ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಹೈಕೋರ್ಟ್ ಸಿಜೆ ಡಿ.ಎಚ್.ವಘೇಲಾ ವರ್ಗಾವಣೆ

|
Google Oneindia Kannada News

ಬೆಂಗಳೂರು, ಏ. 14 : ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರನ್ನು ಒರಿಸ್ಸಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿ ವರ್ಗಾವಣೆ ಮಾಡಲಾಗಿದೆ. ಅಧಿಕಾರ ಸ್ವೀಕರಿಸಲು ಅವರಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.

ಸೋಮವಾರ ರಾಷ್ಟ್ರಪತಿ ಭವನದಿಂದ ವರ್ಗಾವಣೆ ಆದೇಶ ಹೊರಬಿದ್ದಿದೆ. ಒರಿಸ್ಸಾ ಹೈಕೋರ್ಟ್ ಸಿಜೆಯಾಗಿದ್ದ ಅಮಿತಾವ್ ರಾಯ್ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಭಡ್ತಿ ಪಡೆದ ನಂತರ ಅಲ್ಲಿನ ಮುಖ್ಯ ನ್ಯಾಯಮೂರ್ತಿಗಳ ಹುದ್ದೆ ತೆರವಾಗಿತ್ತು.

Justice Waghela

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ವಿಕ್ರಂಜಿತ್ ಸೇನ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಡಿಸೆಂಬರ್‌ನಲ್ಲಿ ಭಡ್ತಿ ಪಡೆದ ನಂತರ ತೆರವಾದ ಹುದ್ದೆಗೆ 2013ರಲ್ಲಿ ಡಿ.ಎಚ್.ವಘೇಲಾ ಅವರನ್ನು ನೇಮಿಸಲಾಗಿತ್ತು. [ವಘೇಲಾ ನೂತನ ಮುಖ್ಯ ನ್ಯಾಯಮೂರ್ತಿ]

1954ರ ಸೆ. 11ರಂದು ಜನಿಸಿದ ವಘೇಲಾ ಅವರು 1975ರಲ್ಲಿ ಗುಜರಾತ್ ವಕೀಲರ ಸಂಘದ ಸದಸ್ಯರಾಗಿ ರಾಜಕೋಟ್‌ನಲ್ಲಿ ವೃತ್ತಿ ಪ್ರಾರಂಭಿಸಿದರು. 1999ರಲ್ಲಿ ಗುಜರಾತ್ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು. 2016ರ ಆಗಸ್ಟ್‌ನಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಅಕ್ರಮ ಸಕ್ರಮದ ತೀರ್ಪು : ಬೆಂಗಳೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ರಮವಾಗಿ ನಿರ್ಮಿಸಲು ಕಟ್ಟಡಗಳನ್ನು ಸಕ್ರಮಗೊಳಿಸಲು ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಕ್ರಮ ಸಕ್ರಮ ಅರ್ಜಿಯನ್ನು ಬೇಕಾದರೆ ಸ್ವೀಕರಿಸಿ ಆದರೆ, ಆನಂತರ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಮುಖ್ಯನ್ಯಾಯಮೂರ್ತಿ ಡಿ.ಎಚ್.ವಘೇಲಾ ಮಧ್ಯಂತರ ಆದೇಶ ನೀಡಿದ್ದರು. [ಅಕ್ರಮ- ಸಕ್ರಮ ಪ್ರಕ್ರಿಯೆಗೆ ಅಡ್ಡ ನಿಂತ ಹೈಕೋರ್ಟ್]

English summary
Karnataka High Court chief justice D.H. Waghela has been appointed as the new chief justice of the Orissa high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X