ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕ ಜಯಂತಿ ಮುಂದೂಡಿಕೆ, ಸರ್ಕಾರಿ ರಜೆ ಮುಂದುವರಿಕೆ, ಹೊಸ ದಿನಾಂಕ ಶೀಘ್ರ ಪ್ರಕಟ

|
Google Oneindia Kannada News

ಬೆಂಗಳೂರು, ನವೆಂಬರ್ 26: ಇಂದು (ನವೆಂಬರ್ 26) ಕನಕಜಯಂತಿ, ಸರ್ಕಾರದ ವತಿಯಿಂದ ಕನಕ ಜಯಂತಿ ಆಚರಿಸಲು ಸಕಲ ಸಿದ್ಧತೆ ಪೂರ್ಣವಾಗಿತ್ತು. ಆದರೆ ಅಂಬರೀಶ್ ಹಾಗೂ ಜಾಫರ್ ಶರೀಫ್‌ ನಿಧನದಿಂದಾಗಿ ಕನಕ ಜಯಂತಿ ಮುಂದೂಡಲಾಗಿದೆ.

ಅಂಬರೀಶ್ ನಿಧನ: ಕುಮಾರಸ್ವಾಮಿ ಎದುರಿಸುತ್ತಿರುವ 2ನೇ ಅತ್ಯಂತ ಕಠಿಣ ಸವಾಲು ಅಂಬರೀಶ್ ನಿಧನ: ಕುಮಾರಸ್ವಾಮಿ ಎದುರಿಸುತ್ತಿರುವ 2ನೇ ಅತ್ಯಂತ ಕಠಿಣ ಸವಾಲು

ರಾಜ್ಯದೆಲ್ಲಡೆ ಕನಕ ಜಯಂತಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರೆ ಇಂದು ಇದ್ದ ಸರ್ಕಾರಿ ರಜೆಯನ್ನು ಹಾಗೆಯೇ ಮುಂದುವರೆಸಲಾಗಿದೆ. ಹಾಗಾಗಿ ಇಂದು ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.

ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಕುಮಾರಸ್ವಾಮಿ ಭರವಸೆ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಕುಮಾರಸ್ವಾಮಿ ಭರವಸೆ

ಸರ್ಕಾರದ ವತಿಯಿಂದ ಆಚರಿಸುವ ಕನಕ ಜಯಂತಿ ಕಾರ್ಯಕ್ರಮದ ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Kanaka jayanthi postponed due to Ambareesh death mourning

ಅಂಬರೀಶ್‌ ಮೃತಪಟ್ಟ ದಿನವೇ ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಮೂರು ದಿನಗಳ ಶೋಕಾಚರಣೆ ಪ್ರಕಟಿಸಿದ್ದರು. ಆದ್ದರಿಂದ ಕನಕಜಯಂತಿ ಮುಂದೂಡುವುದು ಅನಿವಾರ್ಯವಾಗಿತ್ತು. ರಾಜಕೀಯ ಮುತ್ಸದಿ ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್‌ ಸಹ ಮೃತರಾದ ರಾಜ್ಯಕ್ಕೆ ಬಹು ದುಃಖದ ದಿನವಾಗಿ ಭಾನುವಾರ ಹಾಗೂ ಶನಿವಾರಗಳು ಪರಿಣಮಿಸಿದವು.

English summary
Kanaka Jayanthi celebration was postponed due ti Ambareesh death. CM annnounce three day mourning in the state. New date of Kanaka Jayanthi will be announced soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X