ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ-ಗೋವಾ ನಡುವೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುತ್ತಾ?

By Vanitha
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್, 29 : ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಹೋರಾಟ ಈಗ ಉಭಯ ರಾಜ್ಯಗಳ ಸಾರಿಗೆ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದ್ದು, ಈ ಹೋರಾಟಕ್ಕೆ ಅಕ್ಕ ಬಳಗ ಸದಸ್ಯರು ಕೈ ಜೋಡಿಸಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಹೊರಡುವ ಬಸ್ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು. ಜೊತೆಗೆ ಜಲ ಸಾರಿಗೆ, ರೈಲು ಮತ್ತು ಸರಕು ಸಾಗಾಣೆಯನ್ನು ನಿಲ್ಲಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ನಾವೇ ಸ್ವತಃ ಬಸ್ ಬಂದ್ ಮಾಡಿ ಅಸಹಕಾರ ಚಳವಳಿ ಆರಂಭಿಸುತ್ತೇವೆ ಎಂದು ಕಳಸಾ-ಬಂಡೂರಿ ಯೋಜನಾ ಹೋರಾಟಗಾರರು ಹಾಗೂ ಅಕ್ಕ ಬಳಗ ಸದಸ್ಯರು ಎಚ್ಚರಿಸಿದ್ದಾರೆ.[ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]

Kalasa Banduri protesters insisted to ban the transport system from Karnataka to Goa

ಅಕ್ಕ ಬಳಗದ ಸದಸ್ಯರು ಭಾಗಿ :

ಕಳಸಾ-ಬಂಡೂರಿ ಹೋರಾಟಗಾರರನ್ನು ಭೇಟಿಯಾದ ನಗರದ ಅಕ್ಕನ ಬಳಗದ ಸದಸ್ಯರು ಈ ಯೋಜನೆಯ ಅನುಷ್ಠಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿಳಂಬ ಧೋರಣೆ ಖಂಡಿಸಿದ್ದು, 'ರೈತರ ಹೋರಾಟ 100 ನೇ ದಿನಕ್ಕೆ ಕಾಲಿರಿಸಿದೆ. ಆದರೂ ಉತ್ತರ ಕರ್ನಾಟಕದ ಏಳಿಗೆಯ ಬಗ್ಗೆ ರಾಜಕಾರಣಿಗಳು ಕಿಂಚಿತ್ತು ಗಮನ ಹರಿಸುತ್ತಿಲ್ಲ' ಎಂದು ದೂರಿದರು.

ನವೆಂಬರ್ 2 ಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಾವುಟ :

ಕಳಸಾ ಯೋಜನೆಗಾಗಿ ನಡೆಯುತ್ತಿರುವ ಹೋರಾಟ ನರಗುಂದ ಪಟ್ಟಣದಲ್ಲಿ 105 ನೇ ದಿನಕ್ಕೆ ಮುಟ್ಟಿದೆ. ಬುಧವಾರ ಪಟ್ಟಣದಲ್ಲಿ ರೈತ ಹೋರಾಟಗಾರರು ರಕ್ತದಲ್ಲಿ ಮನವಿ ಪತ್ರ ಬರೆದರು.[ಪ್ರತ್ಯೇಕ ರಾಜ್ಯ ಕೂಗಿಗೆ ಸೇರಿಕೊಂಡ ಕಳಸಾ ಬಂಡೂರಿ ಹೋರಾಟ]

ಈ ಸಂದರ್ಭದಲ್ಲಿ ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವದಂದು ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತವಾದ ಸಂದೇಶ ರೈತರಿಗೆ ರವಾನಿಸದೆ ಇದ್ದಲ್ಲಿ ನವೆಂಬರ್ 2 ರ ಸೋಮವಾರದಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಾವುಟ ಹಾರಿಸುತ್ತೇವೆ ಎಂದು ರೈತ ಹೋರಾಟಗಾರರು ಎಚ್ಚರಿಸಿದ್ದಾರೆ.

English summary
Kalasa banduri protest is turned to effect on state transport system. Protesters has wrote letter to Water Resourse minister M.B Patil and insisted that ban the transport system to Goa state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X