ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ನೂತನ ಲೋಕಾಯುಕ್ತ ಬಿ ಎಸ್ ಪಾಟೀಲ್ ಅಧಿಕಾರ ಸ್ವೀಕಾರ

|
Google Oneindia Kannada News

ಬೆಂಗಳೂರು, ಜೂನ್ 15: ಲೋಕಾಯುಕ್ತ ಸಂಸ್ಥೆಯ ನೂತನ ಸಾರಥಿ ನೇಮಕವಾಗಿದೆ. ಉಪಲೋಕಾಯುಕ್ತರಾಗಿದ್ದ ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲರನ್ನು ನೂತನ ಲೋಕಾಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶವನ್ನು ಮಾಡಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನೂನತ ಲೋಕಾಯುಕ್ತರು ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ.

ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ಅವರು ರಾಜ್ಯದ ನೂತನ ಲೋಕಾಯುಕ್ತರಾಗಿ ಇಂದು (ಜೂನ್ 15) ಪ್ರಮಾಣವಚನ ಸ್ವೀಕರಿಸಿದರು . ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಲೋಕಾಯುಕ್ತರಿಗೆ ಹೂ ಗುಚ್ಛ ನೀಡಿ ಶುಭ ಕೋರಿದರು.

ರಾಜ್ಯದ 9ನೇ ಲೋಕಾಯುಕ್ತ ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲ್ ರವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಂಬಿ ಪಾಟೀಲ್, ವೀರಣ್ಣ ಚರಂತಿಮಠ , ಪಿ ರಾಜೀವ , ಈಶ್ವರ್ ಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.

Justise B.S.Patil Takes Oath as a New Lokayukta of Karnataka

ನೂತನ ಲೋಕಾಯುಕ್ತರ ಶಿಕ್ಷಣ ಮತ್ತು ಹಿನ್ನೆಲೆ

ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲ್‌ರವರು ಮೂಲತಃ ತಾಳಿಕೋಟಿ ತಾಲೂಕಿನ ಪಡೇಕನೂರು ಗ್ರಾಮದವರು. 1956 ಜೂನ್ 1ರಂದು ಜನಿಸಿರುವ ಬಿಎಸ್ ಪಾಟೀಲರು ಪ್ರಾಥಮಿಕ ಶಿಕ್ಷಣವನ್ನು ಪಡೇಕನೂರು ಗ್ರಾಮದಲ್ಲಿಯೇ ಪೂರೈಸಿದರು. ಪ್ರೌಢಶಾಲೆಯನ್ನು ತಾಳಿಕೋಟೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ವಿಜಯಪುರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿ ಕರ್ನಾಟಕ ಯೂನಿವರ್ಸಿಟಿಯಲ್ಲಿ ಲಾ ಪದವಿ ಚಿನ್ನದ ಪದಕದೊಂದಿಗೆ ಪೂರೈಸಿದ್ದಾರೆ. 35 ವರ್ಷ ವಕೀಲರಾಗಿ 13.5 ವರ್ಷ ನ್ಯಾಯಧೀಶರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. 2019 ರಿಂದ ಉಪಲೋಕಾಯುಕ್ತರಾಗಿರುವ ಬಿಎಸ್ ಪಾಟೀಲರು ಇದೀಗ ಲೋಕಾಯುಕ್ತರಾಗಿದ್ದಾರೆ. ಇನ್ನೊಂದು ವಿಶೇಷವೆನೆಂದರೆ ಉಪಲೋಕಾಯುಕ್ತ ಆಗಿದ್ದವರು ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವುದು ಇದೇ ಮೊದಲು ಎನ್ನಬಹುದು.

Justise B.S.Patil Takes Oath as a New Lokayukta of Karnataka

ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತರಾಗಿದ್ದವರು

1 .ನ್ಯಾಯಮೂರ್ತಿ ಎ ಡಿ ಕೋಶಲ್ ಮೋದಲ ಲೋಕಾಯುಕ್ತ - 1986-91

2. ನ್ಯಾಯಮೂರ್ತಿ ರಬೀಂದ್ರನಾಥ್ ಪ್ಯಾನೆ - 1991-96

3. ನ್ಯಾಯಮೂರ್ತಿ ಎಸ್ ಎ ಹಕೀಂ - 1996-2001

4. ನ್ಯಾಯಮೂರ್ತಿ ಎನ್ ವೆಂಕಟಚಲಯ್ಯ -2001- 2006

5. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ -2006-2011

6. ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ - 3.8.2011 ರಿಂದ 20.09.2011

7. ನ್ಯಾಯಮೂರ್ತಿ ಡಾ. ವೈ ಭಾಸ್ಕರ್ ರಾವ್ -2013-2017

8. ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ - 2017-2022

9. ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ - 15.06.2022 ರಿಂದ ಪ್ರಾರಂಭ

Justise B.S.Patil Takes Oath as a New Lokayukta of Karnataka

ನೂತನ ಲೋಕಾಯುಕ್ತರಿಗೆ ಹೊಸ ಚಾಲೆಂಜ್

Recommended Video

ವಿರಾಟ್ ಕೊಹ್ಲಿ ಮನಸ್ಸನ್ನು ಗೆದ್ರೆ ಟೀಂ ಇಂಡಿಯಾ ಹಾಗೂ RCB ತಂಡದಲ್ಲಿ ಸ್ಥಾನ ಸಿಗುತ್ತೆ! | Oneindia Kannada

ನೂತನ ಲೋಕಾಯುಕ್ತ ನ್ಯಾ ಬಿಎಸ್ ಪಾಟೀಲ್‌ರವವರು ಹೊಸದಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಎಸಿಪಿ ಸ್ಥಾಪನೆಯಾದ ಬಳಿಕ ಲೋಕಾಯುಕ್ತ ಹುದ್ದೆ ಹಲ್ಲು ಕಿತ್ತ ಹಾವಿನಂತಾಗಿ ಎಂಬುದು ಜಗತ್ಜಾಹೀರಾಗಿರುವ ಸತ್ಯವಾಗಿದೆ. ಲೋಕಾಯುಕ್ತ ಸಂಸ್ಥೆಗಿರುವ ಕೆಲವು ಅಧಿಕಾರಗಳನ್ನು ಬಳಸಿಕೊಂಡೇ ಉತ್ತಮವಾದ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ನೂತನ ಲೋಕಾಯುಕ್ತರಿಗೆ ಲೋಕಾಯುಕ್ತ ಸಂಸ್ಥೆಯ ಹಲೇಯ ಖದರ್ ಅನ್ನು ಮರಳಿ ತರಬೇಕಿದೆ. ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ದ ಸಂಸ್ಥೆ ಮತ್ತೆ ಮುನ್ನೆಲೆಗೆ ಬರಬೇಕಿದ್ದು ಈ ನಿಟ್ಟಿನಲ್ಲಿ ನೂತ ಲೋಕಾಯುಕ್ತರು ಶ್ರಮಿಬೇಕಿದೆ.

English summary
The government has ordered the appointment of Bhimanagowda Sanganagowda Patil as the new Lokayukta. Justise M.S.Patil take oath in rajabhan as a new lokayuktha of karnataka, now more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X