ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಯುವಶಕ್ತಿ ಪ್ರದರ್ಶನ: ಟ್ರಾಫಿಕ್ ಎಚ್ಚರ

By Srinath
|
Google Oneindia Kannada News

ಬೆಂಗಳೂರು, ಜ.29- ಲೋಕಸಭಾ ಚುನಾವಣೆ ತಯಾರಿಯಲ್ಲಿ ಜೆಡಿಎಸ್ ಪಕ್ಷವು ಇಂದು ನಗರದ ಅರಮನೆ ಮೈದಾನದಲ್ಲಿ ಬೃಹತ್ ಯುವ ಚೇತನ ಸಮಾವೇಶವನ್ನು ಹಮ್ಮಿಕೊಂಡಿದೆ. ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಯುವ ಸಮಾವೇಶದಲ್ಲಿ ಪಕ್ಷದ ಅನೇಕ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.

ಬೃಹತ್ ಯುವ ಶಕ್ತಿ ಪ್ರದರ್ಶನ:

jds-youth-rally-palace-grounds-traffic-disruption-bangalore-police
ಸಮಾವೇಶ ನಡೆಯುವ ಪ್ಯಾಲೆಸ್ ಗ್ರೌಂಡ್ಸ್ ಗೆ ಪಕ್ಷದ ಹಿರಿಯ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಬೀದರ್, ಗುಲ್ಬರ್ಗ, ರಾಯಚೂರು, ಮೈಸೂರು, ಮಂಡ್ಯ, ರಾಮನಗರ, ಹಾಸನ ಸೇರಿದಂತೆ ನಾನಾ ಜಿಲ್ಲೆಗಳಿಂದ ಸುಮಾರು 2 ಲಕ್ಷ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ಅರಮನೆ ಮೈದಾನಕ್ಕೆ ಆಗಮಿಸಲಿದ್ದಾರೆ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಬುಧವಾರ ಅರಮನೆ ಮೈದಾನದ ಸುತ್ತ ಮುತ್ತ ಟ್ರಾಫಿಕ್ ಜಾಮ್ ಉಂಟಾಗಲಿದ್ದು, ವಾಹನ ಸವಾರರು ಸಹಕರಿಸಬೇಕು ಎಂದು ಮಾಧ್ಯಮಗಳ ಮೂಲಕ ಜನತೆಗೆ ಮನವಿ ಮಾಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಸೇರಿದಂತೆ ಬೆಂಗಳೂರು ಉತ್ತರ ಭಾಗದ ಜನರಿಗೆ ಟ್ರಾಫಿಕ್ ಸಮಸ್ಯೆ ಕಾಡಲಿದ್ದು, ಮುಂಜಾಗ್ರತೆ ವಹಿಸುವಂತೆ ಪೊಲೀಸರು ಕೋರಿದ್ದಾರೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಆ ಮಾರ್ಗಗಳಲ್ಲೇ ವಾಹನ ಸಂಚಾರ ಮಾಡಬೇಕೆಂದು ಪೊಲೀಸರು ಸೂಚಿಸಿದ್ದಾರೆ.

ಬೆಂಗಳೂರು ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ
ದಿನಾಂಕ: 29-01-2014 ರಂದು ಅರಮನೆ ಮೈದಾನದಲ್ಲಿ ಜೆ.ಡಿ.ಎಸ್ ಪಕ್ಷದ ವತಿಯಿಂದ ಯುವ ಚೇತನ ಕಾರ್ಯಕ್ರಮ ಮತ್ತು ಮೋಟಾರ್ ಸೈಕಲ್ ರ್ಯಾಲಿ ಹಾಗೂ ಸಾರ್ವಜನಿಕ ಸಭೆ ವೇಳೆ ಸಂಚಾರ ಒತ್ತಡವಿದ್ದು ಬೆಳಿಗ್ಗೆ 07.00 ಗಂಟೆಯಿಂದ ಸಂಜೆ 7.00 ಗಂಟೆಯ ವರೆಗೆ ಈ ಕೆಳಕಂಡಂತೆ ಸಂಚಾರ ಬದಲಾವಣೆ ಮಾಡಲಾಗಿರುತ್ತದೆ.

ವಾಹನ ಚಾಲಕರು /ಸವಾರರು ಅರಮನೆ ಸುತ್ತ ಮುತ್ತಲ ರಸ್ತೆಗಳಾದ ಪ್ಯಾಲೇಸ್ ರಸ್ತೆ, ಬಳ್ಳಾರಿ ರಸ್ತೆ. ರಮಣ ಮಹರ್ಷಿ ರಸ್ತೆ ಚೌಡಯ್ಯ ರಸ್ತೆ. ಜಯ ಮಹಲ್ ರಸ್ತೆ, ಸರ್ ಸಿವಿ ರಾಮನ್ ರಸ್ತೆ, ಕೆಕೆ ರಸ್ತೆ, ವಸಂತ ನಗರ 1ನೇ ಮುಖ್ಯ ರಸ್ತೆ, ಪ್ಯಾಲೇಸ್ ಕ್ರಾಸ್ ರಸ್ತೆ. ಈ ರಸ್ತೆಗಳನ್ನು ಉಪಯೋಗಿಸದೆ ಬದಲಿ ರಸ್ತೆಗಳನ್ನು ಉಪಯೋಗಿಸಿ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

I. ಬೆಂಗಳೂರು ನಗರ ದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಈ ಕೆಳಕಂಡ ಮಾರ್ಗಗಳಲ್ಲಿ ಹೋಗಬಹುದಾಗಿರುತ್ತದೆ.
1. ಬಸವೇಶ್ವರ ವೃತ್ತ (ಚಾಲುಕ್ಯ ಹೋಟೇಲ್ ವೃತ್ತ)-ಹಳೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್- ಎಡ ತಿರುವು-ವಿಂಡ್ಸರ್ ಮ್ಯಾನರ್ ಜಂಕ್ಷನ್-ಕಾವೇರಿ ಚಿತ್ರ ಮಂದಿರ ಜಂಕ್ಷನ್- ಎಡ ತಿರುವು-ಸದಾಶಿವ ನಗರ ಬಾಷ್ಯಂ ವೃತ್ತ- ಬಲ ತಿರುವು- ಜೀವ ರಾಜ್ ಆಲ್ವ ರಸ್ತೆ- ಸದಾಶಿವ ನಗರ ಪೊಲೀಸ್ ಠಾಣೆ ಜಂಕ್ಷನ್-ಯು ತಿರುವು-ಸರ್ ಸಿ.ವಿ ರಾಮನ್ ರಸ್ತೆ- ಮೇಕ್ರಿ ಸರ್ಕಲ್- ಎಡ ತಿರುವು- ಬಳ್ಳಾರಿ ರಸ್ತೆ(ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ)

2. ಎಂ ಜಿ ರಸ್ತೆ- ಕಾಮರಾಜ ರಸ್ತೆ-ಥಾಮಸ್ ಕೆಫೆ-ಅಸಯ್ಯ ರಸ್ತೆ ಜಂಕ್ಷನ್- ಐಟಿಸಿ ಬ್ರಡ್ಜ್- ಮಾರುತಿ ಸೇವಾನಗರ-ಐಓಸಿ ಬ್ರಿಡ್ಜ್-ಬಾಣಸವಾಡಿ ಮುಖ್ಯ ರಸ್ತೆ-ಎಡ ತಿರುವು-ಬೆಂಗಳೂರು ಹೊರ ವರ್ತುಲ ರಸ್ತೆ-ಹೆಣ್ಣೂರು ರಿಂಗ್ ರೋಡ್ ಜಂಕ್ಷನ್-ನಾಗಾವಾರ ಜಂಕ್ಷನ್-ಬಲ ತಿರುವು-ಥಣಿಸಂದ್ರ ಮುಖ್ಯ ರಸ್ತೆ-ಹೆಗಡೆ ನಗರ-ಕಟ್ಟಿಗೇನ ಹಳ್ಳಿ-ಎಡ ತಿರುವು-ಬಾಗಲೂರು ಕ್ರಾಸ್- ಬಲ ತಿರುವು- (ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ)

3. ಬೆಂಗಳರು ನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೂರ್ವ ಮತ್ತು ಆಗ್ನೇಯ ಕಡೆಗೆ ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ - ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಹೆಬ್ಬಾಳ ಮೇಲ್ ಸೇತುವೆ-ಎಡ ತಿರುವು-ಹೊರ ವರ್ತೂಲ ರಸ್ತೆ- ನಾಗಾವಾರ ಜಂಕ್ಷನ್- ಬಲ ತಿರುವು-ಟ್ಯಾನರಿ ರಸ್ತೆ-ಹೆಣ್ಣೂರು ರಿಂಗ್ ರೋಡ್ ಜಂಕ್ಷನ್- ಕಲ್ಯಾಣ ನಗರ- ರಾಮ ಮೂರ್ತಿ ನಗರ ಕಡೆಗಳಿಂದ- ಕೆ ಆರ್ ಪುರಂ ಕಡೆಗೆ ಹೋಗ ಬಹುದಾಗಿರುತ್ತದೆ.

4. ಬೆಂಗಳರು ನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೂರ್ವ, ಮತ್ತು ದಕ್ಷಿಣ ಕಡೆಗೆ ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ - ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಹೆಬ್ಬಾಳ ಮೇಲ್ ಸೇತುವೆ-ಡೌನ್ ರ್ಯಾಂಪ್-ಬಲ ತಿರುವು-ಕುವೆಂಪು ಸರ್ಕಲ್- ಎಡ ತಿರುವು-ನ್ಯೂ ಬಿಇಎಲ್ ರಸ್ತೆ-ಸದಾಶಿವ ನಗರ ಪೊಲೀಸ್ ಠಾಣೆ ಜಂಕ್ಷನ್-ಬಲ ತಿರುವು- ಬಿಹೆಚ್ ಇಎಲ್ ವೃತ್ತ-ಎಡ ತಿರುವು-ಸರ್ಕಲ್ ಮಾರಮ್ಮ ವೃತ್ತ-ಬಲ ತಿರುವು ಮಾರ್ಗೋಸ ರಸ್ತೆ- ಕೆಸಿಜಿ ಆಸ್ಪತ್ರೆ ಜಂಕ್ಷನ್ -ಎಡ ತಿರುವು-ಗೀತಾಂಜಲಿ ಥಿಯೇಟರ್ ಜಂಕ್ಷನ್- ಬಲ ತಿರುವು- ಲಿಂಕ್ ರಸ್ತೆ-ಬಲ ತಿರುವು- ಸ್ವಸ್ತಿಕ್ ವೃತ್ತ-ಆನಂದ ರಾವ್ ವೃತ್ತ-ಮೆಜಸ್ಟಿಕ್.

II. ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈ ಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ

1. ಮೈಸೂರು ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ಮೈಸೂರು ರಸ್ತೆ- ನಾಯಂಡ ಹಳ್ಳಿ ಜಂಕ್ಷನ್- ಎಡ ತಿರುವು-ಸುಮ್ಮನ ಹಳ್ಳಿ ಜಂಕ್ಷನ್-ಡಾ// ರಾಜ್ ಕುಮಾರ್ ಸಮಾಧಿ-ಬಲ ತಿರುವು-ತುಮಕೂರು ರಸ್ತೆ- ಗೋರಗುಂಟೆ ಪಾಳ್ಯ ಜಂಕ್ಷನ್-ಎಡ ತಿರುವು-ಬಿಇಲ್ ಜಂಕ್ಷನ್-ಹೊರ ವರ್ತೂಲ ರಸ್ತೆ-ಹೆಬ್ಬಾಳ ಮೇಲ್ಸತುವೆ

2. ತುಮಕೂರು ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ತುಮಕೂರು ರಸ್ತೆ-ಎಡ ತಿರುವು- ಗೋರಗುಂಟೆ ಪಾಳ್ಯ ಜಂಕ್ಷನ್-ಎಡ ತಿರುವು-ಬಿಇಲ್ ಜಂಕ್ಷನ್-ಹೊರ ವರ್ತೂಲ ರಸ್ತೆ-ಹೆಬ್ಬಾಳ ಮೇಲ್ಸತುವೆ

3. ಕನಕ ಪುರ ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ಕನಕ ಪುರ ರೋಡ್-ಹೊರ ವರ್ತೂಲ ರಸ್ತೆ ಜಂಕ್ಷನ್-ಎಡ ತಿರುವು-ಕದಿರೇನ ಹಳ್ಳಿ- ಪದ್ಮನಾಭ ನಗರ ಜಂಕ್ಷನ್-ಪಿ ಇ ಎಸ್ ಕಾಲೇಜ್ ಜಂಕ್ಷನ್ ನಾಯಂಡ ಹಳ್ಳಿ ಜಂಕ್ಷನ್- ಎಡ ತಿರುವು-ಸುಮ್ಮನ ಹಳ್ಳಿ ಜಂಕ್ಷನ್-ಡಾ// ರಾಜ್ ಕುಮಾರ್ ಸಮಾಧಿ-ಬಲ ತಿರುವು-ತುಮಕೂರು ರಸ್ತೆ- ಗೋರಗುಂಟೆ ಪಾಳ್ಯ ಜಂಕ್ಷನ್-ಎಡ ತಿರುವು-ಬಿಇಲ್ ಜಂಕ್ಷನ್-ಹೊರ ವರ್ತೂಲ ರಸ್ತೆ-ಹೆಬ್ಬಾಳ ಮೇಲ್ಸತುವೆ

4. ಬನ್ನೇರು ಘಟ್ಟ ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ಬನ್ನೇರು ಘಟ್ಟ ರಸ್ತೆ- ಎಡ ತಿರುವು-ಪುಟ್ಟೇನ ಹಳ್ಳಿ ಅಂಟರ್ ಪಾಸ್-ಕನಕ ಪುರ ರೋಡ್-ಹೊರ ವರ್ತೂಲ ರಸ್ತೆ ಜಂಕ್ಷನ್-ಎಡ ತಿರುವು-ಕದಿರೇನ ಹಳ್ಳಿ- ಪದ್ಮನಾಭ ನಗರ ಜಂಕ್ಷನ್-ಪಿ ಇ ಎಸ್ ಕಾಲೇಜ್ ಜಂಕ್ಷನ್ ನಾಯಂಡ ಹಳ್ಳಿ ಜಂಕ್ಷನ್- ಎಡ ತಿರುವು-ಸುಮ್ಮನ ಹಳ್ಳಿ ಜಂಕ್ಷನ್-ಡಾ// ರಾಜ್ ಕುಮಾರ್ ಸಮಾಧಿ-ಬಲ ತಿರುವು-ತುಮಕೂರು ರಸ್ತೆ- ಗೋರಗುಂಟೆ ಪಾಳ್ಯ ಜಂಕ್ಷನ್-ಎಡ ತಿರುವು-ಬಿಇಲ್ ಜಂಕ್ಷನ್-ಹೊರ ವರ್ತೂಲ ರಸ್ತೆ-ಹೆಬ್ಬಾಳ ಮೇಲ್ಸತುವೆ
ಅಥವಾ
ಬನ್ನೇರು ಘಟ್ಟ ರಸ್ತೆ- ಜಯದೇವಾ ಪ್ಲೈಒವರ್-ಬಲ ತಿರುವು-ಸಿಲ್ಕ್ ಬೋರ್ಡ ಜಂಕ್ಷನ್ ಮಾರತ್ ಹಳ್ಳಿ- ಹೆಣ್ಣೂರು ಜಂಕ್ಷನ್ -ನಾಗಾವಾರ ಜಂಕ್ಷನ್ -ಪ್ಲೈಒವರ್

5. ಹೊಸುರು ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ಹೊಸುರು ರಸ್ತೆ--ಸಿಲ್ಕ್ ಬೋರ್ಡ ಜಂಕ್ಷನ್ ಮಾರತ್ ಹಳ್ಳಿ- ಹೆಣ್ಣೂರು ಜಂಕ್ಷನ್ -ನಾಗಾವಾರ ಜಂಕ್ಷನ್ -ಪ್ಲೈಒವರ್

6. ಹಳೇ ಮದ್ರಾಸು ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ಹಳೇ ಮದ್ರಾಸು ರಸ್ತೆ- ಕೆ ಆರ್ ಪುರಂ ಸೇತುವೆ- ಹೆಣ್ಣೂರು ಜಂಕ್ಷನ್ -ನಾಗಾವಾರ ಜಂಕ್ಷನ್ -ಪ್ಲೈಒವರ್

7. ಬಳ್ಳಾರಿ ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ಬಳ್ಳಾರಿ ರಸ್ತೆ-ದೇವನ ಹಳ್ಳಿ-ಚಿಕ್ಕಜಾಲ - ಹುಣಸಮಾರನ ಹಳ್ಳಿ - ಕೋಗಿಲು ಜಂಕ್ಷನ್-ಕೋಡಿಗೆ ಹಳ್ಳಿ ಗೇಟ್-ಹೆಬ್ಬಾಳ ಪ್ಲೈಒವರ್ -ಮೇಕ್ರಿ ಸರ್ಕಲ್

8. ದೊಡ್ಡಬಳ್ಳಾಪುರ ರಸ್ತೆ ಕಡೆಯಿಂದ- ಅರಮನೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬರುವ ವಾಹನಗಳು ಈಕೆಳಕಂಡ ಮಾರ್ಗಗಳಲ್ಲಿ ಬರ ಬಹುದಾಗಿರುತ್ತದೆ - ದೊಡ್ಡಬಳ್ಳಾಪುರ ರಸ್ತೆ-ಮೇಜರ್ ಉನಿಕೃಷ್ಣನ್ ರಸ್ತೆ ಜಂಕ್ಷನ್-ಯಲಹಂಕ ಪೊಲೀಸ್ ಠಾಣೆ ಜಂಕ್ಷನ್-ಬಲ ತಿರುವು-ಯುಲಹಂಕ ಬೈಪಾಸ್ ಜಂಕ್ಷನ್-ಬಳ್ಳಾರಿ ರಸ್ತೆ- ಕೋಡಿಗೆ ಹಳ್ಳಿ ಗೇಟ್-ಹೆಬ್ಬಾಳ ಪ್ಲೈಒವರ್ -ಮೇಕ್ರಿ ಸರ್ಕಲ್
III. ಭಾರೀ ವಾಹನಗಳ ಮಾರ್ಗಬದಲಾವಣೆ.
1. ಚಿಕ್ಕಬಳ್ಳಾಪುರ ದ ಕಡೆಯಿಂದ ತುಮಕೂರು ರಸ್ತೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ - ಬಳ್ಳಾರಿ ರಸ್ತೆ-ದೊಡ್ಡಬಳ್ಳಾಪುರ ರಸ್ತೆ ಜಂಕ್ಷನ್-ದೇವನ ಹಳ್ಳಿ ಜಂಕ್ಷನ್- ಬಲ ತಿರುವು-ದೊಡ್ಡ ಬಳ್ಳಾಪುರ ರಸ್ತೆ-ದೊಡ್ಡ ಬಳ್ಳಾಪುರ-ದೊಡ್ಡಬೆಳವಂಗಲ-ದಾಬಸ್‍ಪೇಟೆ ತುಮಕೂರು ರಸ್ತೆ

2. ತುಮಕೂರು ರಸ್ತೆ ಯಿಂದ ಬಳ್ಳಾರಿ ರಸ್ತೆ ಹಾಗೂ ಚಿಕ್ಕಬಳ್ಳಾಪುರ ರಸ್ತೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ - ತುಮಕೂರು ರಸ್ತೆ- ದಾಬಸ್‍ಪೇಟೆ -ಎಡ ತಿರುವು- ದೊಡ್ಡಬೆಳವಂಗಲ- ದೊಡ್ಡ ಬಳ್ಳಾಪುರ- ದೇವನ ಹಳ್ಳಿ ಜಂಕ್ಷನ್-ಬಳ್ಳಾರಿ ರಸ್ತೆ

3. ಚಿಕ್ಕಬಳ್ಳಾಪುರ ದ ಕಡೆಯಿಂದ ಹಳೇ ಮದ್ರಾಸು ರಸ್ತೆ ಕಡೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ - ಬಳ್ಳಾರಿ ರಸ್ತೆ-ಎಡ ತಿರುವು-ದೇವನ ಹಳ್ಳಿ-ಬೂದಿಗೆರೆ ಕ್ರಾಸ್- ಎನ್ ಹೆಚ್-207-ಹಳೇ ಮದ್ರಾಸು ರಸ್ತೆ

4. ತುಮಕೂರು ರಸ್ತೆ ಕಡೆಯಿಂದ ಮೈಸುರು ರಸ್ತೆ ಕಡೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ - ತುಮಕೂರು ರಸ್ತೆಯಲ್ಲಿ ಬರುವ ವಾಹನಗಳು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಮಾದಾವರ ಬಳಿ ನೈಸ್ ರಸ್ತೆ ಮುಖಾಂತರ ಮೈಸೂರು ರಸ್ತೆ ಕಡೆಗೆ ಹೋಗ ಬಹುದಾಗಿದೆ.

5. ಹೊಸೂರು ರಸ್ತೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ - ಹೊಸೂರು ರಸ್ತೆಯಲ್ಲಿ ಬರುವ ವಾಹನಗಳು ಎಲೆಕ್ಟ್ರಾನಿಕ್ ಸಿಟಿ ಬಳಿ ನೈಸ್ ರಸ್ತೆಯಲ್ಲಿ ಹೋಗಿ ತುಮಕೂರು ರಸ್ತೆ ಸೇರಬಹುದಾಗಿದೆ.

6. ಕೋಗಿಲು ಕ್ರಾಸ್ ಮತ್ತು ದೊಡ್ಡ ಬಳ್ಳಾಪುರ ರಸ್ತೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ಭಾರಿ ಸರಕು ಸಾಗಾಣಿಕೆ ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಹೋಗಬಹುದಾಗಿರುತ್ತದೆ -ದೊಡ್ಡಬಳ್ಳಾಪುರ ರೋಡ್ ಮೇಜರ್ ಉನಿಕೃಷ್ಣನ್ ರಸ್ತೆ- ಯಲಹಂಕ ನ್ಯಟೌನ್- ವಿದ್ಯಾರಣ್ಯ ಪುರಂ ಮೈನ್ ರೋಡ್ ತುಮಕೂರು ರಸ್ತೆ.

Iಗಿ. ಅರಮನೆ ಮೈದಾನದಲ್ಲಿ ವಾಹನ ನಿಲುಗಡೆ.

1. ಸಮಾರಂಭಕ್ಕೆ ಬರುವ ಎಲ್ಲಾ ವಿ.ವಿ.ಐ.ಪಿ ವಾಹನಗಳು ರಮಣಮಹರ್ಷಿ ರಸ್ತೆಯಲ್ಲಿ ಸಾಗಿ ಕೃಷ್ಣ ವಿಹಾರ್‍ನ 1ನೇ ಗೇಟ್‍ನಲ್ಲಿ ಹಾಗೂ ವಿ.ಐ.ಪಿ ವಾಹನಗಳು ರಮಣಮಹರ್ಷಿ ರಸ್ತೆಯಲ್ಲಿ ಸಾಗಿ ಕೃಷ್ಣ ವಿಹರ್‍ನ 2ನೇ ಗೇಟ್‍ನಲ್ಲಿ ಪ್ರವೇಶಿಸಿ ಕೃಷ್ಣ ವಿಹರ್ ಆವರಣದಲ್ಲಿ ನಿಲುಗಡೆ ಮಾಡಬಹುದಾಗಿದೆ.

2. ಸಾರ್ವಜನಿಕ ಸಭೆಗೆ ಹೆಬ್ಬಾಳ ಮುಖಾಂತರ ಬರುವ ಬಸ್ಸುಗಳು, ಕಾರುಗಳು ಹಾಗೂ ಇತರೆ ವಾಹನಗಳು ಬಳ್ಳಾರಿ ರಸ್ತೆಯಲ್ಲಿ ಬಂದು ಮೇಕ್ರಿ ಸರ್ಕಲ್ ಮುಖಾಂತರ ಜಯ ಮಹಲ್ ರಸ್ತೆ ತಲುಪಿ ಅರಮನೆ ಮೈದಾನದಲ್ಲಿ ಈಕೆಳಕಂಡ ಸ್ಥಳಗಳಲ್ಲಿ ನಿಲುಗಡೆ ಮಾಡಬುದಾಗಿರುತ್ತದೆ.

ಎ) ಸರ್ಕಸ್ ಗ್ರೌಂಡ್ ಅರಮನೆ ಮೈದಾನ.
ಬಿ) ಹಳೇ ಮಾವಿನ ಕಾಯಿ ಮಂಡಿ. ಅರಮನೆ ಮೈದಾನ.

3. ಸಾರ್ವಜನಿಕ ಸಭೆಗೆ ಬರುವ ದ್ವಿಚಕ್ರ ವಾಹನಗಳು ಮೇಕ್ರಿ ವೃತ್ತದಿಂದ ರಮಣಮಹರ್ಷಿ ರಸ್ತೆಯಲ್ಲಿ ಬಂದು ತ್ರಿಪುರ ವಾಸಿನಿ ಗೇಟ್ ಮುಖಾಂತರ ಅರಮನೆ ಮೈದಾನ ಪ್ರವೇಶಿಸಿ ತ್ರಿಪುರ ವಾಸಿನಿ ಆವರಣದಲ್ಲಿ ಕ್ರಮವಾಗಿ ನಿಲುಗಡೆ ಮಾಡಬಹುದಗಿದೆ.

4. ಪೊಲೀಸ್ ವಾಹನಗಳು ಹಾಗೂ ಮೀಡಿಯಾ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಮುಖಾಂತರ ಕೃಷ್ಣ ವಿಹಾರ್ ಆವರಣ ಪ್ರವೇಶಿಸಿ ಜಯಮಹಲ್ ರಸ್ತೆಗೆ ಹೊಂದಿಕೊಂಡಂತೆ ಕೃಷ್ಣ ವಿಹಾರ್ ಮ್ಯದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ.

ವಾಹನಗಳ ನಿಲುಗಡೆ ನಿಷೇದ ಮಾಡಲಾಗಿರುವ ಪ್ರದೇಶಗಳು

1. ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಪೊಲೀಸ್ ಠಾಣೆ ಜಂಕ್ಷನ್ ನಿಂದ ಹೆಚ್ ಕ್ಯೂಟಿಸಿ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆ ಎಲ್ಲಾರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

2. ರಮಣ ಮಹರ್ಷಿ ರಸ್ತೆಯಲ್ಲಿ ಮೇಕ್ರಿ ವೃತ್ತದಿಂದ ಕಾವೇರಿ ಚಿತ್ರ ಮಂದಿರ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆ ಎಲ್ಲಾರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

3. ಚೌಡಯ್ಯ ರಸ್ತೆಯಲ್ಲಿ ರಾಜ ಭವನ ಜಂಕ್ಷನ್ ನಿಂದ ಕಾವೇರಿ ಚಿತ್ರ ಮಂದಿರ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆ ಎಲ್ಲಾರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

4. ಸರ್ ಸಿವಿ ರಾಮನ್ ರಸ್ತೆಯಲ್ಲಿ ಮೇಕ್ರಿ ವೃತ್ತದಿಂದ ಬಿಹೆಚ್‍ಇಎಲ್ ವೃತ್ತದ ವರೆಗೆ ಎಲ್ಲಾರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

5. ಜಯಮಹಲ್ ಮುಖ್ಯ ರಸ್ತೆಯಲ್ಲಿ ಮೇಕ್ರಿ ವೃತ್ತದಿಂದ ಕಂಟೋನ್ ಮೆಂಟ್ ರೈಲ್ವೇ ನಿಲ್ದಾಣ ವರೆಗೆ ರಸ್ತೆಯ ಎರಡು ಕಡೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

6. ನಂದಿ ದುರ್ಗ ರಸ್ತೆಯಲ್ಲಿ ಜೆ ಸಿ ನಗರ ಪೊಲೀಸ್ ಠಾಣೆ ಜಂಕ್ಷನ್ ನಿಂದ ಹಜ್ ಕ್ಯಾಂಪ್ ಜಂಕ್ಷನ್ ವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

7. ಪ್ಯಾಲೇಸ್ ರಸ್ತೆಯಲ್ಲಿ ಬಸವೇಶ್ವರ ವೃತ್ತದಿಂದ ಪ್ಯಾಲೇಸ್ ಮೈನ್ ಗೇಟ್ ವರೆಗೆ ಎಲ್ಲಾರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

8. ಪ್ಯಾಲೇಸ್ ಕ್ರಾಸ್ ರಸ್ತೆಯಲ್ಲಿ ಬಿಡಿಎ ಜಂಕ್ಷನ್ ನಿಂದ ವಸಂತ ನಗರ ರೈಲ್ವೇ ಕೆಳಸೇತುವೆ ವರೆಗೆ ರಸ್ತೆಯ ಎರಡು ಕಡೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

9. ವಸಂತ ನಗರ 1ನೇ ಮುಖ್ಯ ರಸ್ತೆಯಲ್ಲಿ(ಕೊಡವ ಸಮಾಜ ಮುಂಭಾಗದ ರಸ್ತೆ) ವಸಂತ ನಗರ ರೈಲ್ವೆ ಕೆಳಸೇತುವೆ ಜಂಕ್ಷನ್ ನಿಂದ ಉದಯ ಟಿ ವಿ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

English summary
Former Chief Minister and JDS leader HD Kumarswamy has visited the Palace Grounds yesterday to look at the arrengements for the Party's Youth Rally to be held at the place today. He informed that more than 2 lakh supporters will participate in the Rally. As such there will be huge traffic disruption today in bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X