ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಸಲಾತಿ ಕುರಿತು ನೇರ ಅಹವಾಲು ಸ್ವೀಕಾರ

|
Google Oneindia Kannada News

ಬೆಂಗಳೂರು, ಫೆ. 18: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ವರದಿ ನೀಡಲು ಸರ್ಕಾರ ರಚಿಸಿರುವ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಆಯೋಗದ ವತಿಯಿಂದ ಇದೇ ಫೆಬ್ರವರಿ 25 ರಂದು ಬೆಂಗಳೂರಿನಲ್ಲಿ ಬೆಂಗಳೂರು ವಿಭಾಗ ಮಟ್ಟದ ಜಿಲ್ಲೆಗಳ ಅಹವಾಲು ಸ್ವೀಕಾರ ಹಾಗೂ ಸಮಾಲೋಚನೆ ಸಭೆ ನಡೆಯಲಿದೆ.

ಆಯೋಗದ ಅಧ್ಯಕ್ಷ ನ್ಯಾ. ಎಚ್.ಎನ್ ನಾಗಮೋಹನ ದಾಸ್‌ ಅವರೇ ನೇರವಾಗಿ ಅಹವಾಲು ಹಾಗೂ ಅಭಿಪ್ರಾಯಗಳನ್ನು ಆಲಿಸಲಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10.30 ಗಂಟೆಯಿಂದ ಬೆಂಗಳೂರು ವಿಭಾಗದ ಎಲ್ಲಾ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರು ಮತ್ತು ಸಂಘಟನೆಗಳಿಂದ ಅಹವಾಲು ಸ್ವೀಕಾರ ಮತ್ತು ಸಮಾಲೋಚನೆ ಮಾಡಲಾಗುವುದು.

ಎಸ್ಸಿ, ಎಸ್ಟಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಬೇಕು: ನಾಗಮೋಹನ್ ದಾಸ್ಎಸ್ಸಿ, ಎಸ್ಟಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಬೇಕು: ನಾಗಮೋಹನ್ ದಾಸ್

ಬೆಂಗಳೂರು ನಗರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರು, ಸಂಘಟನೆಗಳು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ನೀಡಬಹುದಾಗಿದೆ. ಮೌಖಿಕವಾಗಿ ಅಭಿಪ್ರಾಯಗಳನ್ನು ತಿಳಿಸಬಯಸುವವರು, ಸಭೆ ಆರಂಭವಾಗುವ ಒಂದು ಗಂಟೆ ಮೊದಲು ಆಡಿಟೋರಿಯಂ ಹೊರಗಡೆ ಕೌಂಟರ್‌ಗಳಲ್ಲಿ ಹೆಸರು ನೋಂದಾಯಿಸಿಕೊಂಡು ತಮ್ಮ ಅಭಿಪ್ರಾಯವನ್ನು ಮೌಖಿಕವಾಗಿ ಹೇಳಬಹುದು. ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಅಭಿಪ್ರಾಯ ಹೇಳಲು ಅವಕಾಶವಿರುತ್ತದೆ.

Justice Nagamohan Das Commission will receive a opinion

ಹೆಚ್ಚಿನ ವಿವರಗಳಿಗಾಗಿ ಜಂಟಿ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ನಗರ ಜಿಲ್ಲೆ, 4ನೇ ಮೈನ್‍ರೋಡ್ 16 ನೇ ಅಡ್ಡರಸ್ತೆ ಸಂಪಂಗಿರಾಮನಗರ, ಬೆಂಗಳೂರು - 560 027 ಇವರ ಕಚೇರಿ 08022240449 ಸಿ.ಯು.ಜಿ. ನಂ. 94808 43019.

ಎಸ್‌ಸಿ ಎಸ್‌ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ ಎತ್ತಿಹಿಡಿದ ಸುಪ್ರೀಂಕೋರ್ಟ್ಎಸ್‌ಸಿ ಎಸ್‌ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ ಎತ್ತಿಹಿಡಿದ ಸುಪ್ರೀಂಕೋರ್ಟ್

ಸಹಾಯಕ ನಿರ್ದೇಶಕರ ಕಚೇರಿ ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಕಚೇರಿ 0803846135, ಸಿ.ಯು.ಜಿ. 94808 43051 ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬನಶಂಕರಿ ಕಚೇರಿ 08026711096 ಸಿ.ಯು.ಜಿ/ 94808 43050 ಸಹಾಯಕ ನಿರ್ದೇಶಕರ ಕಚೇರಿ, ಪೂರ್ವ ತಾಲ್ಲೂಕು, ಕೆ.ಆರ್. ಪುರಂ ಕಚೇರಿ 08029535045 ಸಿ.ಯು.ಜಿ 9480843049 ಹಾಗೂ ಸಹಾಯಕ ನಿರ್ದೇಶಕರ ಕಚೇರಿ, ಆನೇಕಲ್ ತಾಲ್ಲೂಕು, ಆನೇಕಲ್ ಕಚೇರಿ 08027859557, ಸಿ.ಯು.ಜಿ. 94808 43052 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

English summary
Justice Nagamohan Das Commission, which is constituted to report on increase in reservation according to the population, will receive a opinion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X