ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಬಳವೀರನಿಗೆ ಕೊಟ್ಟಿದ್ದು ಖಾಲಿ ಲಕೋಟೆ ಅಲ್ಲ, ಅಭಿನಂದನಾ ಪತ್ರ ಇತ್ತು!

|
Google Oneindia Kannada News

Recommended Video

Kambala Jockey Srinivas Gowda was given an empty envelope just for the picture

ಬೆಂಗಳೂರು, ಫೆ. 17: ಚೆಕ್ ಇಲ್ಲದ ಖಾಲಿ ಕವರ್ ಕೊಟ್ಟು ಸನ್ಮಾನ ಮಾಡುವ ಮೂಲಕ ಕಂಬಳ ವೀರ ಶ್ರೀನಿವಾಸಗೌಡರನ್ನು ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಕೇವಲ ಪ್ರಚಾರಕ್ಕಾಗಿ ಬಳಸಿಕೊಂಡರಾ? ಹೌದು, ಇಂಥದ್ದೊಂದು ಎಡವಟ್ಟು ಜಂಟಿ ಅಧಿವೇಶನದ ಮೊದಲ ದಿನವೇ ವಿಧಾನಸೌಧದಲ್ಲಿ ನಡೆದಿದೆ.

ಕಂಬಳದಲ್ಲಿ 145 ಮೀಟರ್ ದೂರವನ್ನು ಕೇವಲ 13.45 ಸೆಕೆಂಡ್‌ನಲ್ಲಿ ಓಡಿ ಕರ್ನಾಟಕದ ಉಸೇನ್ ಬೋಲ್ಟ್ ಎಂದು ಹೆಸರು ಮಾಡಿರುವ ಶ್ರೀನಿವಾಸಗೌಡ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಸನ್ಮಾನವನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಡಲಾಯಿತು. ಸನ್ಮಾನ ಮಾಡಲು ಅವರನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣಕ್ಕೆ ಕರೆದುಕೊಂಡು ಬರಲಾಗಿತ್ತು. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಂಬಳ ಓಟದಲ್ಲಿ ದೇಶದ ಗಮನವನ್ನು ಶ್ರೀನಿವಾಸಗೌಡ ಅವರು ಸೆಳೆದಿದ್ದಾರೆ ಎಂದು ಶ್ರೀನಿವಾಸಗೌಡ ಅವರನ್ನು ಹಾಡಿ ಹೊಗಳಿದ್ದರು.

ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದರೇ 'ಕಂಬಳ ವೀರ'? ಸತ್ಯವೇನು?ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದರೇ 'ಕಂಬಳ ವೀರ'? ಸತ್ಯವೇನು?

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸನ್ಮಾನ ಮಾಡಿದ ಬಳಿಕ ಕಾರ್ಮಿಕ ಇಲಾಖೆಯಿಂದ ಕೊಡಬೇಕಾಗಿದ್ದ ಚೆಕ್‌ನ್ನು ವಿತರಣೆ ಮಾಡಿ ಎಂದು ಸಚಿವರಿಗೆ ಹೇಳಿ ಅಲ್ಲಿಂದ ತೆರಳಿದ್ದರು. ಸಿಎಂ ಸಮ್ಮೇಳನ ಸಭಾಂಗಣದಿಂದ ತೆರಳಿದ ಬಳಿಕ ಚೆಕ್ ವಿತರಣೆ ಎಡವಟ್ಟು ನಡೆದಿದೆ.

ಈ ಎಡವಟ್ಟು ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಸಚಿವರು ಎಚ್ಚೆತ್ತುಕೊಂಡು, ಸ್ಪಷ್ಟನೆ ಕೊಡಿಸುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಚೆಕ್ ಇಲ್ಲದ ಖಾಲಿ ಕವರ್ ವಿತರಿಸಿದ ಸಚಿವರು!

ಚೆಕ್ ಇಲ್ಲದ ಖಾಲಿ ಕವರ್ ವಿತರಿಸಿದ ಸಚಿವರು!

ಕಂಬಳ ಓಟದಲ್ಲಿ ಸಾಧನೆ ಮಾಡಿರುವ ಶ್ರೀನಿವಾಸಗೌಡ ಅವರ ಸನ್ಮಾನ ಸಮಾರಂಭದಲ್ಲಿ ಸಚಿವರ ಪ್ರಚಾರ ಪ್ರೀತಿ ಮಾತ್ರ ಹೆಚ್ಚಾಗಿತ್ತು. ಶ್ರೀನಿವಾಸಗೌಡ ಅವರಿಗೆ ಸನ್ಮಾನ ಮಾಡಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಳಿಕ ಚೆಕ್ ವಿತರಣೆ ಮಾಡಿ ಎಂದು ಸೂಚಿಸಿ ಅಲ್ಲಿಂದ ತೆರಳಿದ್ದರು. ಆದರೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಚೆಕ್ ತರುವುದು ತಡವಾಗಿದಕ್ಕೆ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಶ್ರೀನಿವಾಸಗೌಡ ಅವರಿಗೆ ಚೆಕ್ ಇಲ್ಲದ ಖಾಲಿ ಕವರ್ ಹಸ್ತಾಂತರಿಸಿದ್ದಾರೆ. ಚೆಕ್ ಇಲ್ಲ ಎಂಬುದನ್ನು ಸನ್ನೆ ಮಾಡುವ ಸಚಿವ ಸಿ.ಟಿ. ರವಿ ಅವರು ಮೂಲಕ ಮತ್ತೊಬ್ಬ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಗಡಿಬಿಡಿಯಲ್ಲಿ ಖಾಲಿ ಕವರ್ ಕೊಟ್ಟು ಇಬ್ಬರೂ ಸಚಿವರು ತೆರಳಿದ್ದಾರೆ.

ಅರ್ದಗಂಟೆಯ ಬಳಿಕ ಚೆಕ್ ಕೊಟ್ಟ ಕಾರ್ಮಿಕ ಇಲಾಖೆ ಅಧಿಕಾರಿಗಳು

ಅರ್ದಗಂಟೆಯ ಬಳಿಕ ಚೆಕ್ ಕೊಟ್ಟ ಕಾರ್ಮಿಕ ಇಲಾಖೆ ಅಧಿಕಾರಿಗಳು

ಇಬ್ಬರೂ ಸಚಿವರು ಸಮ್ಮೇಳನ ಸಭಾಂಗಣದಿಂದ ತೆರಳಿದ ಬಳಿಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಅರ್ಧ ಗಂಟೆಯ ನಂತರ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಂದು 3 ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಿದ್ದಾರೆ. ಕಂಬಳ ಓಟಗಾರ ಶ್ರೀನಿವಾಸಗೌಡ ಅವರು ಕಟ್ಟಡ ನಿರ್ಮಾಣ ಕಾರ್ಮಿಕ ಆಗಿರುವುದರಿಂದ ಕಾರ್ಮಿಕ ಇಲಾಖೆಯಿಂದ ಗೌರವ ಧನ ಕೊಡಲು ಸರ್ಕಾರ ತೀರ್ಮಾನಿಸಿತ್ತು. ಸರ್ಕಾರ ಹೇಳಿಕೊಂಡಂತೆ ಚೆಕ್ ವಿತರಣೆ ಮಾಡಿದೆ.

ನಾನು ಕೆಸರಿನ ಓಟಗಾರ, ಟ್ರ್ಯಾಕ್‌ನಲ್ಲಿ ಓಡುವುದಿಲ್ಲ: ಕಂಬಳ ವೀರ ಶ್ರೀನಿವಾಸ್ ಗೌಡನಾನು ಕೆಸರಿನ ಓಟಗಾರ, ಟ್ರ್ಯಾಕ್‌ನಲ್ಲಿ ಓಡುವುದಿಲ್ಲ: ಕಂಬಳ ವೀರ ಶ್ರೀನಿವಾಸ್ ಗೌಡ

ಆದರೆ ಚೆಕ್ ವಿತರಣೆಯ ಕ್ರಮ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಕೆಲಹೊತ್ತು ಕಾಯ್ದು ಚೆಕ್ ಬಂದ ನಂತರ ವಿತರಣೆ ಮಾಡಬೇಕಿತ್ತು, ಅಷ್ಟೊಂದು ತರಾತುರಿಯಲ್ಲಿ ಖಾಲಿ ಕವರ್ ಕೊಟ್ಟು ಸಚಿವರು ಹೋಗಿದ್ದು ಯಾಕೇ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ಕೋಣ ಓಡಿದ್ದರಿಂದ ಅಷ್ಟೊಂದು ಸ್ಪೀಡಾಗಿ ಓಡೋಕೆ ಅನುಕೂಲ ಆಯ್ತು

ಕೋಣ ಓಡಿದ್ದರಿಂದ ಅಷ್ಟೊಂದು ಸ್ಪೀಡಾಗಿ ಓಡೋಕೆ ಅನುಕೂಲ ಆಯ್ತು

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನನ್ನು ಕರೆದು ಸನ್ಮಾನ ಮಾಡಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಕಂಬಳ ಕ್ರೀಡೆ ಗುರುತಿಸಿ ನನ್ನನ್ನು ಸನ್ಮಾನ ಮಾಡಿರುವುದು ನನಗೆ ತುಂಬಾ ಖುಷಿ ಆಗಿದೆ. ಜೊತೆಗೆ ತುಂಬಾ ಹೆಮ್ಮೆಯೂ ಆಗಿದೆ. ಉಸೇನ್ ಬೋಲ್ಟ್ ಅವರ ಹೆಸರು ಕೇಳಿದ್ದೇನೆ. ಆದರೆ, ಯಜಮಾನರು ತುಂಬಾ ಚೆನ್ನಾಗಿ ಕೋಣ ಸಾಕುವುದರಿಂದ ನಾನು ಅಷ್ಟೊಂದು ಸ್ಪೀಡಾಗಿ ಓಡೋಕೆ ಅನುಕೂಲ ಆಯ್ತು. ರಾಷ್ಟ್ರ ಮಟ್ಟದಲ್ಲಿ ಕ್ರೀಡೆ ಸ್ಪರ್ಧಿಸುವ ಬಗ್ಗೆ ತರಬೇತಿ ಪಡೆಯುತ್ತೇನೆ. ತರಬೇತಿ ಪಡೆದ ನಂತರ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡುತ್ತೇನೆ. ಬರುವ ಮಾರ್ಚ್ 10ರವರಗೆ ಕಂಬಳ ಇದೆ. ಕಂಬಳ ಮುಗಿದ ಮೇಲೆ ಉಳಿದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಶ್ರೀನಿವಾಸಗೌಡ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಬ್ಯಾನ್ ಆಗಿದ್ದ ಕಂಬಳ ಕ್ರೀಡೆ

ಸುಪ್ರೀಂ ಕೋರ್ಟ್‌ ಆದೇಶದಂತೆ ಬ್ಯಾನ್ ಆಗಿದ್ದ ಕಂಬಳ ಕ್ರೀಡೆ

ಕರ್ನಾಟಕದ ಕರಾವಳಿ ಭಾಗದಲ್ಲಿ ನಡೆಯುವ ಕಂಬಳ ಕ್ರೀಡೆಯಲ್ಲಿ ಪ್ರಾಣಿ ಹಿಂಸೆ ಇದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ಕಂಬಳ ಕ್ರೀಡೆ ನಿಷೇಧಿಸಿ 2014ರಲ್ಲಿ ತೀರ್ಪು ಕೊಟ್ಟಿತ್ತು. ಕಂಬಳ ಕ್ರೀಡೆಯಲ್ಲಿ ಕೋಣಗಳು ಜೋರಾಗಿ ಓಡುವಂತೆ ಮಾಡಲು ಅವುಗಳನ್ನು ಹೊಡೆಯಲಾಗುತ್ತದೆ. ಆ ಸಂದರ್ಭದಲ್ಲಿ ಕೋಣಗಳಿಗೆ ಗಂಭೀರ ಗಾಯಗಳಾದ ಉದಾಹರಣೆಗಳಿವೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ಪ್ರಾಣಿ ದಯಾ ಸಂಸ್ಥೆ ಪೇಟಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿತ್ತು.

ಟ್ವಿಟ್ಟರಲ್ಲೂ ಕಂಬಳದ ಓಟಗಾರನದ್ದೇ ಸದ್ದು, ಮಹೀಂದ್ರಾ ಮೆಚ್ಚುಗೆಟ್ವಿಟ್ಟರಲ್ಲೂ ಕಂಬಳದ ಓಟಗಾರನದ್ದೇ ಸದ್ದು, ಮಹೀಂದ್ರಾ ಮೆಚ್ಚುಗೆ

ಬಳಿಕ ರಾಜ್ಯ ವಿಧಾನ ಮಂಡಳದಲ್ಲಿ ಕಂಬಳ ಕ್ರೀಡೆ ನಡೆಯಲು ಅನುಕೂಲವಾಗುವಂತೆ, ಪ್ರಾಣಿ ಹಿಂಸೆ ಕರ್ನಾಟಕ ತಿದ್ದುಪಡಿ ತಡೆ ವಿಧೇಯಕ 2017ಕ್ಕೆ ಅಂಗೀಕಾರ ಪಡೆದು ಕೊಳ್ಳಲಾಗಿತ್ತು. ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಧೇಯಕ್ಕೆ ಅಂಕಿತ ಹಾಕುವ ಮೂಲಕ ಕಾನೂನು ಜಾರಿಯಾಗಿತ್ತು. ಬಳಿಕ 2017ರಿಂದ ಕಂಬಳ ಕ್ರೀಡೆ ರಾಜ್ಯದ ಕರಾವಳಿ ಭಾಗದಲ್ಲಿ ಸರಾಗವಾಗಿ ನಡೆದಿದೆ. ಅದೇ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸಗೌಡ ಅವರು ಓಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳ ಮೂಲಕ ಮಾಧ್ಯಮಗಳಲ್ಲಿ ವರದಿಯಾತ್ತು.

ಖಾಲಿ ಲಕೋಟೆ ಅಲ್ಲ! ಅಭಿನಂದನಾ ಪತ್ರ ಇತ್ತು !!

ಖಾಲಿ ಲಕೋಟೆ ಅಲ್ಲ! ಅಭಿನಂದನಾ ಪತ್ರ ಇತ್ತು !!

ಶ್ರೀನಿವಾಸಗೌಡರಿಗೆ ಚೆಕ್ ಬದಲು ಖಾಲಿ ಕವರ್ ಹಸ್ತಾಂತರ ಮಾಡಲಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದ ಕೂಡಲೇ ಕಾರ್ಮಿಕ ಇಲಾಖೆ ಸ್ಪಷ್ಟನೆ ಕೊಟ್ಟಿದೆ.
ಖಾಲಿ ಲಕೋಟೆ ಅಲ್ಲ, ಅಭಿನಂದನಾ ಪತ್ರ ಇತ್ತು ಎಂದು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಬಕಂಬಳದ ಓಟಗಾರ ಶ್ರೀನಿವಾಸ ಗೌಡ ಅವರನ್ನು ಇಂದು ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸನ್ಮಾನಿಸಿದ ಸಂದರ್ಭದಲ್ಲಿ ಕಾರ್ಮಿಕ ಸಚಿವರು ನೀಡಿದ ಲಕೋಟೆಯಲ್ಲಿ ಮೂರು ಲಕ್ಷ ರೂ ನೀಡುವ ಘೋಷಣೆಯನ್ನು ಒಳಗೊಂಡ ಅಭಿನಂದನಾ ಪತ್ರ ಇತ್ತು.

ಅಲ್ಲದೆ, ಕಾರ್ಮಿಕ ಸಚಿವರ ಆಶಯದ ಬೆನ್ನಲ್ಲೇ, ಪತ್ರ ನೀಡಿದ ಒಂದು ತಾಸಿನೊಳಗೇ ಮೂರು ಲಕ್ಷ ರೂ ಚೆಕ್ ವಿತರಿಸಲಾಯಿತು ಎಂಬ ಅಂಶವನ್ನು ಸ್ಪಷ್ಟಪಡಿಸಿದೆ.

English summary
Kambala runner Srinivasa Gowda felicitated giving empty cover without check. The Labor Department officials then issued the check.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X