ನರಗುಂದ ಬಂದ್: ಕಳಸಾ ಬಂಡೂರಿ ಹೋರಾಟಕ್ಕಾಯ್ತು 600 ದಿನ

Posted By: Trupti Hegde
Subscribe to Oneindia Kannada

ಗದಗ, ಮಾರ್ಚ್ 6: ಉತ್ತರ ಕರ್ನಾಟಕ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕಳಸಾ ಬಂಡೂರಿ ಯೋಜನೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಇಂದು ಬಂದ್ ಆಚರಿಸಲಾಗುತ್ತಿದೆ.

ಜಿಲ್ಲೆಯಾದ್ಯಂತ ನಿರಂತರ ನಡೆಯುತ್ತಿರುವ ಹೋರಾಟ ಇದೀಗ 600ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಸಾಂಕೇತಿಕ ಬಂದ್ ಅಚರಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಅಂಬಲಿ ತಿಳಿಸಿದ್ದಾರೆ.[ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್]

Kalasa Banduri protest completed 600 days

ಹೋರಾಟದ ನೇತೃತ್ವ ವಹಿಸಿರುವ ಅವರು ತಾವು ಸರ್ಕಾರದ ಯಾವ ನಡೆಗೂ ಹೆದರುವುದಿಲ್ಲ, ಹೋರಾಟ ಆರಂಭವಾಗಿ 600 ದಿನವಾಗಿದೆ, ಆದ್ದರಿಂದ ಈ ದಿನವನ್ನು ಸಂಕಲ್ಪ ದಿನವನ್ನಾಗಿ ಆಚರಿಸುತ್ತೇವೆ ಎಂದಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಬಂದು ಇಲ್ಲಿನ ಜನರ ಕುಡಿಯವ ನೀರಿನ ಸಮಸ್ಯೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A protest to demanding drinking water project for north karnataka people, Kalasa banduri completed 600 days today. Protesters decided to call Naragunda bandh today.
Please Wait while comments are loading...