ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೈ' ಹಿಡಿದ ಖೇಣಿ, ದೇವೇಗೌಡರು ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 05 : 'ಕಾಂಗ್ರೆಸ್ ನಾಯಕರು ಸದನದಲ್ಲಿ ಅಶೋಕ್ ಖೇಣಿಯನ್ನು ವಿರೋಧಿಸಿದ್ದರು. ಇಂದು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಜನರು ಇದಕ್ಕೆಲ್ಲ ಉತ್ತರ ಕೊಡಲಿದ್ದಾರೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ದೆಹಲಿಯಲ್ಲಿ ಸೋಮವಾರ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, 'ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಶಾಕ್ ಆಗಿದೆ. ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ' ಎಂದುರು.

ಡಿಬೇಟ್ : ಅಶೋಕ್ ಖೇಣಿ ಕಾಂಗ್ರೆಸ್‌ ಸೇರಿದ್ದು ಸರಿಯೇ?ಡಿಬೇಟ್ : ಅಶೋಕ್ ಖೇಣಿ ಕಾಂಗ್ರೆಸ್‌ ಸೇರಿದ್ದು ಸರಿಯೇ?

'ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲಲು ಏನೆಲ್ಲ ಅಸ್ತ್ರಗಳು ಬೇಕು, ಅದನ್ನೆಲ್ಲಾ ತಯಾರು ಮಾಡಿಕೊಳ್ಳುತ್ತಿದ್ದಾರೆ. ಖೇಣಿ ಸೇರ್ಪಡೆ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ದೇವೇಗೌಡರು ಹೇಳಿದರು.

 JD(S) supremo HD Deve Gowda unhappy with Congress

'ನೈಸ್ ಅಕ್ರಮದ ಸಾಬೀತಾಗಿದೆ. ಈ ಕುರಿತ ಸದನ ಸಮಿತಿ ವರದಿ ನೀಡಿದೆ. ಸಿದ್ದರಾಮಯ್ಯ, ರಮೇಶ್ ಕುಮಾರ್ ಸೇರಿ ಹಲವರು ಖೇಣಿ ಅವರನ್ನು ಸದನದಲ್ಲಿ ವಿರೋಧಿಸಿದ್ದರು. ಈಗ ಅವರೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೇರಿದ ನೈಸ್ ಮುಖ್ಯಸ್ಥ ಅಶೋಕ್ ಖೇಣಿಕಾಂಗ್ರೆಸ್ ಸೇರಿದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ

'ರಾಜ್ಯದ ಜನರು ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಅವರು ಪಕ್ಷಕ್ಕೆ ಸೂಕ್ತ ಸಮಯದಲ್ಲಿ ಉತ್ತರ ಕೊಡಲಿದ್ದಾರೆ. ಈ ಬೆಳವಣಿಗೆ ಬಗ್ಗೆ ನಮ್ಮ ಪಕ್ಷದ ಪ್ರಮುಖ ನಾಯಕರ ಸಭೆಯನ್ನು ಬುಧವಾರ ನಡೆಸುತ್ತೇನೆ' ಎಂದರು.

ಬಿಬಿಎಂಪಿಯ ಮೈತ್ರಿ ಮುರಿಯುವ ಸುಳಿವು ಕೊಟ್ಟ ದೇವೇಗೌಡರು!ಬಿಬಿಎಂಪಿಯ ಮೈತ್ರಿ ಮುರಿಯುವ ಸುಳಿವು ಕೊಟ್ಟ ದೇವೇಗೌಡರು!

English summary
JD(S) supremo H.D.Deve Gowda unhappy with Congress after Bidar South MLA and Managing Director of Nandi Infrastructure Corridor Enterprises (NICE) Ashok Kheny joined party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X