ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆಗಳು ಅವನತಿಯ ಅಂಚಿಗೆ ಬಂದಿರುವುದು ಶೋಚನಿಯ: ಜೆಡಿಎಸ್ ಕಿಡಿ

ಸರ್ಕಾರದ ನಿರ್ಲಕ್ಷ್ಯದಿಂದ ಕನಿಷ್ಠ ಸೌಕರ್ಯಗಳಿಲ್ಲದೆ ಸೊರಗಿರುವ ಶಾಲೆಗಳು ಅವನತಿಯ ಅಂಚಿಗೆ ಬಂದಿರುವುದು ಶೋಚನಿಯ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

|
Google Oneindia Kannada News

ಬೆಂಗಳೂರು, ಜನವರಿ 27: ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಅಗತ್ಯವಾಗಿ ಬೇಕಿರುವ ಸೀಮೆಸುಣ್ಣ (ಚಾಕ್ ಪೀಸ್) ಖರೀದಿಸಲು ಅನುದಾನವಿಲ್ಲದ ಸ್ಥಿತಿ ಎದುರಾಗಿದೆ. ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ? ಎಂದು ಜೆಡಿಎಸ್ ರಾಜ್ಯ ಘಟಕ ಪ್ರಶ್ನಿಸಿದೆ.

ಈ ಕುರಿತು ಜೆಡಿಎಸ್ ರಾಜ್ಯ ಘಟನ ಟ್ವೀಟ್ ಮಾಡಿದ್ದು, ಬಡವರ ಮನೆಯ ಮಕ್ಕಳು ಕಲಿಯುವ ಶಾಲೆಗಳ ಬಗ್ಗೆ ಈ ಪರಿ ತಾತ್ಸಾರವೆ? ಎಂದು ಬಿಜೆಪಿ ಸರ್ಕಾರವನ್ನ ಪ್ರಶ್ನಿಸಿದೆ. ಶಾಲೆಗಳ ನಿರ್ವಹಣೆಗೆ ಅಗತ್ಯ ಬೇಕಾದ ಅನುದಾನಕ್ಕೂ ಕೊಕ್ಕೆ ಹಾಕಿ, ಶಾಲಾ ಆಡಳಿತ ಸಿಬ್ಬಂದಿಯನ್ನು ಬೇಡುವ ಪರಿಸ್ಥಿತಿಗೆ ನೂಕಿರುವ ರಾಜ್ಯ ಬಿಜೆಪಿಗೆ ಎಷ್ಟು ಉಗಿದರೂ ಕಡಿಮೆ. 2022ರ ಮೇ ತಿಂಗಳಿನಿಂದ ಸಮರ್ಪಕ ಅನುದಾನ ಕೊಡದೆ, ಸರ್ಕಾರಿ ಶಾಲೆಗಳ ಕತ್ತು ಹಿಸುಕುತ್ತಿರುವ ಸರ್ಕಾರದ ಕ್ರೂರ ನಡೆ ನಿಜಕ್ಕೂ ಆಕ್ರೋಶ ತರಿಸುವಂತದ್ದು ಎಂದು ಟ್ವೀಟ್ ಮಾಡಿದೆ.

ಸರ್ಕಾರದ ನಿರ್ಲಕ್ಷ್ಯದಿಂದ ಕನಿಷ್ಠ ಸೌಕರ್ಯಗಳಿಲ್ಲದೆ ಸೊರಗಿರುವ ಶಾಲೆಗಳು ಅವನತಿಯ ಅಂಚಿಗೆ ಬಂದಿರುವುದು ಶೋಚನಿಯ. ಸರ್ಕಾರಿ ಶಾಲೆಗಳು ಮುಚ್ಚಿ, ಖಾಸಗಿಯವರಿಗೆ ಅನುಕೂಲ‌ ಮಾಡಿಕೊಡಲು ಸರ್ಕಾರವೇ ಈ ಹುನ್ನಾರ ಹೆಣಿದಿದೆಯೆ? ಒಟ್ಟಿನಲ್ಲಿ ಬಡವರ ಮನೆಯ ಮಕ್ಕಳಿಗೆ ಶಿಕ್ಷಣದಿಂದ ವಂಚಿಸುವ ವಿಕೃತ ನಡೆ ಇದಾಗಿದೆ.

JDS Outraged On CM Basavaraj Bommai and BC Nagesh

ಕಾಸಿಗೆ ತಕ್ಕ ಹಾಗೆ ಕಜ್ಜಾಯ ಎಂಬಂತಾಗಿದೆ ಶಿಕ್ಷಣ ವ್ಯವಸ್ಥೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಡವರು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗದೆ, ಒಳ್ಳೆಯ ಉದ್ಯೋಗ ಪಡೆಯಲು ಸೋಲುತ್ತಿದ್ದಾರೆ. ಜನರನ್ನು ಪರಾವಲಂಬಿಗಳನ್ನಾಗಿ ಮಾಡುವ ದುರಾಲೋಚನೆ ಸರ್ಕಾರಕ್ಕೆ ಇದೆಯೇ ಎಂಬ ದಟ್ಟ ಅನುಮಾನ ಮೂಡುತ್ತಿದೆ.

JDS Outraged On CM Basavaraj Bommai and BC Nagesh

ಪಂಚರತ್ನ ಯೋಜನೆಯಡಿ ಅತ್ಯುನ್ನತ ಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವುದು ನಮ್ಮ ಪಕ್ಷದ ಆಶಯ. ಉಳ್ಳವರಿಗೆ ನೆರವು ನೀಡುವ ಹಲವು ಖಾಸಗಿ ಸಂಸ್ಥೆಗಳಿವೆ. ಆದರೆ, ಗ್ರಾಮೀಣ, ಅರೆ ಗ್ರಾಮೀಣ ಭಾಗದ ಮತ್ತು ಬಡವರ ಮಕ್ಕಳನ್ನು ಎಲ್ಲ ರೀತಿಯಲ್ಲೂ ಸದೃಢವಾಗಿಸುವ ಉದ್ದೇಶ ನಮ್ಮದು. ಅದಕ್ಕೆ ಬೇಕಾದ ಬದ್ಧತೆ, ಇಚ್ಛಾಶಕ್ತಿ ನಮ್ಮಲ್ಲಿ ಇದೆ ಎಂದು ಟ್ವೀಟ್‌ ಮಾಡಿದೆ.

English summary
Government schools are on the verge of collapse due to government neglect Says JDS twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X