ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರು ಹಾಸನ ಬಿಡಲ್ಲ: ಜೆಡಿಎಸ್ ಗೆ 9 ಸೀಟು ತಪ್ಪಲ್ಲ

|
Google Oneindia Kannada News

Recommended Video

ಲೋಕಸಭೆ ಚುನಾವಣೆ 2019ಕ್ಕೆ ಹಾಸನದಿಂದ ಎಚ್ ಡಿ ದೇವೇಗೌಡ ಸ್ಪರ್ಧೆ ಸಾಧ್ಯತೆ | Oneindia Kannada

ಬೆಂಗಳೂರು, ಅ.4:ಒಂದೆಡೆ ಕಾಂಗ್ರೆಸ್ ನಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದರೆ ಮೈತ್ರಿ ಪಕ್ಷ ಜೆಡಿಎಸ್ ತನ್ನ ಗಟ್ಟಿ ಬೇರುಗಳಿರುವ ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದೆ.

ಜೆಡಿಎಸ್-ಕಾಂಗ್ರೆಸ್ ಸರ್ಕಾರ ಇದೀಗ ಸಂಪೂರ್ಣ ಸ್ಥಿರ ಎಂಬಂತೆ ಕಾಣುತ್ತಿದೆ, ಎರಡೂ ಪಕ್ಷಗಳು ಒಟ್ಟಾಗಿಯೇ ಲೋಕಸಭಾ ಚುನಾವಣೆ ಎದುರಿಸಲಿವೆ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ಕೊಪ್ಪಳ, ಬೀದರ್, ಚಿಕ್ಕಬಳ್ಳಾಪುರ, ಶಿವಮೊಗ್ಗ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇನ್ನೂ ಮೂರು ಕ್ಷೇತ್ರಗಳಿಗೆ ಬೇಡಿಕೆ ಇಡುವ ಸಾಧ್ಯತೆಗಳಿವೆ. ಈ 9 ಕ್ಷೇತ್ರಗಳ ಪೈಕಿ ಆರಕ್ಕೆ ಈಗಾಗಲೇ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಲೋಕಸಭೆ ಚುನಾವಣೆಗೆ ದೇವೇಗೌಡ ಕುಟುಂಬದಿಂದ ಮೂವರ ಸ್ಪರ್ಧೆ?ಲೋಕಸಭೆ ಚುನಾವಣೆಗೆ ದೇವೇಗೌಡ ಕುಟುಂಬದಿಂದ ಮೂವರ ಸ್ಪರ್ಧೆ?

ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಇದೊಂದು ಬಾರಿ ಸ್ಪರ್ಧಿಸಿ ನಂತರ ನಿವೃತ್ತಿ ಜೀವನ ಕಳೆಯುವ ಇಂಗಿತವನ್ನೂ ಕುಟುಂಬದ ಸದಸ್ಯರೆದುರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ವಕ್ಷೇತ್ರ ಹಾಸನದಿಂದ ದೇವೇಗೌಡರು ಕಣಕ್ಕಿಳಿಯಲಿದ್ದು, ಕುಟುಂಬದಲ್ಲಿ ಇನ್ಯಾರೂ ಸ್ಫರ್ಧೆ ಮಾಡುವುದಿಲ್ಲ ಎಂದು ಮೂಲಗಳು ಹೇಳಿವೆ.

JDS to contest from 9 constituencies in parliament election

ಮಂಡ್ಯ ರಾಜಕೀಯದಲ್ಲಿ ಗೆದ್ದವನೇ 'ಗೌಡ', ಪ್ರಜ್ವಲ್ ರೇವಣ್ಣಗೆ ಅಲ್ಲೂ ಕಷ್ಟಕಷ್ಟಮಂಡ್ಯ ರಾಜಕೀಯದಲ್ಲಿ ಗೆದ್ದವನೇ 'ಗೌಡ', ಪ್ರಜ್ವಲ್ ರೇವಣ್ಣಗೆ ಅಲ್ಲೂ ಕಷ್ಟಕಷ್ಟ

ಜೆಡಿಎಸ್ ಇಲ್ಲಿಯವರೆಗೆ ಲೋಕಸಭಾ ಚುನಾವಣಾ ಸಂಬಂಧಿಸಿ ಅಧಿಕೃತವಾಗಿ ಸಭೆ ಕರೆದಿಲ್ಲ, ಪಕ್ಷದ ಅಧ್ಯಕ್ಷರಾಗಿ ಎಚ್ ವಿಶ್ವನಾಥ್ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆದಿವೆ. ಈ ನಡುವೆ ಪದಾಧಿಕಾರಿಗಳ ಆಯ್ಕೆ ಸಭೆ ನಡೆದಿದೆ. ಲೋಕಸಭಾ ಚುನಾವಣೆ ಸಿದ್ಧತೆಗೆ ಜೆಡಿಎಸ್ ಅಧಿಕೃತ ಸಭೆ ಕರೆಯದಿದ್ದರೂ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕೆಲವು ಹೆಸರುಗಳು ಪರಿಶೀಲನೆಯಲ್ಲಿವೆ.

English summary
Including Mysore and Bangalore north, JDS likely to contest from 9 constituencies in upcoming parliament election. However party supremo H.D.Devegowda will contest from his home constituency Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X