ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟದಲ್ಲಿ ಪ್ರಚಾರ ಮಾಡಲಿದ್ದಾರೆ ಜಿಗ್ನೇಶ್ ಮೆವಾನಿ

By Manjunatha
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 30: ಊನಾ ಚಳುವಳಿಯಿಂದ ಗುಜರಾತ್ ಬಿಜೆಪಿಯಲ್ಲಿ ನಡುಕ ಹುಟ್ಟಿಸಿದ್ದ ದಲಿತ ಹೋರಾಟಗಾರ ಮುಖಂಡ ಜಿಗ್ನೇಶ್ ಮೆವಾನಿ ಕರ್ನಾಟಕ ಚುನಾವಣೆಯಲ್ಲಿಯೂ ಬಿಜೆಪಿ ವಿರುದ್ಧ ಪ್ರಚಾರ ಮಾಡಲಿದ್ದಾರೆ.

ಚಲೋ ಉಡುಪಿ: ಜಿಗ್ನೇಶ್ ಮೆವಾನಿ ಪ್ರಖರ ಭಾಷಣದ ಹೈಲೆಟ್ಸ್ ಚಲೋ ಉಡುಪಿ: ಜಿಗ್ನೇಶ್ ಮೆವಾನಿ ಪ್ರಖರ ಭಾಷಣದ ಹೈಲೆಟ್ಸ್

ತಮ್ಮ ಪ್ರಖರ ಮಾತು, ವಾಕ್ಚಾತುರ್ಯದಿಂದ ದಲಿತರ ಸಂಘಟನೆ ಮಾಡಿ, ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದ ಜಿಗ್ನೇಶ್ ಮೆವಾನಿ ರಾಜ್ಯದಲ್ಲಿಯೂ ಇದನ್ನೇ ಮುಂದುವರೆಸುವುದಾಗಿ ಹೇಳಿದ್ದಾರೆ.

Jignesh Mewani campaining in Karanataka ellections against BJP

ಚಿಕ್ಕಮಗಳೂರಿನಲ್ಲಿ ಕರ್ನಾಟಕ ಕೋಮು ಸೌಹಾರ್ಧ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಪ್ರಚಾರದಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆಯೊ ಗೊತ್ತಿಲ್ಲ ಆದರೆ ನನ್ನ ಗುರಿ ಬಿಜೆಪಿಯನ್ನು ಸೋಲಿಸುವುದಷ್ಟೆ' ಎಂದಿದ್ದಾರೆ.

ಮೋದಿ ವಿರುದ್ಧ ಜಿಗ್ನೇಶ್ ಮೆವಾನಿ ಅನಾಗರಿಕತೆಯ ಹೇಳಿಕೆ: ವ್ಯಾಪಕ ವಿರೋಧ ಮೋದಿ ವಿರುದ್ಧ ಜಿಗ್ನೇಶ್ ಮೆವಾನಿ ಅನಾಗರಿಕತೆಯ ಹೇಳಿಕೆ: ವ್ಯಾಪಕ ವಿರೋಧ

ದಲಿತ ಪರ ಹೋರಾಟಗಾರರು ಎಲ್ಲೆಲ್ಲಿ ಚುನಾವಣೆಗೆ ನಿಲ್ಲುತ್ತಾರೊ ಅವರಿಗೆ ಹೋರಾಟಗಾರರು ಬೆಂಬಲ ಕೊಡಬೇಕು ಎಂದ ಅವರು, ಹೋರಾಟಗಾರರು ಚುನಾವಣೆಗೆ ನಿಂತ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಕಾಂಗ್ರೆಸ್ ಪಕ್ಷವನ್ನು ಮನವಿ ಮಾಡಿಕೊಳ್ಳಬೇಕು, ನಮ್ಮ ಗುರಿ ಬಿಜೆಪಿ ಯನ್ನು ಆ ಮೂಲಕ ಸಂಘ ಪರಿವಾರವನ್ನು ಸೋಲಿಸುವುದೇ ಆಗಿರಬೇಕು ಎಂದು ಅವರು ಹೇಳಿದರು.

ಕೋಮುವಾದ ಈ ದೇಶದ ದೊಡ್ಡ ಪಿಡುಗು ಎಂದ ಅವರು ಬಿಜೆಪಿ ಅದಕ್ಕಿಂತಲೂ ದೊಡ್ಡ ಪಿಡುಗು ಆದಷ್ಟು ಬೇಗ ಇವೆರಡನ್ನು ದೇಶದಿಂದ ತೊಲಗಿಸಬೇಕು ಎಂದರು.

ದಲಿತರು ಮತ್ತು ಮುಸ್ಲೀಮರು ಒಗ್ಗೂಡಬೇಕು ಎಂದು ಕರೆ ನೀಡಿದ ಜಿಗ್ನೇಶ್ ಮೆವಾನಿ 'ಗುಜರಾತ್ ಚುನಾವಣೆಯಲ್ಲಿ ವದಗಾಂ ಕ್ಷೇತ್ರದಲ್ಲಿ ಶೇ 85 ಮುಸ್ಲಿಮರು ಮತ್ತು ದಲಿತರು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದರು, ಕರ್ನಾಟಕದಲ್ಲಿ ಶೇ 95 ದಲಿತರು ಮುಸ್ಲಿಮರು ಬಿಜೆಪಿ ವಿರುದ್ಧ ಮತ ಚಲಾಯಿಸಲಿ' ಎಂದು ಅವರು ಹೇಳಿದರು.

English summary
Jignesh Mewani, the young Dalit leader from Gujarat who has been elected to the state Assembly, has announced that he will campaign against the BJP in the upcoming Karnataka state assembly polls. ಕರ್ನಾಟದಲ್ಲಿ ಪ್ರಚಾರ ಮಾಡಲಿದ್ದಾರೆ ಜಿಗ್ನೇಶ್ ಮೆವಾನಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X