ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ಪಾತ್ರ ಫೌಂಡೇಷನ್ ಕಾರ್ಯಕ್ರಮಕ್ಕೆ ಅಣ್ಣಮಲೈ ರಾಯಭಾರಿ

|
Google Oneindia Kannada News

ಬೆಂಗಳೂರು, ಜನವರಿ 16 : ಅಕ್ಷಯ ಪಾತ್ರ ಫೌಂಡೇಷನ್ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈರನ್ನು ರಾಯಭಾರಿಯಾಗಿ ನಿಯೋಜನೆ ಮಾಡಿದೆ. ರಾಯಭಾರಿಯಾಗಿ ನೇಮಕವಾಗಿರುವುದನ್ನು ಅವರು ಸಹ ಖಚಿತಪಡಿಸಿದ್ದಾರೆ.

ಶಾಲೆಗಳ ಪುನಶ್ಚೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರತಿಭಾನ್ವೇಷಣೆ ಮುಂತಾದ ಚಟುವಟಿಕೆಗಳಿಗಾಗಿ 'ನೆಸ್ಟ್' ಎಂಬ ಕಾರ್ಯಕ್ರಮವನ್ನು ಅಕ್ಷಯ ಪಾತ್ರ ಫೌಂಡೇಷನ್ ಜಾರಿಗೆ ತರುತ್ತಿದೆ. ಈ ಕಾರ್ಯಕ್ರಮಕ್ಕೆ ಅಣ್ಣಾಮಲೈ ರಾಯಭಾರಿಯಾಗಿದ್ದಾರೆ.

ಪೊಲೀಸರಿಗೆ ಥಳಿಸುತ್ತಿರುವ ಶಾಕಿಂಗ್ ವಿಡಿಯೋ ನೋಡಿ ಅಣ್ಣಾಮಲೈ ಕಿಡಿಪೊಲೀಸರಿಗೆ ಥಳಿಸುತ್ತಿರುವ ಶಾಕಿಂಗ್ ವಿಡಿಯೋ ನೋಡಿ ಅಣ್ಣಾಮಲೈ ಕಿಡಿ

ಅಕ್ಷಯ ಪಾತ್ರ ಫೌಂಡೇಷನ್ ಉಪಾಧ್ಯಕ್ಷ ಚಂಚಲಪತಿ ದಾಸ್, "ಮಕ್ಕಳು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಈ ಕಾರ್ಯಕ್ರಮಕ್ಕೆ ಯುವ ನಾಯಕರೊಬ್ಬರು ರಾಯಭಾರಿಯಾಗಿರುವುದು ಸಂತಸ ತಂದಿದೆ" ಎಂದರು.

ಐದು ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರಐದು ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ

K Annamalai Ambassador For NEST Programme

ಅಣ್ಣಾಮಲೈ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಈ ಕಾರ್ಯಕ್ರಮದಲ್ಲಿ ರಾಯಭಾರಿಯಾಗಿ ಪಾಲ್ಗೊಳ್ಳುವುದು ನನಗೆ ಗೌರವ ತಂದಿದೆ. ಶಾಲೆಗಳಲ್ಲಿ ಮಕ್ಕಳ ಹಿನ್ನಲೆಯನ್ನು ಪರಿಗಣಿಸದೆ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದೇನೆ" ಎಂದು ಹೇಳಿದ್ದಾರೆ.

ಕಾಫಿನಾಡು-ಕರಾವಳಿಗರ ಮನೆಮನದಲ್ಲಿ ಅಣ್ಣಾಮಲೈಕಾಫಿನಾಡು-ಕರಾವಳಿಗರ ಮನೆಮನದಲ್ಲಿ ಅಣ್ಣಾಮಲೈ

2011ರ ಕರ್ನಾಟಕ ಬ್ಯಾಚ್ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದರು. 2019ರ ಮೇ 28ರಂದು ಅವರು ರಾಜೀನಾಮೆ ನೀಡಿದ್ದರು. ಅಕ್ಟೋಬರ್‌ನಲ್ಲಿ ರಾಜೀನಾಮೆ ಅಂಗೀಕಾರವಾಗಿತ್ತು.

'ಕರ್ನಾಟಕದ ಸಿಂಗಂ' ಎಂದು ಖ್ಯಾತಿ ಪಡೆದಿದ್ದ ಅಣ್ಣಾಮಲೈ ಹಲವಾರು ಯುವಕರಿಗೆ ಸ್ಫೂರ್ತಿ. ತಮಿಳುನಾಡು ಮೂಲದ ಅಣ್ಣಾಮಲೈ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

English summary
Akshaya Patra Foundation appointed former IAS officer K. Annamalai as the Goodwill Ambassador for its National Endeavour for Student Transformation (NEST) programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X