂಡರು. ಪ್ರೇರಣಾ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ನಟ ಧ್ರುವ ಸರ್ಜಾ ಈಗ ತಂದೆಯಾದ ಖುಷಿಯಲ್ಲಿದ್ದಾರೆ. ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸಹಜ ಡೆಲಿವರಿ ಆಗಿರುವುದಾಗಿ ಅವರು ತಿಳಿಸಿದ್ದಾರೆ.

ಧ್ರುವ ಸರ್ಜಾ ಹೆರಿಗೆಗೆಂದು ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ಇರುವ ಅಕ್ಷಾ ಆಸ್ಪತ್ರೆಗೆ ತಮ್ಮ ಪತ್ನಿ ಪ್ರೇರಣಾ ಅವರನ್ನು ದಾಖಲಿಸಿದ್ದರು. ಭಾನುವಾರ ಡೆಲಿವರಿ ಆಗಿದೆ. ಪ್ರೇರಣಾ ಗರ್ಭಿಣಿ ಆಗಿರುವ ವಿಚಾರವನ್ನು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸೀಮಂತ ಸಹ ಅದ್ಧೂರಿಯಾಗಿ ನಡೆದಿತ್ತು.

ಇತ್ತೀಚೆಗೆ ಪ್ರೇರಣಾ ಸೀಮಂತ ಕಾರ್ಯಕ್ರಮ ನಡೆದಿತ್ತು. ಬಳಿಕ ದಂಪತಿಗಳು ಫೋಟೋಶೂಟ್ ಮಾಡಿಸುವ ಮೂಲಕ ನಾವು ಅಪ್ಪ ಅಮ್ಮ ಆಗಲಿದ್ದೇವೆ ಎಂದು ಖುಷಿಯನ್ನು ಹಂಚಿಕೊಂಡಿದ್ದರು. ನಾವು ಜೀವನದ ಮುಂದಿನ ಹಂತವನ್ನು ಪ್ರವೇಶಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮನ್ನು ಆಶೀರ್ವದಿಸಿ ಎಂದು ಧ್ರುವ ಸರ್ಜಾ ವಿಡಿಯೋ ಪೋಸ್ಟ್‌ ಹಂಚಿಕೊಂಡಿದ್ದರು. 2019 ನವೆಂಬರ್ 24ರಂದು ಧ್ರುವ ಸರ್ಜಾ ಹಾಗೂ ಪ್ರೇರಣ ಅವರ ವಿವಾಹವಾಗಿತ್ತು.

ಧ್ರುವ ಅವರಿಗೆ ಹೆಣ್ಣು ಮಗು ಬೇಕೆಂಬ ಆಸೆ ಇತ್ತು ಎನ್ನಲಾಗಿದೆ. ತಮ್ಮ ಅಣ್ಣ ದಿವಂಗತ ಚಿರಂಜೀವಿ ಸರ್ಜಾ ಮಗನೇ ನಮ್ಮ ಮಗ. ನಮಗೆ ಹೆಣ್ಣು ಮಗು ಬೇಕು ಎಂದು ಈ ಹಿಂದೆ ಧ್ರುವ ಹೇಳಿಕೊಂಡಿದ್ದರು. ಈಗ ಅವರ ಆಸೆಯಂತೆಯೇ ಹೆಣ್ಣು ಮಗುವಿನ ಜನನವಾಗಿದೆ.

English summary
Kannada film star Dhruva Sarja and his wife Prerna have welcomed a baby girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X