ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಅಧ್ಯಕ್ಷರಾಗಿ ಎಮ್‌ ಅಪ್ಪಣ್ಣ ನೇಮಕ

|
Google Oneindia Kannada News

ಬೆಂಗಳೂರು, ಡಿಸೆಂಬರ್ 1: ಮೈಸೂರಿನ ಎಮ್. ಅಪ್ಪಣ್ಣ ಅವರನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್‌) ನ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಗೊಳಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆದೇಶ ನೀಡಿದ್ದಾರೆ.

ಎಮ್. ಅಪ್ಪಣ್ಣ ಮೈಸೂರು ಅವರು ಸದ್ಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾಗಿದ್ದಾರೆ. ಮೈಸೂರು ಭಾಗದಲ್ಲಿ ನಾಯಕ ಸಮಾಜದ ಪ್ರಭಾವಿ ನಾಯಕರಾಗಿದ್ದಾರೆ. ಸಂಘ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿ ಮೂರು ಬಾರಿ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಈ ಬಾಗದಲ್ಲಿ ಬಿಜೆಪಿ ನೆಲೆಯೂರಲು ಕಾರಣೀಭೂತರಾಗಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಒತ್ತಡಕ್ಕೆ ಮಣಿದ ಸಿಎಂ: ವಿಜಯೇಂದ್ರ ಆಪ್ತಗೆ ಹಿನ್ನಡೆಶ್ರೀನಿವಾಸ್ ಪ್ರಸಾದ್ ಒತ್ತಡಕ್ಕೆ ಮಣಿದ ಸಿಎಂ: ವಿಜಯೇಂದ್ರ ಆಪ್ತಗೆ ಹಿನ್ನಡೆ

ಸುಮಾರು ಐದು ಜಿಲ್ಲೆಗಳಲ್ಲಿ ನಾಯಕ ಸಮಾಜದ ಮುಂಚೂಣಿ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವುದನ್ನು ಗುರುತಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಜಂಗಲ್ ಲಾಡ್ಜ್ಸ್ ಮತ್ತು ರೆಸಾರ್ಟ್ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಪ್ಪಣ್ಣ ಅವರು ''ನನ್ನನ್ನು ಗುರುತಿಸಿ ಈ ಹುದ್ದೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಪಕ್ಷದ ಅಧ್ಯಕ್ಷರಿಗೆ ಹಾಗೂ ಎಲ್ಲಾ ಹಿರಿಯ ನಾಯಕರುಗಳಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ'' ಎಂದಿದ್ದಾರೆ.

Jungle Lodge and Resorts gets new president M Appanna

ಕರ್ನಾಟಕದ ವಿವಿಧ ನಿಗಮ, ಮಂಡಳಿಯ ನೂತನ ಅಧ್ಯಕ್ಷರ ಪಟ್ಟಿ ಕರ್ನಾಟಕದ ವಿವಿಧ ನಿಗಮ, ಮಂಡಳಿಯ ನೂತನ ಅಧ್ಯಕ್ಷರ ಪಟ್ಟಿ

Recommended Video

ರಾಜ್ಯದಲ್ಲಿ ರಂಗೇರಲಿದೆ ಗ್ರಾಮ ಪಂಚಾಯಿತಿ ಅಖಾಡ | Oneindia Kannada

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೀಗರಾದ ಎಸ್ಐ ಚಿಕ್ಕನಗೌಡ್ರು, ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್, ವಿ. ವೈ ವಿಜಯೇಂದ್ರ ಅವರ ಆಪ್ತರಾದ ತಮ್ಮೇಶ್ ಗೌಡ ಅವರಿಗೆ ಮಣೆ ಹಾಕಲಾಗಿದೆ.ನಟಿ ಕಮ್ ರಾಜಕಾರಣಿ ತಾರಾ ಅನುರಾಧ ಅವರಿಗೆ ಅರಣ್ಯ ಅಭಿವೃದ್ಧಿ ನಿಗಮ ಒಲಿದು ಬಂದಿದೆ. ಮಿಕ್ಕಂತೆ 27ಕ್ಕೂ ಅಧಿಕ ಕರ್ನಾಟಕದ ವಿವಿಧ ನಿಗಮ, ಮಂಡಳಿಯ ನೂತನ ಅಧ್ಯಕ್ಷರ

English summary
Jungle Lodge and Resorts gets new president M Appanna.Mysurur region origin Appanna has been appointed as JLR president by CM BS Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X