ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಆಯ್ಕೆ!

|
Google Oneindia Kannada News

ಬೆಂಗಳೂರು, ಫೆ. 09: ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿರುವ ಹೊರಟ್ಟಿ ಅವರು ಎರಡನೇ ಬಾರಿ ಸಭಾಪತಿ ಆಗಿದ್ದಾರೆ. ಕಾಂಗ್ರೆಸ್ ಸದಸ್ಯರ ಗದ್ದಲದ ಮಧ್ಯೆ ಬಸವರಾಜ ಹೊರಟ್ಟಿ ಅವರ ಆಯ್ಕೆಯನ್ನು ಉಪ ಸಭಾಪತಿ ಪ್ರಾಣೇಶ್ ಅವರು ಘೋಷಣೆ ಮಾಡಿದರು. ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆ ಚುನಾವಣೆ ಪ್ರಕ್ರಿಯೆ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸೂಕ್ತ ಸಂಖ್ಯಾಬಲವಿರಲಿಲ್ಲ ಹೀಗಾಗಿ ಮತದಾನ ನಡೆಯದೇ ಚುನಾವಣೆ ಪೂರ್ಣಗೊಂಡಿತು. ಬಿಜೆಪಿ ಬೆಂಬಲದೊಂದಿಗೆ ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರು ನೂತನ ಸಭಾಪತಿಗಳ ಹೆಸರು ಘೋಷಣೆ ಮಾಡುತ್ತಿದ್ದಂತೆಯೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸಿದರು.

"ವಿಧಾನ ಪರಿಷತ್ ಸಭಾಪತಿ ನಾನೇ ಆಗಬಹುದು''

ನಡೆಯದ ಚುನಾವಣೆ

ನಡೆಯದ ಚುನಾವಣೆ

ವಿಧಾನ ಪರಿಷತ್ ಸಭಾಪತಿ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸದಸ್ಯರು ಭಾಗವಹಿಸಲಿಲ್ಲ. ಸದನದಲ್ಲಿ ಗದ್ದಲದ ವಾತಾವರಣ ಇದ್ದುದರಿಂದ ಚುನಾವಣೆಯೂ ನಡೆಯಲಿಲ್ಲ. ಕಾಂಗ್ರೆಸ್ ಬಳಿ ಸೂಕ್ತ ಸಂಖ್ಯಾಬಲ ಇರಲಿಲ್ಲ. ವಿಧಾನ ಪರಿಷತ್ ಸದಸ್ಯ ಕೆ.ವಿ. ನಾರಾಯಣಸ್ವಾಮಿ ಅವರು ಬಸವರಾಜ್ ಹೊರಟ್ಟಿ ಹೆಸರು ಸೂಚಿಸಿದರು. ಬಳಿಕ ಕೆ.ವಿ. ಶ್ರೀಕಂಠೇಗೌಡ ಅವರು ಪ್ರಸ್ತಾವನೆ ಅನುಮೋದಿಸಿದರು.

ವಿಧಾನ ಪರಿಷತ್ ಸಂಖ್ಯಾಬಲ

ವಿಧಾನ ಪರಿಷತ್ ಸಂಖ್ಯಾಬಲ

ಕರ್ನಾಟಕ ವಿಧಾನ ಪರಿಷತ್ ಒಟ್ಟು 75 ಸದಸ್ಯರ ಬಲ ಹೊಂದಿದೆ. ಸಭಾಪತಿ ಅಥವಾ ಉಪ ಸಭಾಪತಿ ಸ್ಥಾನಕ್ಕೆ ಕನಿಷ್ಠ 38 ಸದಸ್ಯರ ಬೆಂಬಲ ಅಗತ್ಯ. ಆದರೆ ವಿಧಾನ ಪರಿಷತ್‌ನಲ್ಲಿ ಯಾವುದೇ ಪಕ್ಷಕ್ಕೆ ಬಹುಮತವಿಲ್ಲ. ಹೀಗಾಗಿ ಸಭಾಪತಿ ಅಥವಾ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಜೆಡಿಎಸ್ ಬೆಂಬಲ ಪಡೆಯುವುದು ಅತ್ಯಗತ್ಯವಾಗಿತ್ತು.


ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿ ಉಪ ಸಭಾಪತಿ ಸ್ಥಾನ ಒಡೆದುಕೊಂಡಿದ್ದು, ಸಭಾಪತಿ ಸ್ಥಾನವನ್ನು ಬಿಟ್ಟುಕೊಟ್ಟಿದೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿ 31, ಕಾಂಗ್ರೆಸ್ 28, ಜೆಡಿಎಸ್ 13 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಒಂದು ಸ್ಥಾನ ಖಾಲಿ ಇದೆ.

ಸೋಲಿಲ್ಲದ ಸರದಾರ

ಸೋಲಿಲ್ಲದ ಸರದಾರ

74 ವರ್ಷದ ಬಸವರಾಜ ಹೊರಟ್ಟಿ ಅವರು 1980 ರಿಂದ ಸತತವಾಗಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಜೊತೆಗೆ 2018ರಲ್ಲಿ ಆರು ತಿಂಗಳ ಅವಧಿಗೆ ವಿಧಾನ ಪರಿಷತ್‌ ಸಭಾಪತಿಯಾಗಿಯೂ ಕೆಲಸ ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿರುವ ಅನುಭವವಿದೆ. ಪರಿಷತ್‌ ಕಲಾಪದಲ್ಲಿ ಸುದೀರ್ಘವಾಗಿ ಭಾಗವಹಿಸಿದ ದಾಖಲೆ ಕೂಡ ಬಸವರಾಜ ಹೊರಟ್ಟಿ ಅವರ ಹೆಸರಿನಲ್ಲಿದೆ.

ಪ್ರೇಕ್ಷಕರ ಗ್ಯಾಲರಿಯಲ್ಲಿ ಪತ್ನಿ-ಮಕ್ಕಳು

ಪ್ರೇಕ್ಷಕರ ಗ್ಯಾಲರಿಯಲ್ಲಿ ಪತ್ನಿ-ಮಕ್ಕಳು

ಬಸವರಾಜ್ ಹೊರಟ್ಟಿ ಅವರು ಸಭಾಪತಿಗಳಾಗಿ ಆಯ್ಕೆಯಾಗುವ ಕ್ಷಣದಲ್ಲಿ ಪತ್ನಿ ಹೇಮಲತಾ, ಇಬ್ಬರು ಪುತ್ರರು ಹಾಗೂ ಪುತ್ರಿ ಉಪಸ್ಥಿತರಿದ್ದರು. ಪ್ರೇಕ್ಷಕರ ಗ್ಯಾಲರಿಯಿಂದಲೇ ಸಭಾಪತಿ ಆಯ್ಕೆ ಪ್ರಕ್ರಿಯೆಯನ್ನು ವೀಕ್ಷಣೆ ಮಾಡಿದರು.

English summary
JDS member Basavaraj Horatti has been elected as the new Chairperson of the Karnataka Legislative Council. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X