India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠ್ಯದಲ್ಲಿ ಕನಕದಾಸರ ಕಡಗಣನೆ: ಸಿಎಂಗೆ ಕಾಗಿನೆಲೆ ಶ್ರೀಗಳ ಪತ್ರ

|
Google Oneindia Kannada News

ಬೆಂಗಳೂರು, ಜೂ.27: ರಾಜ್ಯ ಸರ್ಕಾರ ನೂತನವಾಗಿ ನೇಮಿಸಿರುವ ಪಠ್ಯ ಪರಿಷ್ಕರಣೆ ಸಮಿತಿಯ ವಿವಾದ ಮುಗಿಯುವ ಸೂಚನೆ ಸದ್ಯಕ್ಕೆ ಕಾಣದಾಗಿದೆ. ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಎಡವಟ್ಟುಗಳ ಬಗ್ಗೆ ರಾಜ್ಯದಲ್ಲಿ ದಿನಕ್ಕೊಂದು ಸಮುದಾಯದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆ ಕೈಬಿಟ್ಟಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಕಾಗಿನೆಲೆ ಶ್ರೀಗಳು ಪತ್ರ ಬರೆದಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಒಂದು ಪುಟದಲ್ಲಿದ್ದ ಕನಕದಾಸರ ಜೀವನ ವಿವರಗಳನ್ನೊಳಗೊಂಡ ಪಠ್ಯ ಭಾಗವನ್ನು ಕೇವಲ ಒಂದೇ ಒಂದು ಸಾಲಿಗೆ ಕಡಿತಗೊಳಿಸಲಾಗಿದೆ.

ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ: ಮಿಥುನ್ ರೈ ಸವಾಲ್ ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ: ಮಿಥುನ್ ರೈ ಸವಾಲ್

ಅಷ್ಟೇ ಅಲ್ಲದೆ ಧಾರ್ಮಿಕ ಅಂಧ ಶ್ರದ್ಧೆ, ಮೌಢ್ಯ ಮತ್ತು ತಳಸಮುದಾಯಗಳ ಶೋಷಣೆ ವಿರುದ್ಧ ತಾತ್ವಿಕ ಮತ್ತು ಸಾತ್ವಿಕ ಹೋರಾಟ ನಡೆಸುವ ಮೂಲಕ ನೊಂದವರ ಧ್ವನಿಯಾದ ಕನಕದಾಸರ ಆದರ್ಶ ಮತ್ತು ದಾರ್ಶನಿಕ ದತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆಸುವುದು, ಹಿಂದುಳಿದ ಸಮುದಾಯಗಳನ್ನು ಒಳಗೊಂಡಂತೆ ಈ ನೆಲದ ನಾಡು ನುಡಿಗೆ ಮಾಡಿದ ದ್ರೋಹವಾಗಿದೆ ಮತ್ತು ಚಾರಿತ್ರಿಕ ಹಾಗೂ ಸಾಂಸ್ಕೃತಿಕ ದ್ರೋಹವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಂಗಳೂರು; ಪ್ರತಿಭಟನೆ ಎಚ್ಚರಿಕೆ, ರೋಹಿತ್ ಚಕ್ರತೀರ್ಥ ಸನ್ಮಾನ ರದ್ದು ಮಂಗಳೂರು; ಪ್ರತಿಭಟನೆ ಎಚ್ಚರಿಕೆ, ರೋಹಿತ್ ಚಕ್ರತೀರ್ಥ ಸನ್ಮಾನ ರದ್ದು

ವಿಸ್ತೃತ ನೈಜ ಸಂಗತಿಗಳನ್ನು ಹಿಂದಿನಂತೆ ಅಳವಡಿಸಿ

ವಿಸ್ತೃತ ನೈಜ ಸಂಗತಿಗಳನ್ನು ಹಿಂದಿನಂತೆ ಅಳವಡಿಸಿ

ಪಠ್ಯದಲ್ಲಿ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸತ್ಯಗಳನ್ನು ತಿರುಚುವ ಕುತಂತ್ರಗಳನ್ನು ಖಂಡಿಸುತ್ತೇನೆ, ಈ ಮೂಲಕ ಮುಖ್ಯಮಂತ್ರಿಗಳಾದ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಕನಕದಾಸರ ಜೀವನ ವಿವರಗಳನ್ನು ವಿಸ್ತೃತ ನೈಜ ಸಂಗತಿಗಳನ್ನು ಹಿಂದಿನಂತೆ ಅಳವಡಿಸುವ ಮೂಲಕ ಲೋಪದೋಷಗಳನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಒಸಗಿಸಬೇಕೆಂದು ಕೋರುತ್ತೇವೆ ಎಂದು ಕಾಗಿನೆಲೆ ಕ್ಷೇತ್ರದ ನಿರಂಜನಾನಂದಪುರಿ ಸಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರದಲ್ಲಿ ತಿಳಿಸಿದ್ದಾರೆ.

 ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಇದಕ್ಕೂ ಮುಂದೆ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ವಿಚಾರಗಳನ್ನು ಸೇರಿಸುವಲ್ಲಿ ಸಮಿತಿಯು ಎಡುವಟ್ಟು ಮಾಡಿತ್ತು ಎಂದು ಆರೋಪಿಸಿ ಹಲವಾರು ಸಂಘಟನೆಗಳು ಸಮಿತಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಪಠ್ಯಪರಿಷ್ಕರಣೆ ಸಮಿತಿಯ ವಿವಾದ ತಾರಕಕ್ಕೆ ಏರಿಕೆಯಾಗಿ ನಂತರ ಸಮಿತಿಯನ್ನು ವಿಜರ್ಸನೆ ಮಾಡಲಾಗಿತ್ತು. ಸಮಿತಿ ವಿರುದ್ದ 10ಕ್ಕೂ ಹೆಚ್ಚು ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳೀಕೆ

ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳೀಕೆ

ಸಾಹಿತಿಗಳು, ರಾಜಕಾರಣಿಗಳು, ಮಠಾಧೀಶರು, ಪ್ರಬಲ ಜಾತಿಗಳ ಮುಖಂಡರ ವಿರೋಧ ಎದುರಾಗಿದ್ದರಿಂದ ರೋಹಿತ್‌ ಚಕ್ರತೀರ್ಥರನ್ನು ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಿಂದ ಕೈಬಿಡಲು ಸರ್ಕಾರ ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಕೂಡ ತಿಳಿಸಿದ್ದರು. ದ್ವಿತೀಯ ಪಿಯುಸಿ ಪಠ್ಯದಲ್ಲಿ ಹೊಸಧರ್ಮಗಳ ಉದಯ ಎಂಬ ಪಠ್ಯವನ್ನು ಮಾಡಲು ಸಮಿತಿ ಮುಂದಾಗಿತ್ತು. ಈ ಪರಿಷ್ಕರಣೆಯ ಜವಾಬ್ದಾರಿಯನ್ನು ರೋಹಿತ್‌ ಚಕ್ರತೀರ್ಥಗೆ ವಹಿಸಲಾಗಿತ್ತು.

ನಾಡಗೀತೆ, ಕುವೆಂಪು ಅವರಿಗೆ ಅಪಮಾನ

ನಾಡಗೀತೆ, ಕುವೆಂಪು ಅವರಿಗೆ ಅಪಮಾನ

ಶಾಲೆಯ ಪಠ್ಯಪುಸ್ತಕ ಅದರಲ್ಲೂ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕ ಮರುಪರಿಷ್ಕರಣೆಯ ನಂತರ ವಿವಾದಗಳು ತಾರಕ್ಕೇರಿದ್ದವು, ಸಾಹಿತಿಗಳು ರೋಹಿತ್‌ ಚಕ್ರತೀರ್ಥ ಎಂಬ ವ್ಯಕ್ತಿಯನ್ನು ಪಠ್ಯಪರಿಷ್ಕರಣೆಯ ಸಮಿತಿ ಅಧ್ಯಕ್ಷ ಎಂದು ಒಪ್ಪಿಕೊಳ್ಳಲು ಸಿದ್ಧರಾಗಿರಲಿಲ್ಲ ನಾಡಗೀತೆ, ಕುವೆಂಪು, ಬಸವಣ್ಣ ಹಾಗೂ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಒಂದು ದೊಡ್ಡ ವರ್ಗವೇ ಆಕ್ರೋಶವನ್ನು ವ್ಯಕ್ತಪಡಿಸಿತ್ತು. ಇದೆಲ್ಲದರ ನಡುವೆ ಸಿಎಂ ಬಸವರಾಜ ಬೊಮ್ಮಯಿ ಜೂ. 3ರಂದು ಪಠ್ಯಪುಸ್ತಕ ಸಮಿಯಿಯನ್ನು ವಿಸರ್ಜಿಸಿದ್ದರು.

   ತನಗಿರೋ ವಿಚಿತ್ರ ಕಾಯಿಲೆಯಿಂದ ಅನುಭವಿಸಿದ ಸಂಕಟ ಹೇಳಿಕೊಂಡ ನಟ ಬ್ರಾಡ್ ಪಿಟ್ | OneIndia Kannada
   English summary
   Daasashreshta Kanakadasa neglected in Kannada text book. Kaginele mutt shri Niranjanananda puri swamiji letter to chief minister Basavaraj Bommai.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X