ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವದ ಬೆಳವಣಿಗೆ: ಮತ್ತೆ BJP ಜೊತೆ ಹೊಂದಾಣಿಕೆ ಮಾಡಿಕೊಂಡ JDS!

|
Google Oneindia Kannada News

ಬೆಂಗಳೂರು, ಡಿ. 15: ರಾಜ್ಯ ರಾಜಕೀಯದಲ್ಲಿ ಮತ್ತೆ ಹೊಂದಾಣಿಕೆ ಪರ್ವ ಶುರುವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮತ್ತೆ ಹೊಂದಾಣಿಖೆ ಮಾಡಿಕೊಂಡಿವೆ. ಈ ವಿಚಾರವನ್ನು ಬಿಜೆಪಿ-ಜೆಡಿಎಸ್ ನಾಯಕರು ಅಧಿಕೃತವಾಗಿಯೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ವಿಧಾನಪರಿಷತ್ ಸಭಾಪತಿಗಳ ವಿರುದ್ಧ ಬಿಜೆಪಿ ಸದಸ್ಯರು ನೀಡಿರುವ ಅವಿಶ್ವಾಸ ಗೊತ್ತುವಳಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಸಭಾಪತಿಗಳು ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಂದು ಬಿಜೆಪಿ ಆರೋಪಿಸಿದ್ದರೆ, ನಿಯಮಾವಳಿ ಬಿಟ್ಟು ಕಲಾಪ ನಡೆಸಲು ಆಗುವುದಿಲ್ಲ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಇಂದು (ಡಿ. 15) ಬೆಳಗ್ಗೆ 11 ಆರಂಭವಾಗಲಿರುವ ವಿಧಾನ ಪರಿಷತ್ ಕಲಾಪ ಗಮನ ಕುತೂಹಲ ಮೂಡಿಸಿದೆ. ಜೊತೆಗೆ ಕಲಾಪದಲ್ಲಿ ಗದ್ದಲ, ಗಲಾಟೆಯೂ ಕೂಡ ಜೋರಾಗಿರುವ ಸಾಧ್ಯತೆಗಳಿವೆ.

EXCLUSIVE INTERVIEW: ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ: ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ!EXCLUSIVE INTERVIEW: ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ: ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ!

ಬಿಜೆಪಿ ಸದಸ್ಯರು ತಮ್ಮ ವಿರುದ್ದ ನೀಡಿರುವ ಅವಿಶ್ವಾಸ ಗೊತ್ತುವಳಿಯ ನೊಟೀಸ್ ಕ್ರಮಬದ್ಧವಾಗಿಲ್ಲ ಎಂದು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಹಿಂಬರಹ ನೀಡಿ, ಬಿಜೆಪಿಯ ಮನವಿಯನ್ನು ತಿರಸ್ಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.

ಯಾವ ಆಧಾರದಲ್ಲಿ ತಿರಸ್ಕಾರ?

ಯಾವ ಆಧಾರದಲ್ಲಿ ತಿರಸ್ಕಾರ?

ಬಿಜೆಪಿ ಸದಸ್ಯರ ಸೂಚನೆ ತಿರಸ್ಕರಿಸಲು ಸಭಾಪತಿಗಳು ಲೇಖಕ ಸುಭಾಷ್ ಕಷ್ಯಪ್ ಅವರ 'ಪಾರ್ಲಿಮೆಂಟ್ ಪ್ರೊಶಿಜರ್' ಪುಸ್ತಕದ 2003ನೇ ಆವೃತ್ತಿಯಲ್ಲಿನ 254ನೇ ಪುಟದ ಉಲ್ಲೇಖ ಮಾಡಿದ್ದಾರೆ. ಅದರ ಪ್ರಕಾರ ಸಭಾಪತಿಯನ್ನು ಕೆಳಗಿಳಿಸಲು ನೀಡುವ ಕಾರಣಗಳು ಸ್ಪಷ್ಟ ಮತ್ತು ನಿರ್ಧಿಷ್ಠವಾಗಿರಬೇಕು. ಸದಸ್ಯರು ನೀಡುವ ನಿರ್ಧಿಷ್ಠ ಕಾರಣಗಳ ಮೇಲೆ ಸಭಾಪತಿ ಅಥವಾ ಉಪ ಸಭಾಪತಿ ತನ್ನ ಪದಚ್ಯುತಿ ವಿಷಯದ ಮೇಲೆ ಚರ್ಚಿಸಲು ಪರಿಗಣಿಸಹುದು ಎಂದು ಉಲ್ಲೇಖಿಸಲಾಗಿದೆ.

ಇದಕ್ಕೆೆ ಪೂರಕವಾಗಿ 1983 ರಲ್ಲಿ ಕೆ. ಮಯಾಥೆವರ್ ಎನ್ನುವವರು ಉಪ ಸಭಾಪತಿಯನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿದ್ದರು. ಉಪ ಸಭಾಪತಿಯ ಪದಚ್ಯುತಿಗೆ ಸ್ಪಟ ಕಾರಣ ನೀಡದ ಹಿನ್ನೆೆಲೆಯಲ್ಲಿ ನಿರಾಕರಿಸಲಾಗಿತ್ತು. ಅದೇ ರೀತಿ 1987 ರಲ್ಲಿ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿ ಅವರನ್ನೂ ಪದಚ್ಯುತಗೊಳಿಸುವಂತೆ ನೀಡಿದ್ದ ನೊಟೀಸ್‌ನಲ್ಲಿ ಸ್ಪಷ್ಟ ಕಾರಣ ನೀಡದ ಹಿನ್ನೆೆಲೆಯಲ್ಲಿ ತಿರಸ್ಕೃತಗೊಳಿಸಲಾಗಿತ್ತು ಎನ್ನುವುದನ್ನು ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ತಮ್ಮ ವಿರುದ್ಧ ಬಿಜೆಪಿ ಸದಸ್ಯರು ನೀಡಿರುವ ಅವಿಶ್ವಾಾಸ ನಿರ್ಣಯ ಮಂಡನೆಗೆ ಅವಕಾಶ ನೀಡದಿರಲು ಕಾರಣ ಕೊಟ್ಟಿದ್ದಾರೆ.

ವಿಧಾನ ಪರಿಷತ್ ನಡಾವಳಿ

ವಿಧಾನ ಪರಿಷತ್ ನಡಾವಳಿ

ಸುಭಾಷ್ ಕಷ್ಯಪ್ ಅವರ ಪುಸ್ತಕದಲ್ಲಿ ಉಲ್ಲೇಖವಾದಂತೆ 'ನಿರ್ಧಿಷ್ಠ ನಿರ್ಣಯ' ಅಂಶಗಳನ್ನು ಪರಿಗಣಿಸಿದಾಗ ಪರಿಷತ್‌ನ ನಡಾವಳಿ ನಿಯಮಗಳ ಅಧ್ಯಾಯ 19ರ ಜೊತೆಗೆ ನಿರ್ಣಯದ ಸಾಮಾನ್ಯ ನಿಯಮಾವಳಿ ಇರುವ ಅಧ್ಯಾಯ 16ರನ್ನೂ ಸಹ ಪರಿಗಣಿಸಬೇಕಾಗುತ್ತದೆ. ನಿಯಮ 143 ರ ಅಡಿ ಪ್ರಸ್ತಾಪವಾಗಿರುವಂತೆ ನಿರ್ಣಯದ ವಿಷಯದೊಂದಿಗೆ ನಿರ್ಣಯದ ಸೂಚನೆಯನ್ನೂ ನೀಡಬೇಕಾಗುತ್ತದೆ. ಆದರೆ, ಬಿಜೆಪಿ ಸದಸ್ಯರು ಸಲ್ಲಿಸಿರುವ ಅವಿಶ್ವಾಸ ನಿರ್ಣಯದ ಸೂಚನೆಗಳಲ್ಲಿ ಯಾವುದೇ ನಿರ್ಣಯದ ವಿಷಯ (ಟೆಕ್‌ಟ್ಸ್‌ ಆಫ್ ರೆಜ್ಯುಲೂಷನ್) ಇಲ್ಲ ಎಂದು ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ಬಿಜೆಪಿಯ ಅವಿಶ್ವಾಸ ಗೊತ್ತುವಳಿ ತಿರಸ್ಕರಿಸಿದ್ದಾರೆ.

ಈ ಸದನದಲ್ಲಿ ಅವಕಾಶವಿಲ್ಲ

ಈ ಸದನದಲ್ಲಿ ಅವಕಾಶವಿಲ್ಲ

ಈಗಾಗಲೇ ಬಿಜೆಪಿ ಸದಸ್ಯರು ನೀಡಿರುವ ನೊಟೀಸ್‌ನ್ನು ಕಲಾಪದಲ್ಲಿಯೇ ತಿರಸ್ಕೃರಿಸಿರುವುದರಿಂದ ಮಂಗಳವಾರ ನಡೆಯುವ ಒಂದು ದಿನದ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ವಿಷಯದ ಮೇಲೆ ಪ್ರಸ್ತಾಪಕ್ಕೆೆ ಅವಕಾಶ ನೀಡಿಲ್ಲ. ಸರ್ಕಾರ ಅವಿಶ್ವಾಸ ನಿರ್ಣಯದ ಮೇಲಿನ ವಿಷಯದ ಕುರಿತು ಚರ್ಚಿಸಲು ಅಧಿವೇಶನ ಕರೆಯುವಂತೆ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯ ಮೂಲಕ ಸೂಚನೆ ನೀಡಿದ್ದರೂ, ಮಂಗಳವಾರ ಪ್ರಶ್ನೋತ್ತರ, ಈಗಾಗಲೇ ಪರಿಷತ್ ಕಾರ್ಯಕಲಾಪದಲ್ಲಿ ಸೇರಿಸಲಾಗಿದ್ದ ಕರ್ನಾಟಕ ಜಾನುವಾರು ಹತ್ಯೆೆ ಪ್ರತಿಬಂಧಕ ಮತ್ತು ಸಂರಕ್ಷಣಾ (ಗೋಹತ್ಯೆೆ ನಿಷೇಧ) ವಿಧೇಯಕದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.

ಜೆಡಿಎಸ್ ನಿರ್ಧಾರ

ಜೆಡಿಎಸ್ ನಿರ್ಧಾರ

ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಯ ವಿಷಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿದ್ಲಿ ನಾವು ಅವಿಶ್ವಾಸ ನಿರ್ಣಯದ ಪರವಾಗಿ ನಿಲ್ಲುತ್ತೇವೆ ಎಂದು ಜೆಡಿಎಸ್ ತನ್ನ ನಿಲುವ್ನು ಈಗಾಗಲೇ ಸ್ಪಷ್ಟಪಡಿಸಿದೆ. ಈ ಬಗ್ಗೆೆ ನಮ್ಮ ನಾಯಕರು ಈಗಾಗಲೇ ಸೂಚನೆ ನೀಡಿದ್ದಾರೆ. ಅವಿಶ್ವಾಾಸದ ಸಂದರ್ಭದಲ್ಲಿ ಸಭಾಪತಿಗಳು ಉಪ ಸಭಾಪತಿಗಳನ್ನು ಕೂಡಿಸಿ ಕಲಾಪ ನಡೆಸಲು ಅವಕಾಶ ನೀಡಬೇಕು ಎಂದು ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರ ಅವರು ಒತ್ತಾಯಿಸಿದ್ದಾರೆ.

Recommended Video

ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ವಿಧಿವಶ-ಅಂತಿಮ ದರ್ಶನ ಪಡೆದ ಬಿಎಸ್ ವೈ | Oneindia Kannada
ಸಭಾಪತಿಗಳ ನಿರ್ಧಾರ

ಸಭಾಪತಿಗಳ ನಿರ್ಧಾರ

ಬಿಜೆಪಿ ಸದಸ್ಯರು ನೀಡಿದ್ದ ಅವಿಶ್ವಾಾಸ ಮಂಡನೆಯ ಸೂಚನೆಯಲ್ಲಿ ನಿರ್ಧಿಷ್ಠ ಕಾರಣ ನೀಡದ ಹಿನ್ನೆೆಲೆಯಲ್ಲಿ ಅದನ್ನು ಸದನದಲ್ಲಿಯೇ ಅಧಿಕೃತವಾಗಿ ತಿರಸ್ಕರಿಸಲಾಗಿದೆ. ಅಲ್ಲದೇ, ಈ ಬಗ್ಗೆೆ ನೊಟೀಸ್ ನೀಡಿರುವ ಸದಸ್ಯರಿಗೆ ಹಿಂಬರಹವನ್ನು ನೀಡಲಾಗಿದೆ ಎಂದು ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಹೇಳಿದ್ದಾರೆ. ಒಮ್ಮೆ ತಿರಸ್ಕರಿಸಿದ ವಿಷಯದ ಮೇಲೆ ಚರ್ಚಿಸಲು ಅವಕಾಶವಿಲ್ಲ. ಮಂಗಳವಾರದ ಅಧಿವೇಶನದಲ್ಲಿ ಪ್ರಶ್ನೋತ್ತರ ಮತ್ತು ಗೋಹತ್ಯೆೆ ವಿಧೇಯಕಗಳ ಮೇಲೆ ಕಲಾಪದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ. ಹೀಗಾಗಿ ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಟ್ಟ ಬಳಿಕವೂ ನಂತರವೂ ವಿಧಾನ ಪರಿಷತ್‌ನಲ್ಲಿ ಏನಾಗುತ್ತದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

English summary
In a significant development Legislative council has been recommence today. JDS says it will support BJP in non-confidence motion at Legislative Council, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X