ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ'

|
Google Oneindia Kannada News

ಬೆಂಗಳೂರು, ಮೇ 04: 'ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ' ಹೀಗೊಂದು ಧ್ಯೇಯವಾಕ್ಯದಡಿಯಲ್ಲಿ ಟ್ವಿಟ್ಟರ್‌ನಲ್ಲಿ ಅಭಿಯಾನವೊಂದು ಗಟ್ಟಿಯಾಗುತ್ತಿದೆ.

ಕೆಲವು ದಿನದ ಹಿಂದೆಯಷ್ಟೆ ತಮಿಳುನಾಡಿನಲ್ಲಿ ಹೀಗೊಂದು ಟ್ವಿಟ್ಟರ್ ಅಭಿಯಾನ ನಡೆದಿತ್ತು, ಯುಕವರು ರಸ್ತೆಗಿಳಿದು ಪ್ರತಿಭಟನೆಯನ್ನೂ ಮಾಡಿದ್ದರು, ಈಗ ಅದು ಕರ್ನಾಟಕಕ್ಕೂ ಕಾಲಿಟ್ಟಿದೆ, ಇಲ್ಲಿಯೂ ಸಹ ಹಕ್ಕೊತ್ತಾಯದ ಪ್ರತಿಭಟನೆಗಳು ನಡೆಯುತ್ತಿವೆ.

Jobs in Karnataka reserve for Kannadigas only: twitter movement

ತಮಮಿಳುನಾಡಿನಲ್ಲಿ ನಡೆದ ರೈಲ್ವೆ ನೇಮಕಾತಿಯಲ್ಲಿ 80% ಉದ್ಯೋಗಗಳು ಉತ್ತರ ಭಾರತದವರ ಪಾಲಾಗಿದ್ದು, ತಮಿಳರ ಕಣ್ಣು ಕೆಂಪಗಾಗಿಸಿತು, ತಮಿಳಿಗರು ಅಲ್ಲಿ ಎದುರಿಸಿದ ಸಮಸ್ಯೆ ಕರ್ನಾಟಕದಲ್ಲಿಯೂ ಇದೆಯಾದ್ದರಿಂದ ಇಲ್ಲಿ ಸಹ ಅಭಿಯಾನ ಪ್ರಾರಂಭವಾಗಿದೆ, ಪ್ರತಿಭಟನೆಯೂ ನಡೆಯುತ್ತಿದೆ.

ಮೋದಿ ಸರ್ಕಾರಕ್ಕೆ ಮತ್ತೆ ಹಿನ್ನಡೆ, ನಿರುದ್ಯೋಗ ಪ್ರಮಾಣ ಏರಿಕೆ ಮೋದಿ ಸರ್ಕಾರಕ್ಕೆ ಮತ್ತೆ ಹಿನ್ನಡೆ, ನಿರುದ್ಯೋಗ ಪ್ರಮಾಣ ಏರಿಕೆ

ಕರ್ನಾಟಕ ರಣಧೀತ ಪಡೆ ಹಾಗೂ ಇನ್ನಿತರ ಕನ್ನಡಪರ ಸಂಘಟನೆಗಳು ಒಕ್ಕೂರಲಿನಿಂದ ಕನ್ನಡಗರಿಗೆ ಖಾಸಗಿ ವಲಯದಲ್ಲೂ ಮೀಸಲಾತಿಯ ಬಗ್ಗೆ ಹೋರಾಟ ಆರಂಭಿಸಿವೆ. ಈ ಹೊರಾಟ ಹೊಸದಲ್ಲದಿದ್ದರೂ ಸಹ ಈ ಬಾರಿ ಇದಕ್ಕೆ ಸಾಮಾಜಿಕ ಜಾಲತಾಣದ ಬಲ ಸಿಕ್ಕಿದೆ.

ಉದ್ಯೋಗಕ್ಕೆ ಕರೆದು ಅವಮಾನ ಮಾಡಿತೇ ಸ್ಪೈಸ್ ಜೆಟ್?: ಪೈಲಟ್‌ಗಳ ಆರೋಪ ಉದ್ಯೋಗಕ್ಕೆ ಕರೆದು ಅವಮಾನ ಮಾಡಿತೇ ಸ್ಪೈಸ್ ಜೆಟ್?: ಪೈಲಟ್‌ಗಳ ಆರೋಪ

ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸುವವರು, ಅಭಿಯಾನದ ಬಗ್ಗೆ ಅಭಿಪ್ರಾಯವನ್ನು ದಾಖಲಿಸಬೇಕೆನ್ನುವವರು #KarnatakaJobsForKannadigas ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ.

English summary
A twitter movement going on about Jobs in Karnataka for Kannadigas only. some Kannada pro organizations taking this movement to streets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X