ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಂಚರತ್ನ' ಪ್ರಚಾರಕ್ಕೆ 123 ವಾಹನಗಳನ್ನು ಖರೀದಿಸಿದ ಜೆಡಿಎಸ್

|
Google Oneindia Kannada News

ಬೆಂಗಳೂರು ಮೇ 18: ಜನತಾ ಜಲಧಾರೆ ಬಳಿಕ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ 'ಪಂಚರತ್ನ ಕಾರ್ಯಕ್ರಮ' ಗಳ ಪ್ರಚಾರಕ್ಕೆ ರಾಜ್ಯಾದ್ಯಂತ 123 ಎಲ್‌ಇಡಿ ವಾಹನಗಳು ಸಂಚಾರ ಮಾಡಲಿವೆ.

ಖರೀದಿ ಮಾಡಿರುವ 123 ಎಲ್‌ಇಡಿ ವಾಹನಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಶವಂತಪುರದಲ್ಲಿರುವ ಅರವಿಂದ ಮೋಟಾರ್ಸ್

ಕಂಪನಿಯ ಅಧಿಕಾರಿಗಳು ಇಂದು ಹಸ್ತಾಂತರ ಮಾಡಿದರು.

ಇದೇ ವೇಳೆ ಪಂಚರತ್ನ ಯೋಜನೆಗಳ ಪ್ರಚಾರಕ್ಕೆ ಖರೀದಿಸಿರುವ 123 ಟಾಟಾ ಏಸ್ ವಾಹನಗಳಿಗೆ ಯಶವಂತಪುರದ ಬಳಿ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು.

JDS purchased 123 vehicles to promote the Pancharatna programme

ವಾಹನಗಳಿಗೆ ಎಲ್‌ಇಡಿ ಅಳವಡಿಕೆ ನಂತರ ಸಂಚಾರ ಆರಂಭವಾಗಲಿದ್ದು, 180 ಕ್ಷೇತ್ರಗಳಲ್ಲಿ ಸಂಚರಿಸಲಿರುವ 123 ಎಲ್‌ಇಡಿ ವಾಹನಗಳು ಪಂಚರತ್ನ ಯೋಜನೆಗಳ ಕಿರುಚಿತ್ರಗಳ ಪ್ರದರ್ಶನ ಮಾಡಲಿವೆ.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, 2023 ರ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕ್ರಮಗಳು ಹಾಗೂ ಪಂಚರತ್ನ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ 123 ವಾಹನಗಳನ್ನು ಖರೀದಿ ಮಾಡಿದ್ದೇವೆ ಎಂದು ಹೇಳಿದರು.

JDS purchased 123 vehicles to promote the Pancharatna programme

ಏನಿದು ಪಂಚರತ್ನ:

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸಿದೆ. ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಹಾಗೂ ಮಹಿಳಾ - ಯುವ ಸಬಲೀಕರಣ; ಇವೇ ಪಂಚರತ್ನ ಕಾರ್ಯಕ್ರಮಗಳು. ಎಲ್ ಇಡಿ ವಾಹನಗಳ ಮೂಲಕ ಈ ಐದು ಕಾರ್ಯಕ್ರಮಗಳ ಮಾಹಿತಿಯನ್ನು ಜನತೆಗೆ ಕೊಡಲಾಗುವುದು ಎಂದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

JDS purchased 123 vehicles to promote the Pancharatna programme

ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ:

ಈ ವಾಹನಗಳಿಗೆ ಮುಂದಿನ 40 ದಿನಗಳ ಕಾಲ ಎಲ್‌ಇಡಿ ಸ್ಕ್ರೀನ್ ಅಳವಡಿಸುತ್ತೇವೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರದ ವಾಹನಗಳು ಸಂಚರಿಸಲಿವೆ ಎಂದರು.

ರಾಜ್ಯಾದ್ಯಂತ 180 ಕ್ಷೇತ್ರಗಳಲ್ಲಿ ಜನತಾ ಜಲಧಾರೆ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಕೆಲ ಬಿಜೆಪಿ, ಕಾಂಗ್ರೆಸ್ ನ ನಾಯಕರು ವ್ಯಂಗ್ಯ ಮಾಡುತ್ತಿದ್ದಾರೆ. ಗ್ರಾಫಿಕ್ಸ್ ನಲ್ಲಿ ಜನರನ್ನು ಸೃಷ್ಟಿಸಿದ್ರಾ ಅಂತಾ ಕೇಳಿದ್ದಾರಂತೆ. ಅವರಿಂದ ಪ್ರಮಾಣಪತ್ರ ನಮಗೆ ಬೇಕಿಲ್ಲ ಎಂದು ತಿರುಗೇಟು ನೀಡಿದರು.

English summary
After the Janata Jaladhare , 123 LED vehicles will travel across the state to promote the JDS party's ambitious 'Pancharatna' program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X