ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ಶಾಲೆಗಳಿಗೆ ಅಗ್ನಿ ಸುರಕ್ಷತಾ ನೀತಿ ರೂಪಿಸಲು ಕ್ಯಾಮ್ಸ ಒತ್ತಯ

|
Google Oneindia Kannada News

ಬೆಂಗಳೂರು, ಜೂ. 23: ಶಾಲಾ ಕಾಲೇಜುಗಳಿಗೆ ಅಗ್ನಿ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯುವ ಸಂಬಂಧ 2018 ಕ್ಕಿಂತಲೂ ಮೊದಲೇ ಪ್ರಾರಂಭವಾಗಿರುವ ಶಾಲೆಗಳಿಗೆ ಸಾಧ್ಯವಾಗಬಹುದಾದ ಅಗ್ನಿ ಸುರಕ್ಷತಾ ನಿಯಮ ಅಳವಡಿಸಲು ನೀತಿ ರೂಪಿಸುವಂತೆ ಅಸೋಸಿಯೇಟೆಟ್ ಮ್ಯಾನೇಜ್ ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ( ಕ್ಯಾಮ್ಸ್ ) ಸರ್ಕಾರಕ್ಕೆ ಮನವಿ ಮಾಡಿದೆ.

ಖಾಸಗಿ ಅನುದಾನ ರಹಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಉಪಕರಣ ಅವಳಡಿಕೆ ಸಂಬಂಧ ಸರ್ಕಾರ ರಾಜ್ಯದ ಅಗ್ನಿ ಶಾಮಕ ಠಾಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಸಲಹಾ ಪ್ರಮಾಣ ಪತ್ರ ನೀಡುವ ಅಧಿಕಾರ ನೀಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಶಾಲಾ ಆಡಳಿತ ಮಂಡಳಿಗಳು ಅಗ್ನಿ ಸುರಕ್ಷತೆ ನಿಯಮಗಳ ಬಗ್ಗೆ ಸರ್ಕಾರ ತೆಗೆದುಕೊಂಡಿರು ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.

2018 ಕ್ಕಿಂತಲೂ ಮೊದಲು ಆರಂಭವಾಗಿರುವ ಶಾಲೆಗಳಲ್ಲಿ ಕೈಗೊಳ್ಳಬೇಕಾಗಿರುವ ಅಗ್ನಿ ಸುರಕ್ಷತಾ ಕ್ರಮಗಳ ವಿವರ:

ಶಾಲೆಗಳಲ್ಲಿ ಅಗ್ನಿ ನಂದಕ ಉಪಕರಣ ಅಳವಡಿಸುವುದು.

ಪ್ರತಿ ಶಾಲೆಯಲ್ಲಿ ಮರಳಿನ ಬಕೆಟ್ ಅಳವಡಿಸುವುದು.

Kams Demand New Fire Safety Rules to Be Implement in Old Schools

ಪ್ರತಿ ಮಹಡಿಯಲ್ಲೂ ಅಗ್ನಿ ನಂದಕ ಉಪಕರಣ ಹಾಕುವುದು.

ಸುರಕ್ಷತಾ ಪ್ಯಾರಾಪಿಟ್ ವಾಲ್ ಏರಿಕೆ.

ಶಾಲೆಯಲ್ಲಿ ಸಾಧ್ಯವಾದಷ್ಟು ಕಡೆ ಮೆಟ್ಟಿಲು ಅಳವಡಿಕೆ

ಒಂದನೇ ಮಹಡಿ ಹೊರತು ಪಡಿಸಿ ತೆರಳದ ಸ್ಥಳದಲ್ಲಿ ಸೇಫ್ಟಿನೆಟ್ ಅಳವಡಿಸುವುದು.

ಅಡುಗೆ ಮನೆಗಳಲ್ಲಿದ್ದಲ್ಲಿ ಫೈರ್ ಅಂಡ್ ಸ್ಮೋಕ್ ಡಿಟೆಕ್ಟರ್ ಅಳವಡಿಸುವುದು.

ಗ್ಯಾಸ್ ಲೀಕ್ ಡಿಟೆಕ್ಟರ್ ಅಳವಡಿಕೆ ಮಾಡುವುದು.

Kams Demand New Fire Safety Rules to Be Implement in Old Schools

ಫೈರ್ ಎಕ್ಸಿಟ್ ಪ್ಲಾನ್.

ಅಗ್ನಿ ಸುರಕ್ಷತಾ ಡ್ರಿಲ್ ಮಾಡಿಸುವುದು.

ಅಗ್ನಿ ನಂದಕ ಬಳಕೆ ಕುರಿತು ಸಿಬ್ಬಂದಿಗೆ ತರಬೇತಿ,

ಶಾಲೆಗಳಲ್ಲಿ ಯಾವುದೇ ಸ್ಫೋಟಕ ಸಂಗ್ರಹಿಸುವಂತಿಲ್ಲ.

ಪ್ರಯೋಗಾಲಯದಲ್ಲಿ ಸ್ಫೋಟಕ ರಾಸಾಯನಿಕ ಇಟ್ಟಲ್ಲಿ ಅಲ್ಲಿ ಸ್ಥಳ ಪರಿಶೀಲಿಸಿ ಪ್ರತ್ಯೇಕ ಅಗ್ನಿ ನಂದಕ ಉಪಕರಣ ಅಳವಡಿಸುವುದು.

Kams Demand New Fire Safety Rules to Be Implement in Old Schools

ಪ್ರಶಿ ಶಾಲೆಯ ಪ್ರಯೋಗಾಲಯದಲ್ಲಿ ಅಗ್ನಿ ನಂದಕ ಉಪಕರಣ ಅಳವಡಿಸಿ ಸುರಕ್ಷತಾ ನಿಯಮ ಪಾಲಿಸುವುದು.

ಒಂದು ಶಾಲೆಯ ಅಗ್ನಿ ಸುರಕ್ಷತಾ ವಿಚಾರ ಬಂದರೆ ಇಷ್ಟು ಕ್ರಮ ಅಗತ್ಯ ಬೀಳಬಹುದು. ವಿನಾಃಕಾರಣ ಶಿಕ್ಷಣ ಸಂಸ್ಥೆಗಳ ಮೇಲೆ ಅಗ್ನಿ ನಿರಾಕ್ಷೇಪಣಾ ಹೆಸರಿನಲ್ಲಿ ಕಿರುಕುಳ ನೀಡುವುದು ಸೂಕ್ತವಲ್ಲ. ಹೀಗಾಗಿ 2018 ಗಿಂತಲೂ ಮೊದಲು ಆರಂಭವಾಗಿರುವ ಶಾಲೆಗಳು ಕೈಗೊಳ್ಳಬೇಕಾದ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಸರ್ಕಾರ ಪ್ರತ್ಯೇಕ ಸಮಿತಿ ರಚಿಸಿ ಅಗತ್ಯ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ನೀತಿ ರೂಪಿಸಿ ಪಾರದರ್ಶಕ ಅಂಶಗಳನ್ನು ಪಾಲನೆ ಮಾಡುವಂತೆ ಮಾಡಬೇಕು ಎಂದು ಕ್ಯಾಮ್ಸ್ ಮನವಿ ಮಾಡಿದೆ.

ಒಂದು ವರ್ಷದ ಬದಲಿಗೆ ಐದು ವರ್ಷಕ್ಕೆ ನವೀಕರಣಕ್ಕೆ ಮನವಿ:

ಶಾಲೆಗಳಲ್ಲಿ ಅಗ್ನಿ ಸುರಕ್ಷತಾ ನಿರಪೇಕ್ಷಣಾ ಪತ್ರ ಸಂಬಂಧ ಒಂದು ವರ್ಷಕ್ಕೆ ನವೀಕರಣ ಮಾಡುವ ಬದಲಿಗೆ ಐದು ವರ್ಷಕ್ಕೆ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕು. ಎಲ್ಲಾ ಅಗ್ನಿ ಸುರಕ್ಷಾ ನಿಯಮ ಪಾಲಿಸಿ ಪ್ರತಿ ವರ್ಷ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯುವುದರಲ್ಲಿ ಅರ್ಥವಿಲ್ಲ. ಇದರಿಂದ ಅಗ್ನಿ ಶಾಮಕ ದಳದ ಅಧಿಕಾರಿಗಳ ಹಸ್ತಕ್ಷೇಪ ಆರಂಭವಾಗಿ ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತದೆ. ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕ್ಯಾಮ್ಸ್ ಮನವಿ ಮಾಡಿದೆ.

English summary
Fire safety rules in Private Schools controversy; Kams Demand New Fire Safety Rules to Be Implement in Old Schools. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X