ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಕುರಿತು ಕೊನೆಗೂ ಮೌನಮುರಿದ ಜೆಡಿಎಸ್ ವರಿಷ್ಠ ದೇವೇಗೌಡರು!

|
Google Oneindia Kannada News

ಬೆಂಗಳೂರು, ಡಿ. 26: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಕುರಿತು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮೊದಲ ಬಾರಿ ಮೌನ ಮುರಿದಿದ್ದಾರೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಕುರಿತು ಸುಧೀರ್ಘವಾಗಿ ಮಾತನಾಡಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ನೋಡುತ್ತಿದ್ದೇನೆ. ಜೆಡಿಎಸ್ ಉಳಿಯುತ್ತೊ ಇಲ್ಲವೋ ಎಂಬ ಚರ್ಚೆಗಳು ನಡೆದಿವೆ. ಸ್ವಂತ ಮನೆಯಲ್ಲಿ ತೆನೆ ಹೊತ್ತ ಮಹಿಳೆಗೆ ಸಂಕಷ್ಟ ಎಂಬ ಮಾತುಗಳೂ ಕೇಳಿ ಬರುತ್ತಿವೆ ಎಂದು ದೇವೇಗೌಡರು ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಭೂಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಬೆಂಬಲ ಕೊಟ್ಟಿದ್ದರ ಬೆಗ್ಗೆಯೂ ದೇವೇಗೌಡರು ಮಾತನಾಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಭೂಸುಧಾರಣಾ ತಿದ್ದುಪಡಿ ವಿಧೇಯಕ ಬೆಂಬಲಿಸಿದ್ದು ಯಾಕೆ ಎಂಬುದನ್ನೂ ದೇವೇಗೌಡರು ವಿವರಿಸಿದ್ದಾರೆ.

ಬಿಜೆಪಿ-ಜೆಡಿಎಸ್ ವಿಲೀನದ ಚರ್ಚೆ!

ಬಿಜೆಪಿ-ಜೆಡಿಎಸ್ ವಿಲೀನದ ಚರ್ಚೆ!

ಕಳೆದ ಮೂರು ತಿಂಗಳಿಂದ ಜೆಡಿಎಸ್ ಬಗ್ಗೆ ಹಲವಾರು ರೀತಿ ವ್ಯಾಖ್ಯಾನ ಮಾಡಲಾಗುತ್ತಿದೆ. ಅದನ್ನು ಒಂದು ಮನರಂಜನಾ ಕಾರ್ಯಕ್ರಮ ಅಂತಾ ಹೇಳಬಹುದು. ವೈಯಕ್ತಿಕವಾಗಿ ಯಾರ ಬಗ್ಗೆಯೂ ನಾನು ಮಾತನಾಡುವುದಿಲ್ಲ. ರಾಜಕಾರಣಿಗಳು ಏನೇನು ಮಾತನಾಡುತ್ತಾರೊ? ಅದನ್ನ ಕ್ರೂಢೀಕರಿಸಿ ನಿಮ್ಮ ಕರ್ತವ್ಯ ನೀವು ಮಾಡಿದ್ದೀರಿ.

ಬಿಜೆಪಿ ಜೊತೆ ಜೆಡಿಎಸ್ ವಿಲೀನ ಕುರಿತು ಯಡಿಯೂರಪ್ಪ, ಕುಮಾರಸ್ವಾಮಿ ಮಹತ್ವದ ಹೇಳಿಕೆ!ಬಿಜೆಪಿ ಜೊತೆ ಜೆಡಿಎಸ್ ವಿಲೀನ ಕುರಿತು ಯಡಿಯೂರಪ್ಪ, ಕುಮಾರಸ್ವಾಮಿ ಮಹತ್ವದ ಹೇಳಿಕೆ!

ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಅನ್ನೋದು ಮುಖ್ಯಸ್ಥರಿಗೆ ಗೊತ್ತಿರುತ್ತದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ಮಾತಾಡೋದನ್ನು ನೋಡಿದ್ದೇನೆ. ಇದಕ್ಕೆ ಕಾರಣ ಕುಮಾರಸ್ವಾಮಿನಾ, ರೇವಣ್ಣನಾ ಯಾರು ಕಾರಣ? ಎಂದು ದೇವೇಗೌಡರು ಪ್ರಶ್ನೆ ಮಾಡಿದ್ದಾರೆ.

ನನ್ನನ್ನು ಹೊರಗೆ ಹಾಕಿದ್ದರು

ನನ್ನನ್ನು ಹೊರಗೆ ಹಾಕಿದ್ದರು

1989ರಲ್ಲಿ ಎಲ್ಲರೂ ಸೇರಿ ನನ್ನನ್ನು ಹೊರಗೆ ಹಾಕಿದ್ದರು, ಏಕಾಂಕಿಯಾಗಿದ್ದೆ. ಯಾರ ಹೆಸರನ್ನೂ ಹೇಳುವುದಿಲ್ಲ. ಆಮೇಲೆ ಮತ್ತೆ ಎಲ್ಲರೂ ವಾಪಾಸ್ ನನ್ನ ಹತ್ತಿರವೇ ಬಂದರು. ಪಕ್ಷ ಕಟ್ಟಲು ಯಾರಾದರೂ ನಂಗೆ ಹತ್ತು ರೂಪಾಯಿ ಕೊಟ್ಟಿದ್ದಾರಾ? ಈಗ ಕೆಲವರು ಬದುಕಿದ್ದಾರೆ ಅವರಿಗೆ ಹೇಳುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್-ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಪ್ರಾದೇಶಿಕ ಪಕ್ಷವೊಂದು ತನ್ನದೇ ಶಕ್ತಿಯಿಂದ ಆಡಳಿತ ನಡೆಸುವ ಶಕ್ತಿ ಬಂದ ಮೇಲೂ ಯಾಕೆ ಇದು ಈ ತಪ್ಪು? ಇದನ್ನು ನಮ್ಮ ನಾಯಕರೇ ಹೊತ್ತುಕೊಳ್ಳಬೇಕು. ಜನರ ಮೇಲೆ ಆಪಾದನೆ ಮಾಡೋಕೆ ಹೋಗಲ್ಲ. ಆದರೆ ಕುಮಾರಸ್ವಾಮಿ ಅವರ ಸರ್ಕಾರ ಬಿದ್ದು ಹೋಗುತ್ತದೆ ಅಂತ ಸುದ್ದಿ ಕೊಟ್ಟವರು ಯಾರು? ತೆನೆ ಹೊತ್ತ ಮಹಿಳೆ ಬಗ್ಗೆ ಈ ರೀತಿಯೆಲ್ಲಾ ಮಾತಾಡಬಾರದು. ಈ ಪಕ್ಷವನ್ನು ಯಾರೂ ಅಲುಗಾಡಿಸುವುದೂ ಸಾಧ್ಯವಿಲ್ಲ. ಸೋಲು ಗೆಲುವು ಮಾಮೂಲಿ. ನಾನು ಕಾಂಗ್ರೆಸ್ ಬಗ್ಗೆ ಮಾತಾಡಿದರೆ ತುಂಬಾ ಮಾತಾಡುತ್ತೇನೆ. ಕಾಂಗ್ರೆಸ್ ಬಗ್ಗೆ ನಂಗೆ ಗೊತ್ತಿದೆ ಎಂದು ದೇವೇಗೌಡರು ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಮಾತು ಬಂದಿದ್ದು ಎಲ್ಲಿಂದ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದರು.

ಸಭಾಪತಿ ಸ್ಥಾನ

ಸಭಾಪತಿ ಸ್ಥಾನ

ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಕೊಡಬೇಕು ಅಂತ ಆಗಿನ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಹೇಳಿದ್ದೆ. ಅದು ಮಾತನಾಡೋಣ ಬಿಡಿ ಅದು ದೊಡ್ಡ ವಿಚಾರವಲ್ಲ ಎಂದಿದ್ದರು. ಆದರೆ ಆಮೇಲೆ ಏನಾಯ್ತು? ನಮಗೆ ಸಭಾಪತಿ ಸ್ಥಾನ ಕೊಡಲಿಲ್ಲ.

ಸಭಾಪತಿ ಸ್ಥಾನವನ್ನು ಹೊರಟ್ಟಿ ಅವರಿಗೆ ಕೊಡಬೇಕು ಎಂದುಕೊಂಡಿದ್ದೆ. ಸತತವಾಗಿ 7 ಬಾರಿ ವಿಧಾನಪರಿಷತ್‌ಗೆ ಬಸವರಾಜ್ ಹೊರಟ್ಟಿ ಆಯ್ಕೆಯಾಗಿದ್ದಾರೆ. ಆದರೆ ಸಭಾಪತಿ ಸ್ಥಾನ ಕೊಡಲು ಆಗಲಿಲ್ಲ. ವಿಧಾನ ಪರಿಷತ್ ಸಭಾಪತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಿಎಂ ಒಬ್ಬರು, ನನ್ನ ಜಾತ್ಯತೀತ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ಈಗ ಸಭಾಪತಿ ಅವರು ರಾಜೀನಾಮೆ ಕೊಡಲು ಸಿದ್ಧವಾಗಿದ್ದಾರೆ. ಆಗಲೇ ಅವರು ಕಾರು, ಬಂಗಲೆ ವಾಪಸ್ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ರಾಜೀನಾಮೆ ಕೊಡಬೇಡಿ ಅಂತ ಅವರಿಗೆ ಹೇಳಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ದೇವೇಗೌಡರು ತಿರುಗೇಟು ನೀಡಿದ್ದಾರೆ.

Recommended Video

#REWIND 2020: ಈ ವರ್ಷ ಬಳ್ಳಾರಿ ಜನತೆಯನ್ನು ಇನ್ನಿಲ್ಲದಂತೆ ಕಾಡಿದ 'ಕೊರೊನಾ ಸೋಂಕು ಮತ್ತು ಜಿಲ್ಲೆ ವಿಭಜನೆ' ವಿಚಾರ | Oneindia Kannada
ಭೂಸುಧಾರಣಾ ವಿಧೇಯಕ್ಕೆ ಬೆಂಬಲ

ಭೂಸುಧಾರಣಾ ವಿಧೇಯಕ್ಕೆ ಬೆಂಬಲ

ನಾನು ದಾವೋಸ್ ಗೆ ಹೋಗಿ ಬಂದ ಮೇಲೆ ಕೈಗಾರಿಕೆಗೆ ಭೂಮಿ ಕೊಡುವ ವಿಚಾರ ಚರ್ಚೆಗೆ ಬಂತು. ನಮ್ಮ ರಾಜ್ಯಕ್ಕೆ ಬನ್ನಿ ಅಂತ ನಾನು ಕೈಗಾರಿಕೋದ್ಯಮಿಗಳಿಗೆ ಹೇಳಿದ್ದೆ. ಆದರೆ ಈಗಿರುವ ಕಾನೂನಿನ ಪ್ರಕಾರ ಒಂದಿಂಚು ಭೂಮಿಯನ್ನು ಕೈಗಾರಿಕೆಗಳಿಗೆ ಕೊಡಲು ಸಾಧ್ಯವಿಲ್ಲ ಅಂತ ಅಧಿಕಾರಿಗಳು ಅಭಿಪ್ರಾಯ ಕೊಟ್ಟಿದ್ದರು. ಕಾನೂನಿಗೆ ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ನಾವು ತಿದ್ದುಪಡಿ ಕಾಯಿದೆ ಬೆಂಬಲಿಸಿದ್ದೇವೆಂದು ಕರ್ನಾಟಕ ಭೂಸುಧಾರಣಾ ಕಾಯಿದೆಯನ್ನು ಬೆಂಬಲಿಸಿದ್ದನ್ನು ದೇವೇಗೌಡರು ಸಮರ್ಥನೆ ಮಾಡಿಕೊಂಡರು.

English summary
JDS Suprimo, former prime minister HD Deve Gowda breaks silence for the first time and he made significant statement on JDS merger with BJP. Former PM Deve Gowda adressed a press conference at JDS office JP Bhawan. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X