ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆ ದೇವಾಲಯದಿಂದ ಪುನಃ ಆಭರಣ ನಾಪತ್ತೆ

|
Google Oneindia Kannada News

ಮಂಡ್ಯ, ಫೆ. 12: ಇತಿಹಾಸ ಪ್ರಸಿದ್ಧ ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿಯ ದೇವಾಲಯದಲ್ಲಿ ಪುನಃ ಆಭರಣ ಕಳುವಾಗಿದೆ. ದೇವಾಲಯದ 38 ಆಭರಣಗಳು ಕಳುವಾಗಿದೆ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಮೌಲ್ಯಮಾಪಕರು ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಮೇಲುಕೋಟೆಯಲ್ಲಿ ಆಭರಣಗಳು ಕಾಣೆಯಾಗಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್ ಅವರು ಕೆಲವು ದಿನಗಳ ಹಿಂದೆ ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದರು.[ಮೇಲುಕೋಟೆ ನರಸರಾಜ ಭಟ್ಟರು ಇನ್ನೂ ನಾಪತ್ತೆ!]

Melkote

ದೂರಿನ ಹಿನ್ನೆಲಯಲ್ಲಿ ಟಿ.ಬಿ.ಜಯಚಂದ್ರ ಅವರು ಧಾರ್ಮಿಕದತ್ತಿ ಇಲಾಖೆ ಆಯುಕ್ತರು, ದಾಖಲೆಗಳನ್ನು ಪರಿಶೀಲಿಸಿ ಮೌಲ್ಯಮಾಪನ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚನೆ ನೀಡಿದ್ದರು. ಫೆಬ್ರವರಿ 7ರಂದು ಮೌಲ್ಯಮಾಪಕರು ಸರ್ಕಾರಕ್ಕೆ 25 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. [ಮೇಲುಕೋಟೆ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ]

ಜನವರಿ 19ರಂದು ಮೇಲುಕೋಟೆ ದೇವಾಲಯಕ್ಕೆ ಆಗಮಿಸಿದ್ದ ಮೌಲ್ಯಮಾಪಕರಾದ ವೇದಮೂರ್ತಾಚಾರ್ ಅವರು, ದೇವಾಲಯದ ಆಡಳಿತ ಮಂಡಳಿ, ಅರ್ಚಕರು, ಸ್ಥಳೀಯರನ್ನು ಭೇಟಿ ಮಾಡಿದ್ದಾರೆ. ಆಭರಣಗಳ ಬಗ್ಗೆ ದಾಖಲೆಗಳು ಮತ್ತು ಛಾಯಾಚಿತ್ರಗಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ವರದಿಯಲ್ಲಿ ಏನಿದೆ : ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ವೇದಮೂರ್ತಾಚಾರ್ ಅವರು, 38 ಆಭರಣಗಳ ಪೈಕಿ ಹಲವು ದೇವಾಲಯದಲ್ಲಿ ದಾಸ್ತಾನಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಆಭರಣಗಳನ್ನು ಸರ್ಕಾರದ ವಶಕ್ಕೆ ಪಡೆಯುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಹಿಂದೆಯೂ ಕಳುವಾಗಿತ್ತು : ಹಿಂದೆಯೂ ಮೇಲುಕೋಟೆಯ ದೇವಾಲಯದಲ್ಲಿ ರತ್ನಾಂಗಿ ಆಭರಣ ಕಳುವಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ನರಸರಾಜ ಭಟ್ ಅವರ ವಿರುದ್ಧ ಕಳುವಿನ ಆರೋಪ ಕೇಳಿಬಂದಿತ್ತು.

English summary
38 Jewels missing from Melkote Cheluva Narayana Swamy Temple The Department of Religious and Charitable Endowments submitted report to Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X