ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಗವಾಡ ಚುನಾವಣೆ; ಸಿದ್ದರಾಮಯ್ಯ ತಂತ್ರಕ್ಕೆ ಬಿಜೆಪಿ ಕಂಗಾಲು

|
Google Oneindia Kannada News

ಬೆಂಗಳೂರು, ನವೆಂಬರ್ 11 : ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರುತ್ತಿದೆ. ಮಾಜಿ ಶಾಸಕ, ಬಿಜೆಪಿ ನಾಯಕ ರಾಜು ಕಾಗೆ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಇದರಿಂದಾಗಿ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ರಾಜು ಕಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದರು. ಉಪ ಚುನಾವಣೆ ಟಿಕೆಟ್ ವಿಚಾರದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿ ಒಮ್ಮತದ ತೀರ್ಮಾನವನ್ನು ಮಾಡಿದ್ದಾರೆ.

ಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಹಿನ್ನಡೆ ತಂದ ಮಾಜಿ ಶಾಸಕಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಹಿನ್ನಡೆ ತಂದ ಮಾಜಿ ಶಾಸಕ

ನವೆಂಬರ್ 13ರಂದು ರಾಜು ಕಾಗೆ ಕಾಂಗ್ರೆಸ್ ಸೇರುತ್ತಿದ್ದಾರೆ. ನವೆಂಬರ್ 18ರೊಳಗೆ ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅವರು ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಬಿಜೆಪಿ ನಾಯಕನನ್ನು ಸೆಳೆಯುವ ಸಿದ್ದರಾಮಯ್ಯ ತಂತ್ರ ಫಲ ಕೊಟ್ಟಿದೆ.

ಕಾಗವಾಡ ಚುನಾವಣೆ; ಸಿದ್ದರಾಮಯ್ಯ ತಂತ್ರಕ್ಕೆ ಬಿಜೆಪಿ ಕಂಗಾಲು ಕಾಗವಾಡ ಚುನಾವಣೆ; ಸಿದ್ದರಾಮಯ್ಯ ತಂತ್ರಕ್ಕೆ ಬಿಜೆಪಿ ಕಂಗಾಲು

ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅನರ್ಹಗೊಂಡಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಟಿಕೆಟ್ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸುಪ್ರೀಂಕೋರ್ಟ್ ಆದೇಶದ ಮೇಲೆ ಬಿಜೆಪಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಉಪ ಚುನಾವಣೆ; ಬಿಜೆಪಿ ನಾಯಕರಿಂದ ಡಿ. ಕೆ. ಶಿವಕುಮಾರ್ ಭೇಟಿ!ಉಪ ಚುನಾವಣೆ; ಬಿಜೆಪಿ ನಾಯಕರಿಂದ ಡಿ. ಕೆ. ಶಿವಕುಮಾರ್ ಭೇಟಿ!

ಬಿಜೆಪಿಯಲ್ಲಿ ಮರ್ಯಾದೆ ಇಲ್ಲ

ಬಿಜೆಪಿಯಲ್ಲಿ ಮರ್ಯಾದೆ ಇಲ್ಲ

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜು ಕಾಗೆ, "ಬಿಜೆಪಿಯಲ್ಲಿ ನನಗೆ ಮರ್ಯಾದೆ ಇಲ್ಲ. ಪಕ್ಷ ಉಪ ಚುನಾವಣೆ ಟಿಕೆಟ್ ನೀಡುವುದಿಲ್ಲ ಎಂದು ಖಚಿತವಾದ ಮೇಲೆಯೇ ನಾನು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದೆ. ಯಡಿಯೂರಪ್ಪ ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದರೂ ನಾನು ಗೆದ್ದೆ ಗೆಲ್ಲುವೆ" ಎಂದರು.

ಕಾಂಗ್ರೆಸ್ ಸೇರಲು ತೀರ್ಮಾನಿಸಿದೆ

ಕಾಂಗ್ರೆಸ್ ಸೇರಲು ತೀರ್ಮಾನಿಸಿದೆ

"ಕಾಂಗ್ರೆಸ್ ನಾಯಕರ ಜೊತೆ ನಾನು ಮಾತುಕತೆ ನಡೆಸಿದ್ದೇನೆ. ಕಾಗವಾಡ ಕ್ಷೇತ್ರದಿಂದ ಉಪ ಚುನಾವಣೆ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ. ಶ್ರೀಮಂತ ಪಾಟೀಲ್‌ರನ್ನು ಬಿಜೆಪಿಗೆ ಸೇರಿಸಿಕೊಳ್ಳುವಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ" ಎಂದು ರಾಜು ಕಾಗೆ ಆರೋಪಿಸಿದರು.

ಸಾಕಷ್ಟು ಅವಮಾನವಾಗಿದೆ

ಸಾಕಷ್ಟು ಅವಮಾನವಾಗಿದೆ

"ಉಪ ಚುನಾವಣೆ ಕುರಿತು ಹುಬ್ಬಳ್ಳಿಯಲ್ಲಿ ನಡೆಸಿದ ಸಭೆಯಲ್ಲಿಯೂ ನನಗೆ ನೋವು ಆಗುವ ರೀತಿ ಮುಖ್ಯಮಂತ್ರಿಗಳು ಮಾತನಾಡಿದರು. ಕಾರ್ಯಕರ್ತರು ನನಗೆ ಟಿಕೆಟ್ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯ ಮಾಡಿದರು. ಆದರೂ ಬಿಜೆಪಿ ನಾಯಕರು ಆಗುವುದಿಲ್ಲ ಎಂದರು. ನನಗೆ ಪಕ್ಷದಲ್ಲಿ ಸಾಕಷ್ಟು ಅವಮಾನವಾಗಿದೆ. ಮಂಗಳವಾರ ಬಿಜೆಪಿಗೆ ರಾಜೀನಾಮೆ ನೀಡಿ, ಬುಧವಾರ ಕಾಂಗ್ರೆಸ್ ಸೇರುವೆ" ಎಂದು ರಾಜು ಕಾಗೆ ಹೇಳಿದರು.

ಕಳೆದ ಚುನಾವಣೆ ಸೋಲು

ಕಳೆದ ಚುನಾವಣೆ ಸೋಲು

ರಾಜು ಕಾಗೆ 2018ರ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಲ್ಲಿ 32,942 ಮತಗಳ ಅಂತರದಿಂದ ಶ್ರೀಮಂತ ಪಾಟೀಲ್ ವಿರುದ್ಧ ಸೋಲು ಕಂಡಿದ್ದರು. ಈಗ ಶ್ರೀಮಂತ ಪಾಟೀಲ್ ಬಿಜೆಪಿಗೆ ಬರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಸೇರುತ್ತಿದ್ದಾರೆ.

English summary
Big trouble for BJP in Kagwad assembly seat by election. Former MLA and BJP leader Raju Kage announced that he will join Congress on November 13, 2019. Raju Kage upset with BJP leaders in the issue of by election ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X