ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಯ್ ಗುರೂಜಿ ಟೀಕಿಸಿದ್ದ ಕಾಂಗ್ರೆಸ್ ಶಾಸಕರಿಗೆ ಶರವಣ ಬುದ್ದಿಮಾತು

|
Google Oneindia Kannada News

ಬೆಂಗಳೂರು, ಆ 21: ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಬಗ್ಗೆ, ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಮಾಡಿರುವ ಟೀಕೆಯ ಬಗ್ಗೆ ಜೆಡಿಎಸ್ ಮುಖಂಡ ಟಿ.ಎ.ಶರವಣ ಕಿಡಿಕಾರಿದ್ದಾರೆ.

Recommended Video

ಕೊರೊನ ವಾರಿಯರ್ ನನ್ನು ಬಲಿ ಪಡೆದುಕೊಂಡ ಸರ್ಕಾರ..?! | Oneindia Kannada

"ನೀವು ಮಾಸ್ಕ್ ತೊಡದೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದೀರಿ. ಆಶೀರ್ವಾದ ಮಾಡುತ್ತಿದ್ದೀರಿ. ಇನ್ನು ಮದುವೆಯ ಊಟ ಮಾಡಿದ ನಂತರ ತಾವು ತಿಂದುಂಡು ಬಿಟ್ಟ ಆಹಾರವನ್ನು ನಿಮ್ಮ ಶಿಷ್ಯರೂ ಎಲ್ಲರಿಗೂ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು"ಎಂದು ರಘು ಆಚಾರ್, ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.

ಗೌರಿಗದ್ದೆ ವಿನಯ್ ಗುರೂಜಿ ವಿರುದ್ದ ಗಂಭೀರ ಆರೋಪ ಮಾಡಿದ ಶಾಸಕ ಗೌರಿಗದ್ದೆ ವಿನಯ್ ಗುರೂಜಿ ವಿರುದ್ದ ಗಂಭೀರ ಆರೋಪ ಮಾಡಿದ ಶಾಸಕ

ಇದಕ್ಕೆ ಶರವಣ ನೀಡಿದ ಪ್ರತಿಕ್ರಿಯೆ ಹೀಗಿದೆ, " ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಆಚಾರ್ ಅವರ ಹೇಳಿಕೆ ನನ್ನ ಗಮನಕ್ಕೆ ಬಂದಿದೆ, ಅವಧೂತ ವಿನಯ್ ಗುರೂಜಿಯವರ ಅಪಾರ ಶಿಷ್ಯವೃಂದದಲ್ಲಿ ನಾನು ಒಬ್ಬ ಭಕ್ತ.

"ಮೊದಲನೆಯದಾಗಿ ಧಾರ್ಮಿಕ ನಂಬಿಕೆಗಳು ಜನರ ವೈಯಕ್ತಿಕ ವಿಚಾರಕ್ಕೆ ಮತ್ತು ಅವರವರ ಭಾವನೆಗೆ ಒಳಪಟ್ಟಿರುತ್ತದೆ, ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ.

ಗುರುಗಳು ಯಾರಿಗೂ ಕೂಡ ಸೇವಿಸಲು ಒತ್ತಾಯ ಮಾಡಿಲ್ಲ

ಗುರುಗಳು ಯಾರಿಗೂ ಕೂಡ ಸೇವಿಸಲು ಒತ್ತಾಯ ಮಾಡಿಲ್ಲ

"ಗುರುಗಳು ಯಾರಿಗೂ ಕೂಡ ಸೇವಿಸಲು ಒತ್ತಾಯ ಮಾಡಿಲ್ಲ ಹಾಗೂ ನಿಮಗೂ ಕೂಡ ಬಲವಂತವಾಗಿ ತಿಳಿಸಿಲ್ಲ. ನಂಬಿಕೆ ಇರುವವರು ಅದನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ, ನೀವು ಕೇವಲ ಪ್ರಚಾರಕ್ಕಾಗಿ ವ್ಯಕ್ತಿಯ ನಂಬಿಕೆಯ ವಿಚಾರವನ್ನು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ" ಎಂದು ಶರವಣ ಹೇಳಿದ್ದಾರೆ.

ಗುರುಗಳು ಆರೋಗ್ಯದಿಂದ ಇದ್ದಾರೆ

ಗುರುಗಳು ಆರೋಗ್ಯದಿಂದ ಇದ್ದಾರೆ

"ಇನ್ನು ನಮ್ಮ ಆರೋಗ್ಯದ ಬಗ್ಗೆ ಖಂಡಿತವಾಗಿ ಕಾಳಜಿ ಬೇಡ ಗುರುಗಳು ಆರೋಗ್ಯದಿಂದ ಇದ್ದಾರೆ, ಹಾಗಾಗಿ ನಮಗೇನೂ ತೊಂದರೆ ಇಲ್ಲ . ನಮ್ಮ ಆಚಾರ-ವಿಚಾರಗಳ ಬಗ್ಗೆ, ನಂಬಿಕೆಗಳ ಬಗ್ಗೆ, ಕೆಲವರು ಓಲೈಕೆಗಾಗಿ ಕೆಟ್ಟದಾಗಿ ದೊಡ್ಡದಾಗಿ ಬಿಂಬಿಸುತ್ತಾರೆ, ಹಾಗಾಗಿ ಇಂತಹ ವಿಚಾರಗಳನ್ನು ಪ್ರಚಾರಕ್ಕಾಗಿ ಈ ತರಹದ ಮಾತುಗಳನ್ನು ನಿಲ್ಲಿಸಿ" ಶರವಣ.

ನಿಮ್ಮ ಪಕ್ಷದ ಹಿರಿಯ ನಾಯಕರನ್ನು ಕೇಳಿ ತಿಳಿದು ಮಾತನಾಡಿ

ನಿಮ್ಮ ಪಕ್ಷದ ಹಿರಿಯ ನಾಯಕರನ್ನು ಕೇಳಿ ತಿಳಿದು ಮಾತನಾಡಿ

"ನಿಮಗೇನಾದರೂ ವಿನಯ್ ಗುರೂಜಿ ರವರ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದರೆ ನಿಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕೇಳಿ ತಿಳಿದು ಮಾತನಾಡಿ ನೀವು ಗುರುಗಳ ಬಗ್ಗೆ ಇತರ ಹಗುರವಾಗಿ ಮಾತನಾಡಿರುವುದು ನನ್ನ ಮನಸ್ಸಿಗೆ ನೋವಾಗಿದೆ ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ" - ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ.

ರಘು ಆಚಾರ್ ಬೇಸರ ವ್ಯಕ್ತ ಪಡಿಸಿದ್ದರು

ರಘು ಆಚಾರ್ ಬೇಸರ ವ್ಯಕ್ತ ಪಡಿಸಿದ್ದರು

"ನಮ್ಮ ಉಸಿರು ಅನ್ಯರಿಗೆ ತಗುಲದಂತೆ ಮಾಸ್ಕ್ ಧರಿಸುವುದು ಹಾಗೂ ನಮ್ಮ ಉಗುಳು ಅನ್ಯರಿಗೆ ತಾಗದಂತೆ ವರ್ತಿಸುವುದು. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಮಹಾಮಹೀಮರಾದ ತಮ್ಮಿಂದ ಹಾಗೂ ತಮ್ಮ ಶಿಷ್ಯರಿಂದ ಈ ಎರಡು ನಿಯಮಗಳ ಬಹಿರಂಗ ಉಲ್ಲಂಘನೆಗೊಂಡು ನಿಜಕ್ಕೂ ಅಚ್ಚರಿ ಹಾಗೂ ಗಾಬರಿ ಮೂಡಿತು" ಎಂದು ರಘು ಆಚಾರ್ ಬೇಸರ ವ್ಯಕ್ತ ಪಡಿಸಿದ್ದರು.

English summary
JDS Leader TA Sharavana Reply To MLC Raghu Achar Who Commented On Vinay Guruji,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X