ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಾಗಿ ದೇವೇಗೌಡರು ಜನ ಮನ ಗೆಲ್ಲಲಿಲ್ಲ; ಡಿ.ಕೆ ಶಿವಕುಮಾರ್ ಹೇಳಿಕೆಗೆ ಜೆಡಿಎಸ್ ತಿರುಗೇಟು

ಕಾಂಗ್ರೆಸ್ ಚುನಾವಣೆಯಲ್ಲಿ ಮತ ಪಡೆಯಲು ಇಂತಹ ಕೀಳು ಮಟ್ಟದ ತಂತ್ರಗಳನ್ನು ಬಳಸಿದರೆ ಕನ್ನಡಿಗರು ನಂಬುವುದಿಲ್ಲ. ದೇವೇಗೌಡರು, ಹಲವು ನೋವುಗಳನ್ನುಂಡು ವಿಷಕಂಠನಾಗಿ, ಈಗಲೂ ನಾಡು-ನುಡಿಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಟ್ವೀಟ್‌ ಮಾಡಿದೆ.

|
Google Oneindia Kannada News

ಬೆಂಗಳೂರು,ಜನವರಿ 28: ಇಡೀ ದೇಶದಲ್ಲಿ ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಇಂದು ಶೋಚನಿಯ ಸ್ಥಿತಿಗೆ ಏಕೆ ಇಳಿದಿದೆ? ಜನರ ಮನಸ್ಸು ಗೆಲ್ಲಲಿಲ್ಲವೊ?ಅಥವಾ ಜನರು ತಮ್ಮ ಮನಸ್ಸನ್ನು ನಿಮ್ಮಂತಹ ದ್ರೋಹಿಗಳಿಗೆ ಸ್ಥಾನವನ್ನೇ ಕೊಡಲಿಲ್ಲವೊ ಎಂದು ಜೆಡಿಎಸ್ ರಾಜ್ಯ ಘಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೆಂಡಾಮಂಡಲವಾಗಿದೆ.

ಪ್ರಧಾನಿಯಾಗಿ ಹೆಚ್ ಡಿ ದೇವೇಗೌಡರು ಜನ ಮನ ಗೆಲ್ಲಲಿಲ್ಲ ಎಂದು ಡಿ. ಕೆ ಶಿವಕುಮಾರ್ ಹೇಳಿಕೆಗೆ ಟ್ವೀಟ್ ಮೂಲಕ ಜೆಡಿಎಸ್ ರಾಜ್ಯ ಘಟಕ ತಿರುಗೇಟು ನೀಡಿದೆ.

ಶಿವಕುಮಾರ್ ಅವರೆ, ಅಧಿಕಾರದ ಮದದಿಂದಾಗಿ ಬಾಯಿಗೆ ಬಂದಂತೆ ಮಾತನಾಡುವ ಕೆಟ್ಟ ಚಾಳಿ ಬಂದಿರಬೇಕು ನಿಮಗೆ. ದೇವೇಗೌಡರು ಹನ್ನೊಂದು ತಿಂಗಳ ಕಾಲ ಪ್ರಧಾನಿಯಾಗಿ ಏನೆಲ್ಲ ಕೆಲಸ ಮಾಡಿದರು, ಕರ್ನಾಟಕದ ಏಳ್ಗೆಗೆ ಯಾವೆಲ್ಲ ಕೊಡುಗೆ ನೀಡಿದರು ಎಂಬ ಸತ್ಯ ಕನ್ನಡಿಗರಿಗೆ ಗೊತ್ತಿದೆ. ನಿಮ್ಮ ಹಳಹಳಿಕೆಗೆ ಜನ ಮರುಳಾಗುವುದಿಲ್ಲ ಎಂದು ಕಿಡಿಕಾರಿದ್ದರೆ.

JDS Outraged On KPCC President D K Shivakumar

ಈ ರೀತಿಯ ಉಡಾಫೆ ಹೇಳಿಕೆ ನೀಡಿದವರಲ್ಲಿ ನೀವು ಮೊದಲೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಚುನಾವಣೆಯಲ್ಲಿ ಮತ ಪಡೆಯಲು ಇಂತಹ ಕೀಳು ಮಟ್ಟದ ತಂತ್ರಗಳನ್ನು ಬಳಸಿದರೆ ಕನ್ನಡಿಗರು ನಂಬುವುದಿಲ್ಲ. ದೇವೇಗೌಡರು, ಹಲವು ನೋವುಗಳನ್ನುಂಡು ವಿಷಕಂಠನಾಗಿ, ಈಗಲೂ ನಾಡು-ನುಡಿಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಟ್ವೀಟ್‌ ಮಾಡಿದೆ.

JDS Outraged On KPCC President D K Shivakumar

ಪ್ರಧಾನಿ ಸ್ಥಾನದಿಂದ ಅವರನ್ನು ಹೇಗೆ ಇಳಿಸಲಾಯಿತು ಎಂಬುದು ಜಗಜ್ಜಾಹಿರಾಗಿರುವ ಸತ್ಯ. ಆ ಬಗ್ಗೆ ಮತ್ತೆ ಈಗ ಭ್ರಮಾತ್ಮಕ ಸುಳ್ಳುಗಳನ್ನು ಹೇಳಿದರೆ ಅದು ನಿಮಗೇ ತಿರುಗುಬಾಣವಾಗಲಿದೆ. ಜನರು ನಿಮ್ಮನ್ನು ಉದಾಸೀನವಾಗಿ ಪರಿಗಣಿಸುವ ಮುನ್ನ, ನಡೆ-ನುಡಿ ಬದಲಿಸಿಕೊಳ್ಳಿ. ಇಲ್ಲವಾದರೆ ಜನರು ನಿಮ್ಮನ್ನು ತಿರಸ್ಕರಿಸುತ್ತಾರಷ್ಟ ಎಂದು ಜೆಡಿಎಸ್ ಹೇಳಿದೆ.

English summary
karnataka assembly election 2023; congress A low-level strategy to get votes in elections Says JDS twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X