ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಿ ಶ್ರೀನಿವಾಸ್‌, ಶ್ರೀನಿವಾಸ್‌ ಗೌಡ ಅರ್ನಹಗೊಳಿಸಲು ಜೆಡಿಎಸ್‌ ಪತ್ರ

|
Google Oneindia Kannada News

ಬೆಂಗಳುರು, ಜೂ. 13: ಜೆಡಿಎಸ್‌ ಪಕ್ಷದ ವಿಪ್‌ನ್ನು ಉಲ್ಲಂಘಿಸಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ತನ್ನ ಇಬ್ಬರು ಶಾಸಕರಾದ ಗುಬ್ಬಿ ಶ್ರೀನಿವಾಸ್‌ ಹಾಗೂ ಕೋಲಾರದ ಶ್ರೀನಿವಾಸ್‌ ಗೌಡ ವಿರುದ್ಧ ಜೆಡಿಎಸ್‌ ಕಠಿಣ ಕ್ರಮಕ್ಕೆ ಮುಂದಾಗಿದೆ.

ಜೆಡಿಎಸ್‌ನ ಗುಬ್ಬಿ ಶಾಸಕ ಶ್ರೀನಿವಾಸ್‌ ಹಾಗೂ ಕೋಲಾರ ಶಾಸಕ ಶ್ರೀನಿವಾಸ್‌ ಗೌಡ ವಿರುದ್ಧ ಆಜೀವ ಅನರ್ಹತೆ ಮತ್ತು ನಿಷೇಧ ಹೇರುವಂತೆ ಕರ್ನಾಟಕ ವಿಧಾನಸಭಾ ಸ್ಪೀಕರ್‌ಗೆ ಪತ್ರ ಬರೆಯುವುದಾಗಿ ಜನತಾ ದಳ (ಜಾತ್ಯತೀತ) ಅಥವಾ ಜೆಡಿ(ಎಸ್) ತಿಳಿಸಿದೆ. ಜೂ. 10ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಮತ್ತು ಗುಬ್ಬಿ ಶಾಸಕ ಎಸ್‌.ಆರ್ .ಶ್ರೀನಿವಾಸ್ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)ಕ್ಕೆ ಮತ ಹಾಕಿದ್ದರು. ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣದಲ್ಲಿದ್ದ ಏಕೈಕ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋತಿದ್ದರು.

ನೀಚ ಮಟ್ಟಕ್ಕೆ ಇಳಿದ ರಾಜಕೀಯ, ತಿಥಿ ಕಾರ್ಡ್ ಟ್ರೆಂಡಿಂಗ್ನೀಚ ಮಟ್ಟಕ್ಕೆ ಇಳಿದ ರಾಜಕೀಯ, ತಿಥಿ ಕಾರ್ಡ್ ಟ್ರೆಂಡಿಂಗ್

ಈ ಬಗ್ಗೆ ಮಾತನಾಡಿದ ಜೆಡಿಎಸ್‌ನ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ನಾವು ಈಗಾಗಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸುತ್ತಿದ್ದೇವೆ. ಅವರನ್ನು ಆಜೀವ ಅನರ್ಹಗೊಳಿಸಲು ಸ್ಪೀಕರ್‌ಗೆ ಪತ್ರ ಬರೆಯುತ್ತಿದ್ದೇವೆ. ನಮ್ಮ ಬಳಿ ದಾಖಲೆ ಇದೆ ಶ್ರೀನಿವಾಸ್‌ ಹಾಗೂ ಶ್ರೀನಿವಾಸ್‌ ಗೌಡ ಅವರು ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಮತ ಹಾಕಿದ್ದಾರೆ. ಆದ್ದರಿಂದ ಈ ಇಬ್ಬರು ಶಾಸಕರ ಬಳಿ ಯಾವುದೇ ಸ್ಪಷ್ಟೀಕರಣವನ್ನು ಕೇಳುವ ಅಗತ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ . ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಮ್ಮ ಇಬ್ಬರು ಶಾಸಕರನ್ನು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಮತ ಹಾಕುವಂತೆ ಮಾಡಿದರು ಎಂದು ತಿಳಿಸಿದ್ದಾರೆ.

 ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ

ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ

ಜೆಡಿಎಸ್ ಎಂಎಲ್‌ಸಿ ಹಾಗೂ ಅಧಿಕೃತ ವಕ್ತಾರ ಟಿಎ ಶರವಣ ಮಾತನಾಡಿ, ''ಚುನಾವಣೆ ಮುಗಿದ ಕೂಡಲೇ ಪಕ್ಷವು ಇಬ್ಬರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳುವ ಮುನ್ನ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ನಾವು ಗುಬ್ಬಿ ಶ್ರೀನಿವಾಸ್‌ ಹಾಗೂ ಕೋಲಾರದ ಶ್ರೀನಿವಾಸ್‌ಗೌಡರಿಗೂ ಶೋಕಾಸ್ ನೋಟಿಸ್ ನೀಡಿದ್ದು, ಈವರೆಗೆ ಅವರು ನಮಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಆದ್ದರಿಂದ ಕನಿಷ್ಠ ಆರು ವರ್ಷಗಳ ಕಾಲ ಅವರನ್ನು ಅನರ್ಹಗೊಳಿಸುವಂತೆ ಮತ್ತು ಚುನಾವಣೆಯಲ್ಲಿ ಸ್ಪರ್ಧೆಗೆ ನಿಷೇಧ ಹೇರುವಂತೆ ನಾವು ಒತ್ತಾಯಿಸಿದ್ದೇವೆ,'' ಎಂದು ತಿಳಿಸಿದ್ದಾರೆ.

'ಏ ಗುಬ್ಬಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದೇನೆಂದು ಹೇಳು, ಸಾಕು''ಏ ಗುಬ್ಬಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದೇನೆಂದು ಹೇಳು, ಸಾಕು'

 ಖಾಲಿ ಮತಪತ್ರವನ್ನು ಚಲಾವಣೆ

ಖಾಲಿ ಮತಪತ್ರವನ್ನು ಚಲಾವಣೆ

ಗುಬ್ಬಿ ಶ್ರೀನಿವಾಸ್‌ ಅವರು ರಾಜ್ಯಸಭೆ ಚುನಾವಣೆ ದಿನ ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ ಎಂದು ಹೇಳಿದ್ದ ವಿಡಿಯೋ ಹೆಚ್ಚು ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಗುಬ್ಬಿ ಶ್ರೀನಿವಾಸ್ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದಂತೆ ಖಾಲಿ ಮತಪತ್ರವನ್ನು ಚಲಾಯಿಸಿದ್ದಾರೆ ಅಥವಾ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದನ್ನು ನಿರಾಕರಿಸಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಎಲ್ಲಾ ಶಾಸಕರು ಕುಪೇಂದ್ರ ರೆಡ್ಡಿಗೆ ಮತ ಹಾಕಿದ್ದರೆ ಮತ್ತು ಕಾಂಗ್ರೆಸ್ ಜೆಡಿಎಸ್‌ ಪ್ರಯತ್ನವನ್ನು ಬೆಂಬಲಿಸಿದ್ದರೆ ಜೆಡಿಎಸ್‌ಗೆ ರಾಜ್ಯಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಹೊರಗಿನ ಅವಕಾಶವಿತ್ತು.

ಕುಪ್ಪೇಂದ್ರ ರೆಡ್ಡಿಗೆ ರಾಜ್ಯಸಭಾ ಚುನಾವಣೆಯಲ್ಲಿ 30 ಮತಗಳು ಸಿಕ್ಕಿದ್ದವು. ಆದರೆ ಅವರ ಗೆಲುವಿಗೆ 40 ಮತಗಳು ಬೇಕಾಗಿದ್ದವು. ಹಾಗಾಗಿ ಅವರು ಸೋತಿದ್ದರು. ರಾಜ್ಯಸಭಾ ಚುನಾವಣೆಯ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಯು 2023 ರ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಣಾಹಣಿ ನಡೆಯಲಿದೆ ಎನ್ನಲಾಗುತ್ತಿದೆ.

 ಕಾಂಗ್ರೆಸ್‌ನ ಜೈರಾಮ್ ರಮೇಶ್ ಆಯ್ಕೆ

ಕಾಂಗ್ರೆಸ್‌ನ ಜೈರಾಮ್ ರಮೇಶ್ ಆಯ್ಕೆ

ಬಿಜೆಪಿ ರಾಜ್ಯದಿಂದ ರಾಜ್ಯಸಭೆಗೆ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 46 ಮತಗಳು, ಜಗ್ಗೇಶ್ 44 ಮತ್ತು ಲಹರ್ ಸಿಂಗ್ ಸಿರೋಯಾ 33 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದಿದ್ದಾರೆ. ನಾಲ್ಕನೇ ಮತ್ತು ಅಂತಿಮ ಸ್ಥಾನವನ್ನು ಕಾಂಗ್ರೆಸ್‌ನ ಜೈರಾಮ್ ರಮೇಶ್ 46 ಮತಗಳೊಂದಿಗೆ ಗೆದ್ದುಕೊಂಡರೆ, ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ 21 ಮತಗಳನ್ನು ಪಡೆದಿದ್ದರು.

 ಬಿಜೆಪಿಗೆ ಸುಲಭ ಗೆಲುವು

ಬಿಜೆಪಿಗೆ ಸುಲಭ ಗೆಲುವು

ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಮೊದಲು ಜಾತ್ಯತೀತತೆಯ ಹೆಸರಿನಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಲು ಯತ್ನಿಸಿ ನಂತರ ಬಿಜೆಪಿಗೆ ಸುಲಭ ಗೆಲುವು ತಂದುಕೊಟ್ಟಿದೆ. ಜೆಡಿಎಸ್‌ನಿಂದ ಕನಿಷ್ಠ ಐವರು ಶಾಸಕರು ಪಕ್ಷ ತೊರೆಯುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ, ಶ್ರೀನಿವಾಸ್‌ಗೌಡ ಮತ್ತು ಗುಬ್ಬಿ ಶ್ರೀನಿವಾಸ್ ಹೊರತುಪಡಿಸಿ ಬಹುತೇಕರು ತಮ್ಮ ಪಕ್ಷದ ಪರವಾಗಿ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.

English summary
The JDS has taken tough action against its two MLA's, Gubbi Srinivas and Kolar's Srinivas Gowda, who voted in the Rajya Sabha elections in violation of the JDS party whip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X